PM Kisan Scheme: Good News! ಯಾವ ತಿಂಗಳಲ್ಲಿ ಬರಲಿದೆ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ?

PM Kisan 11th Installment: ಕೇಂದ್ರ ಸರ್ಕಾರದ ವತಿಯಿಂದ ಇದುವರೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 10 ಕಂತಿನ ಹಣ ರೈತರ ಖಾತೆಗೆ ಜಮಾ ಆಗಿದ್ದು, ಶೀಘ್ರದಲ್ಲೇ 11ನೇ ಕಂತಿನ ಹಣವೂ ರೈತರ ಖಾತೆಗೆ ಸೇರಲಿದೆ.

Written by - Nitin Tabib | Last Updated : Feb 5, 2022, 09:37 PM IST
  • ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಪಿಎಂ ಕಿಸಾನ್ 11ನೇ ಕಂತು
  • ಯಾವ ತಿಂಗಳು ಈ ಕಂತು ಬಿಡುಗಡೆಯಾಗಲಿದೆ ತಿಳಿಯಲು ಸುದ್ದಿ ಓದಿ.
  • ಒಂದು ವೇಳೆ ಹೆಸರು ನೋಂದಾಯಿಸದೆ ಇದ್ದರೆ, ಕೂಡಲೇ ಹೆಸರು ನೊಂದಾಯಿಸಿಕೊಳ್ಳಿ.
PM Kisan Scheme: Good News! ಯಾವ ತಿಂಗಳಲ್ಲಿ ಬರಲಿದೆ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ? title=
PM Kisan 11th Installment (File Photo)

PM Kisan Yojana: ನೀವು ಕೂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರದಿಂದ (Modi Government) ಇದುವರೆಗೆ ಈ ಯೋಜನೆಯ10 ಕಂತಿನ ಹಣ ರೈತರ ಖಾತೆಗೆ ಜಮಾ ಆಗಿದ್ದು, ಶೀಘ್ರದಲ್ಲೇ 11ನೇ ಕಂತಿನ ಹಣವೂ ರೈತರ ಖಾತೆಗೆ ಸೇರಲಿದೆ. ನೀವು ಇನ್ನೂ ಈ ಯೋಜನೆಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸದಿದ್ದರೆ, ತಕ್ಷಣ ಅದನ್ನು ಮಾಡಿ. ಈ ಯೋಜನೆಯ 11ನೇ ಕಂತಿನ ಹಣವನ್ನು ಯಾವ ದಿನ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಜನವರಿ 1ಕ್ಕೆ 10ನೇ ಕಂತು ಬಿಡುಗಡೆಯಾಗಿತ್ತು (PM KISAN SAMMAN NIDHI)
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತಿನ ಹಣವನ್ನು(PM Kisan Installment) ಜನವರಿ 1, 2022 ರಂದು ರೈತರ ಖಾತೆಗೆ ವರ್ಗಾಯಿಸಲಾಗಿದೆ. ದೇಶದ ಕೋಟ್ಯಂತರ ರೈತರ ಖಾತೆಗಳಿಗೆ 2000 ರೂ.ಗಳ ಕಂತು ವರ್ಗಾವಣೆಯಾಗಿದೆ.

ಮಾರ್ಚ್ ಬಳಿಕ ವರ್ಗಾವಣೆಯಾಗಲಿದೆ ಹಣ  (PM  Kisan Samman Nidhi Scheme)
ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ಆರ್ಥಿಕ ವರ್ಷದಲ್ಲಿ ರೈತರಿಗೆ ಮೊದಲ ಕಂತಿನ ಹಣವನ್ನು ಏಪ್ರಿಲ್ 1 ರಿಂದ ಜುಲೈ 31 ರ ನಡುವೆ ನೀಡಲಾಗುತ್ತದೆ. ಇದೆ ವೇಳೆ, ಎರಡನೇ ಕಂತಿನ ಹಣವನ್ನು ಆಗಸ್ಟ್ 1 ಮತ್ತು ನವೆಂಬರ್ 30 ರ ನಡುವೆ ವರ್ಗಾಯಿಸಲಾಗುತ್ತದೆ. ಮೂರನೇ ಕಂತಿನ ಹಣವನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ. ಇದೇ ಸರಣಿಯಲ್ಲಿ ಏಪ್ರಿಲ್ ಆರಂಭದಲ್ಲಿ ರೈತರ ಖಾತೆಗೆ 11ನೇ ಕಂತಿನ ಹಣ ವರ್ಗಾವಣೆಯಾಗಲಿದೆ.

