Naxal Attack: 'ಹುತಾತ್ಮರ ಬಲಿದಾನ ಸ್ಮರಿಸಲಾಗುವುದು' ಛತ್ತೀಸ್ಗಡ್ ನಕ್ಸಲ್ ದಾಳಿಯನ್ನು ಖಂಡಿಸಿದ ಪಿಎಂ ಮೋದಿ

Dantewada Naxal Attack:ಛತ್ತೀಸ್‌ಗಢದಲ್ಲಿ ಡಿಆರ್‌ಜಿ ತಂಡದ ಮೇಲೆ ನಕ್ಸಲೀಯರು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 10 ಯೋಧರು ಹಾಗೂ ಓರ್ವ ಚಾಲಕ ಹುತಾತ್ಮರಾಗಿದ್ದಾರೆ.  

Written by - Nitin Tabib | Last Updated : Apr 26, 2023, 07:42 PM IST
  • ಘಟನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರೊಂದಿಗೆ ಮಾತನಾಡಿದ್ದಾರೆ
  • ಮತ್ತು ಹುತಾತ್ಮ ಯೋಧರ ಬಗ್ಗೆ ಮಾಹಿತಿ ಪಡೆದಿದ್ದಾರೆ ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ.
Naxal Attack: 'ಹುತಾತ್ಮರ ಬಲಿದಾನ ಸ್ಮರಿಸಲಾಗುವುದು' ಛತ್ತೀಸ್ಗಡ್ ನಕ್ಸಲ್ ದಾಳಿಯನ್ನು ಖಂಡಿಸಿದ ಪಿಎಂ ಮೋದಿ title=

Chattisgarh Naxal Attack: ಛತ್ತೀಸ್‌ಗಢದ ದಂಟೆವಾಡಾ ಜಿಲ್ಲೆಯಲ್ಲಿ ಬುಧವಾರ (ಏಪ್ರಿಲ್ 26) ನಡೆದ ಮಾವೋವಾದಿಗಳ ಐಇಡಿ ದಾಳಿಯಲ್ಲಿ 10 ಡಿಆರ್‌ಜಿ ಜವಾನರು ಮತ್ತು ಚಾಲಕ ಹುತಾತ್ಮರಾಗಿದ್ದಾರೆ. ಜಿಲ್ಲೆಯ ಅರನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲೀಯರು ನೆಲಬಾಂಬ್ ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ 10 ಭದ್ರತಾ ಪಡೆ ಸಿಬ್ಬಂದಿ ಹಾಗೂ ಓರ್ವ ಚಾಲಕ ಹುತಾತ್ಮರಾಗಿದ್ದರು. ಈ ದಾಳಿಯನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.

ದಾಂತೇವಾಡದಲ್ಲಿ ಛತ್ತೀಸ್‌ಗಢ ಪೊಲೀಸರ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸುತ್ತೇವೆ. ಅವರ ತ್ಯಾಗ ಸದಾ ಸ್ಮರಣೀಯ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಪ್ರಧಾನಿ ಬರೆದುಕೊಂಡಿದ್ದಾರೆ

ದಾಳಿ ಖಂಡಿಸಿದ ರಾಷ್ಟ್ರಪತಿಗಳು
ಛತ್ತೀಸ್ಗಢ ದಲ್ಲಿ ನಡೆದ ನಕ್ಸಲ್ ದಾಳಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಖಂಡಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಪೊಲೀಸ್ ಪಡೆಗಳ ಮೇಲಿನ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ. ದೇಶ ರಕ್ಷಣೆಯಲ್ಲಿ ಸರ್ವೋಚ್ಚ ತ್ಯಾಗ ಬಲಿದಾನ ಮಾಡಿದ ವೀರ ಸೈನಿಕರ ಕುಟುಂಬಗಳಿಗೆ ಮತ್ತು ಪ್ರೀತಿಪಾತ್ರರಿಗೆ ಎಲ್ಲಾ ದೇಶವಾಸಿಗಳ ಪರವಾಗಿ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ-Dantewada Naxal Attack: 13 ವರ್ಷಗಳಲ್ಲಿ 9 ನಕ್ಸಲ್ ದಾಳಿಗಳು 200 ಪೊಲೀಸರು ಹುತಾತ್ಮ, ಇಲ್ಲಿದೆ ಡೀಟೈಲ್ಸ್

