ನವದೆಹಲಿ: PM Modi Dedicated 35 New Crop Verities - ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ದೇಶದ ಕೃಷಿ ಜಗತ್ತಿಗೆ (Agriculture World) ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ, ಪಿಎಂ ಮೋದಿ 35 ಬಗೆಯ ಹೊಸ ಬೆಳೆಗಳನ್ನು ದೇಶಕ್ಕೆ ಅರ್ಪಿಸಿದ್ದಾರೆ. ಪಿಎಂ ಮೋದಿ ತಮ್ಮ ಭಾಷಣದಲ್ಲಿ ಬೆಳೆಯನ್ನು ಎಷ್ಟು ಆಳವಾಗಿ ಬೆಳೆಸಿದರೆ, ಆ ಬೆಳೆಯ ಇಳುವರಿ ಉತ್ತಮವಾಗಿರುತ್ತದೆ ಎಂಬುದರ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಟಿಕ್ ಸ್ಟ್ರೆಸ್ ಟಾಲರೆನ್ಸ್ ರಾಯ್‌ಪುರದ ಹೊಸ ಕ್ಯಾಂಪಸ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ.
35 crop varieties with special traits are being dedicated to the nation. Watch. https://t.co/uVEZATpBZ2
— Narendra Modi (@narendramodi) September 28, 2021
35 ಹೊಸ ಬೆಳೆಗಳ ವರೈಟಿ
ಪಿಎಂ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಿಂದ ಈ ಮಹತ್ವದ ಕೃಷಿ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ತಮ್ಮ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ, ಈ ಹೊಸ ಬೆಳೆಗಳ ವೈವಿಧ್ಯತೆಯನ್ನು ICMR ಸಾಕಷ್ಟು ಸಂಶೋಧನೆಯ ನಂತರ ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ. ಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆಯ ಪರಿಣಾಮವು ಈ ಹೊಸ ಬೆಳೆಗಳ ಮೂಲಕ ಕಡಿಮೆಯಾಗುತ್ತದೆ. ಪ್ರಧಾನಿ ಮೋದಿ ಪ್ರಕಾರ, ತೊಗರಿ ಬೆಳೆಯ ಇಳುವರಿಯನ್ನು ಹೆಚ್ಚಿಸಲು ಈ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ. ಇದೆ ವೇಳೆ, ಬೇಗನೆ ಬೇಯುವ ಅಕ್ಕಿಯ ಹೊಸ ಬೆಳೆಯನ್ನು ಸಹ ಇದರಲ್ಲಿ ಸೇರಿಸಲಾಗಿದೆ. ಈ 35 ಹೊಸ ಬೆಳೆಗಳ ಪಟ್ಟಿಯಲ್ಲಿ ರಾಗಿ, ಜೋಳ, ಹುರುಳಿ ಮುಂತಾದ ವಿವಿಧ ತಳಿಗಳ ಬೆಳೆಗಳಿವೆ.
ಪ್ರಧಾನಿ ಮೋದಿ ಸಂಭಾಷಣೆಯ ಮುಖ್ಯಾಂಶಗಳು
ಪಿಎಂ ಮೋದಿ ತಮ್ಮ ಭಾಷಣದಲ್ಲಿ, ಹೊಸ ತಳಿಯ ಬೆಳೆಗಳಲ್ಲಿ ಹೆಚ್ಚು ಪೌಷ್ಟಿಕ ಅಂಶವಿದೆ ಎಂದು ಹೇಳಿದ್ದಾರೆ. ರೈತರ ಅಗತ್ಯಗಳನ್ನು ಪೂರೈಸುವುದು ನಮ್ಮ ಆದ್ಯತೆಯಾಗಿದೆ. ಇದಕ್ಕಾಗಿ ಕೃಷಿ ಮಾರುಕಟ್ಟೆಗಳ ಆಧುನೀಕರಣದ ಕೆಲಸ ನಡೆಯುತ್ತಿದೆ. ಎಲ್ಲ ರೈತರ ಹಾದಿಯನ್ನು ಸುಲಭಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಪ್ರಧಾನಿಯವರ ಭಾಷಣದಲ್ಲಿ 35 ಹೊಸ ಬೆಳೆಗಳು ರೈತರ ಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಹೇಳಲಾಗಿದೆ.
ತಮ್ಮ ಭಾಷಣದಲ್ಲಿ, ಪ್ರಧಾನ ಮಂತ್ರಿಗಳು (PM Narendra Modi) ವಿವಿಧ ಹೊಸ ಬೆಳೆಗಳು ಹವಾಮಾನ ವೈಪರೀತ್ಯದ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಕೃಷಿ ಸಮ್ಮಾನ್ ನಿಧಿ ಕುರಿತು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ಮೊತ್ತದಿಂದ ಸಣ್ಣ ರೈತರು ಸಾಕಷ್ಟು ಲಾಭ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ-Best Quit-Smoking Tips: ಧೂಮಪಾನ ಚಟದಿಂದ ಹೊರಬರಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ
ಈ ಹೊಸ ಬೆಳೆಗಳ ವೈಶಿಷ್ಟ್ಯ ಏನು?
ಪ್ರಧಾನ ಮಂತ್ರಿ ದೇಶಕ್ಕೆ ಹಲವು ಬೆಳೆಗಳ ಉಡುಗೊರೆಗಳನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬರಗಾಲದ ಹೊಡೆತವನ್ನು ಸುಲಭವಾಗಿ ಹೊತ್ತುಕೊಳ್ಳುವ ತೊಗರಿ ಬೆಳೆ ಕೂಡ ಈ ಪಟ್ಟಿಯಲ್ಲಿ ಇರಲಿದೆ. ಇದಲ್ಲದೇ, ರೋಗ ನಿರೋಧಕತೆಯಿರುವ ಅಕ್ಕಿಯನ್ನು ಸಹ ತಯಾರಿಸಲಾಗಿದೆ. ಇದಲ್ಲದೇ, ರಾಗಿ, ಮೆಕ್ಕೆಜೋಳ, ಹುರುಳಿ ಮುಂತಾದ ವಿವಿಧ ಬಗೆಯ ಬೆಳೆಗಳು ಕೂಡ ದೇಶಕ್ಕೆ ಲಭ್ಯವಾಗಲಿವೆ.
ಈ ವಿಶೇಷ ತಳಿಗಳ ಬೆಳೆಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICMR) ಅಭಿವೃದ್ಧಿಪಡಿಸಿದೆ. ಇವು ಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆಯ ಅವಳಿ ಸವಾಲುಗಳನ್ನು ನಿಭಾಯಿಸುವ ಗುರಿಯನ್ನು ಹೊಂದಿವೆ. ಈ ಪ್ಯಾನ್-ಇಂಡಿಯಾ ಕಾರ್ಯಕ್ರಮವನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICMR), ರಾಜ್ಯ ಮತ್ತು ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳು (Agriculture Universities)ಮತ್ತು ಕೃಷಿ ವಿಜ್ಞಾನ ಕೇಂದ್ರಗಳು (Krushi Vigyan Kendra) ಜಂಟಿಯಾಗಿ ಆಯೋಜಿಸಿವೆ.
ಇದನ್ನೂ ಓದಿ-ವಿದೇಶಕ್ಕೆ ಹೋಗಬಯಸುವ ಭಾರತೀಯರಿಗೆ ಶಾಕ್! WHOನಿಂದ ಕೊವ್ಯಾಕ್ಸಿನ್ ಮಾನ್ಯತೆಗೆ ವಿಳಂಬ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.