ಸುಲಭವಾಗಿ ನಿಮ್ಮ ಹೆಸರನ್ನು ನೊಂದಾಯಿಸಬಹುದು
ನೀವು ಕೂಡ ಇದುವರೆಗೆ ಈ ಯೋಜನೆಯಲ್ಲಿ ನಿಮ್ಮ ಹೆಸರನ್ನುನೋಂದಾಯಿಸದಿದ್ದರೆ, ನೀವು ಶೀಘ್ರದಲ್ಲೇ ನೋಂದಾಯಿಸಿಕೊಳ್ಳಬೇಕು. ಈ ಯೋಜನೆಗೆ  ಹೆಸರು ನೋಂದಾಯಿಸುವ ಪ್ರಕ್ರಿಯೆ ತುಂಬಾ ಸುಲಭವಾಗಿದೆ. ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಇದಲ್ಲದೆ, ನೀವು ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಕೂಡ ನಿಮ್ಮ  ಹೆಸರನ್ನು  ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ-ರಸ್ತೆ ನಿರ್ಮಾಣದಲ್ಲಿ ಹಣ ಹೂಡಿಕೆ ಮಾಡಿ ನೀವೂ ಕೂಡ ಹಣ ಗಳಿಕೆ ಮಾಡಬಹುದು : ಗಡ್ಕರಿ

1. ಮೊದಲನೆಯದಾಗಿ ನೀವು PM Kisan Yojana ನ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಬೇಕು.
2. ಅದರ ಮುಖಪುಟದಲ್ಲಿ, ನೀವು ರೈತರ ಕಾರ್ನರ್ ಆಯ್ಕೆಯನ್ನು ನೋಡುತ್ತೀರಿ.
3. ಇದರ ನಂತರ, ರೈತರ ಕಾರ್ನರ್ ವಿಭಾಗದಲ್ಲಿ, ನೀವು ಫಲಾನುಭವಿಗಳ ಪಟ್ಟಿಯ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
4. ನಂತರ ನೀವು ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು.
5. ಇದರ ನಂತರ ನೀವು ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ. ಅದರ ನಂತರ, ಹೊಸ ಪರದೆಯು ತೆರೆಯುತ್ತದೆ. ಇದರಲ್ಲಿ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸುತ್ತದೆ, ಅದರಲ್ಲಿ ನಿಮ್ಮ ಹೆಸರನ್ನು ನೀವು ಪರಿಶೀಲಿಸಬಹುದು.

ಇದನ್ನೂ ಓದಿ-ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ: ಸಿಎಂ ಬೊಮ್ಮಾಯಿ ಸಂತಾಪ

ಈ ರೀತಿ ದೂರು ದಾಖಲಿಸಿ
ಆದರೆ, ರೈತರ ಸಮಸ್ಯೆ ನಿವಾರಣೆಗೆ ಸಹಾಯವಾಣಿ ಸಂಖ್ಯೆಯನ್ನೂ ನೀಡಲಾಗಿದೆ. ರೈತರು ತಮ್ಮ ದೂರುಗಳನ್ನು ಈ ಸಂಖ್ಯೆಗಳಲ್ಲಿ ದಾಖಲಿಸಬಹುದು.
1. PM ಕಿಸಾನ್ ಮತ್ತೊಂದು ಸಹಾಯವಾಣಿಯನ್ನು ಹೊಂದಿದೆ: 0120-6025109
2. PM ಕಿಸಾನ್ ಸಹಾಯವಾಣಿ ಸಂಖ್ಯೆ:155261
3. PM ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆಗಳು: 011—23381092, 23382401 
4. PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
5. PM ಕಿಸಾನ್‌ನ ಹೊಸ ಸಹಾಯವಾಣಿ: 011-24300606
6. ಇಮೇಲ್ ಐಡಿ: pmkisan-ict@gov.in 

ಇದನ್ನೂ ಓದಿ-ಶಿಕ್ಷಣ ವ್ಯವಸ್ಥೆಯಲ್ಲಿ ಮತೀಯವಾದ ತುರುಕಲು ಸಿದ್ದರಾಮಯ್ಯ ಪ್ರಯತ್ನ: ಬಿಜೆಪಿ ಆರೋಪ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News