IED ದಾಳಿ
ಛತ್ತೀಸ್‌ಗಢದಲ್ಲಿ ಕಾರ್ಯಾಚರಣೆ ಮುಗಿಸಿ ವಾಪಸಾಗುತ್ತಿದ್ದ ಡಿಆರ್‌ಜಿ ಯೋಧರ ಮೇಲೆ ದಾಳಿ ನಡೆದಿದೆ. ಘಟನೆಯ ಕುರಿತು ಮಾತನಾಡಿರುವ ಬಸ್ತಾರ್ ರೇಂಜ್‌ನ ಪೊಲೀಸ್ ಮಹಾನಿರೀಕ್ಷಕ ಸುಂದರರಾಜ್, ನಾವು ಸುಳಿವಿನ ಆಧಾರದ ಮೇಲೆ ಅಭಿಯಾನವನ್ನು ಆರಂಭಿಸಿದ್ದೇವು ಎಂದು ಹೇಳಿದ್ದಾರೆ. ತಂಡ ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದಾಗ ವಾಹನಕ್ಕೆ ಐಇಡಿಗೆ ಡಿಕ್ಕಿ ಹೊಡೆದಿದೆ. ವಾಹನದಲ್ಲಿ 10 ಜಿಲ್ಲಾ ರಿಸರ್ವ್ ಗಾರ್ಡ್ ಜವಾನರಿದ್ದು, ಒಬ್ಬರು ಚಾಲಕರಾಗಿದ್ದರು. ಹುತಾತ್ಮ ಯೋಧರ ಮೃತದೇಹಗಳನ್ನು ಮರಳಿ ತರಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಛತ್ತೀಸ್‌ಗಢದ ದಾಂತೇವಾಡದಲ್ಲಿ ನಕ್ಸಲರ ದಾಳಿಗೆ 10 ಪೊಲೀಸರ ಬಲಿ

ಸಿಎಂ ಜೊತೆ ಅಮಿತ್ ಶಾ ಚರ್ಚೆ
ಘಟನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಹುತಾತ್ಮ ಯೋಧರ ಬಗ್ಗೆ ಮಾಹಿತಿ ಪಡೆದಿದ್ದಾರೆ ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ. ಇದಕ್ಕೂ ಮೊದಲು, ನಕ್ಸಲೀಯರು ಅಲ್ಲಿ ಅಡಗಿರುವ ಬಗ್ಗೆ ಮಾಹಿತಿ ಬಂದಿತ್ತು ಎಂದು ಛತ್ತೀಸ್‌ಗಢದ ಗೃಹ ಸಚಿವ ತಾಮ್ರಧ್ವಜ್ ಸಾಹು ಹೇಳಿದ್ದಾರೆ, ನಂತರ ಡಿಆರ್‌ಜಿ ಜವಾನರು ಅಲ್ಲಿಗೆ ತಲುಪಿದ್ದಾರೆ. ಕಾರ್ಯಾಚರಣೆ ಮುಗಿಸಿ ವಾಪಸಾಗುತ್ತಿದ್ದಾಗ ಅವರ ವಾಹನ ಐಇಡಿಗೆ ಡಿಕ್ಕಿಹೊಡೆದಿದೆ. ಘಟನೆಯಲ್ಲಿ 10 ಯೋಧರು ಹಾಗೂ ಚಾಲಕ ಹುತಾತ್ಮರಾಗಿದ್ದಾರೆ. ಈಗಾಗಲೇ ಹೆಚ್ಚುವರಿ ಪಡೆಯನ್ನು ಅಲ್ಲಿಗೆ ಕಳುಹಿಸಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ. ಕಳೆದ 4 ವರ್ಷಗಳಲ್ಲಿ ನಕ್ಸಲೀಯರ ಓಡಾಟ ಶೇ.60ರಷ್ಟು ಕಡಿಮೆಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News