ನವದೆಹಲಿ: ರಂಜಾನ್ ಮಾಸಾರಂಭ(Beginning of Ramzan)ದ ಪ್ರಯುಕ್ತ ಪ್ರಧಾನಿ ಮೋದಿ(Narendra Modi), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಸೇರಿದಂತೆ ಅನೇಕ ಗಣ್ಯರು ಟ್ವೀಟ್ ಮೂಲಕ ಸಮಸ್ತ ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ‘ಸಮಸ್ತ ಮುಸ್ಲಿಮರಿಗೆ ಪವಿತ್ರ ರಂಜಾನ್ ಹಬ್ಬ(Ramadan 2022)ದ ಶುಭಾಶಯಗಳು. ಈ ಪವಿತ್ರ ತಿಂಗಳು ಬಡವರ ಸೇವೆ ಮಾಡಲು ಜನರನ್ನು ಪ್ರೇರೇಪಿಸಲಿ. ನಮ್ಮ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ’ ಎಂದು ಹೇಳಿದ್ದಾರೆ.
Greetings on the commencement of Ramzan. pic.twitter.com/Q5YaWzaz38
— Narendra Modi (@narendramodi) April 2, 2022
ಇದನ್ನೂ ಓದಿ: ಕರೋನಾದ ಈ ಹೊಸ ರೂಪಾಂತರವು ಒಮಿಕ್ರಾನ್ನಿಂದ ಎಷ್ಟು ಅಪಾಯಕಾರಿ ? WHO ಹೇಳಿದ್ದೇನು ?
‘ರಂಜಾನ್ ಶುಭಾಶಯಗಳು. ಈ ಪವಿತ್ರ ಮಾಸವು ಎಲ್ಲರಿಗೂ ಉತ್ತಮ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ತರಲಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ(Ramzan Greetings).
Ramzan Mubarak! May this pious month bring good health, peace and prosperity to all. pic.twitter.com/1o5WUz7yxm
— Rahul Gandhi (@RahulGandhi) April 2, 2022
1 ತಿಂಗಳ ಉಪವಾಸ
ಮುಸ್ಲಿಂ ಸಮುದಾಯದ ಪವಿತ್ರ ಮಾಸವಾದ ರಂಜಾನ್ ಆರಂಭವಾಗಿದೆ. ಈ 1 ತಿಂಗಳಲ್ಲಿ ಮುಸ್ಲಿಂ ಸಮುದಾಯದ ಜನರು ಉಪವಾಸ(Fasting in Islam)ವನ್ನು ಆಚರಿಸುತ್ತಾರೆ ಮತ್ತು ಅಲ್ಲಾನನ್ನು ಪೂಜಿಸುತ್ತಾರೆ. ಇಸ್ಲಾಮಿಕ್ ತಿಂಗಳ ಪ್ರಕಾರ ರಂಜಾನ್ 9ನೇ ತಿಂಗಳಲ್ಲಿ ಬರುತ್ತದೆ. ಈ ಬಾರಿ ರಂಜಾನ್ ಏಪ್ರಿಲ್ 2ರ ಶನಿವಾರದಿಂದ ಆರಂಭವಾಗಿದೆ. ಈ ವಿಶೇಷ ಸಂದರ್ಭದಲ್ಲಿ 29-30 ದಿನಗಳವರೆಗೆ ಉಪವಾಸವನ್ನು ಮಾಡಲಾಗುತ್ತದೆ. ತದನಂತರ ಈದ್-ಉಲ್-ಫಿತರ್ ಆಚರಣೆಯೊಂದಿಗೆ ರಂಜಾನ್(Ramadan) ಕೊನೆಗೊಳ್ಳುತ್ತದೆ.
ಇದನ್ನೂ ಓದಿ: Petrol-diesel price: ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ, 13 ದಿನಗಳಲ್ಲಿ 11 ಬಾರಿ ಏರಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.