Railway ವಿಭಾಗದ ವಿಶೇಷ ವ್ಯವಸ್ಥೆ, ಪ್ಲಾಟ್ಫಾರ್ಮ್ ಗೆ ರೈಲು ಆಗಮಿಸುತ್ತಿದ್ದಂತೆ 'ಆನ್' ಆಗುವ ಲೈಟ್ ಗಳು ನಿರ್ಗಮಿಸುತ್ತಿದ್ದಂತೆ 'ಆಫ್' ಆಗುತ್ತವೆ

ಪಶ್ಚಿಮ ಮಧ್ಯ ರೈಲ್ವೆ ವಿದ್ಯುತ್ ಉಳಿಸಲು ವಿಶೇಷ ತಯಾರಿ ನಡೆಸಿದೆ. ಜಬಲ್ಪುರ ರೈಲ್ವೆ ನಿಲ್ದಾಣದಲ್ಲಿ, ರೈಲು ಪ್ಲಾಟ್‌ಫಾರ್ಮ್‌ಗೆ ಆಗಮಿಸುತ್ತಿದ್ದಂತೆ ಕೂಡಲೇ ಅಲ್ಲಿನ ಎಲ್ಲಾ ದೀಪಗಳು ಹೊತ್ತಿ ಉರಿಯಲಾರಂಭಿಸುತ್ತವೇ ಮತ್ತು ರೈಲು ನಿರ್ಗಮಿಸಿದ ತಕ್ಷಣ ಶೇ.70 ದೀಪಗಳು ಆಫ್ ಆಗುತ್ತವೆ.

Last Updated : Jul 7, 2020, 03:18 PM IST
Railway ವಿಭಾಗದ ವಿಶೇಷ ವ್ಯವಸ್ಥೆ, ಪ್ಲಾಟ್ಫಾರ್ಮ್ ಗೆ ರೈಲು ಆಗಮಿಸುತ್ತಿದ್ದಂತೆ 'ಆನ್' ಆಗುವ ಲೈಟ್ ಗಳು ನಿರ್ಗಮಿಸುತ್ತಿದ್ದಂತೆ 'ಆಫ್' ಆಗುತ್ತವೆ title=

ನವದೆಹಲಿ: ವಿದ್ಯುತ್ ಉಳಿತಾಯದ ಕುರಿತು ಹಲವು ಸಂಗತಿಗಳನ್ನು ಹೇಳಲಾಗುತ್ತದೆ ಹಾಗೂ ಹಲವಾರು ಅಭಿಯಾನಗಳನ್ನು ಸಹ ನಡೆಸಲಾಗುತ್ತದೆ. ಏತನ್ಮಧ್ಯೆ, ವಿದ್ಯುತ್ ಉಳಿಸಲು ಪಶ್ಚಿಮ ಮಧ್ಯ ರೈಲ್ವೆ ಅಳವಡಿಸಿಕೊಂಡ ತಂತ್ರಜ್ಞಾನ ಎಲ್ಲರ ಗಮನ ಸೆಳೆದಿದೆ. ಮಧ್ಯಪ್ರದೇಶದ ಜಬಲ್ಪುರ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ನಲ್ಲಿ ಒಂದು ವಿಶಿಷ್ಟ ವ್ಯವಸ್ಥೆ ಮಾಡಲಾಗಿದೆ. ರೈಲು ಪ್ಲಾಟ್‌ಫಾರ್ಮ್‌ಗೆ ಆಗಮಿಸುತ್ತಿದ್ದಂತೆ. ಪ್ಲಾಟ್ ಫಾರ್ಮ್ ದೀಪಗಳು ಹೊತ್ತಿ ಉಳಿಯಲು ಆರಂಭಿಸುತ್ತವೆ. ರೈಲು ಪ್ಲಾಟ್‌ಫಾರ್ಮ್‌ನಿಂದ ನಿರ್ಗಮಿಸಿದ ತಕ್ಷಣ ಪ್ಲಾಟ್ ಫಾರ್ಮ್ ನಲ್ಲಿರುವ ಶೇ.70 ದೀಪಗಳು ಆಫ್ ಆಗುತ್ತವೆ.

ಎಷ್ಟು ದೀಪಗಳು ಹೊತ್ತಿ ಉರಿಯುತ್ತವೆ?
ಸಾಮಾನ್ಯವಾಗಿ ರೈಲ್ವೆ ನಿಲ್ದಾಣದಲ್ಲಿ, ಶೇ.30ರಷ್ಟು  ದೀಪಗಳು ಉರಿಯುತ್ತಲೇ ಇರುತ್ತವೆ. ರೈಲು ಆಗಮಿಸುತ್ತಿದ್ದಂತೆ ತಕ್ಷಣ ಶೇ.100 ರಷ್ಟು ದೀಪಗಳು ಬೆಳಗುತ್ತವೆ ಮತ್ತು ರೈಲು ನಿಲ್ದಾಣದಿಂದ ನಿರ್ಗಮಿಸಿದ ನಂತರೆ ಕೂಡಲೇ 70 ಪ್ರತಿಶತ ದೀಪಗಳನ್ನು ಬಂದ್ ಆಗುತ್ತವೆ.ನಿಲ್ದಾಣದಲ್ಲಿ ಕೇವಲ ಶೇ.30 ರಷ್ಟು ದೀಪಗಳು ಮಾತ್ರ ಎಲ್ಲಾ ಸಮಯದಲ್ಲೂ ಬೆಳಗುತ್ತವೆ. ಇಲ್ಲಿಯವರೆಗೆ, ಎಲ್ಲಾ ದೀಪಗಳು ರೈಲ್ವೆ ನಿಲ್ದಾಣದಲ್ಲಿ ಹೊತ್ತಿ ಉರಿಯುತ್ತಿದ್ದವು. ಆದ್ರರೆ ಇದೀಗ ಈ ಹೊಸ ವ್ಯವಸ್ಥೆಯಿಂದ ಸಾಕಷ್ಟು ವಿದ್ಯುತ್ ಉಳಿಸಲಾಗುತ್ತಿದೆ.

ಏನಿದು ಹೊಸ ಸಿಸ್ಟಮ್ 
ಪಶ್ಚಿಮ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯಾಂಕಾ ದೀಕ್ಷಿತ್ ಅವರ ಪ್ರಕಾರ, ಜನರಲ್ ಮ್ಯಾನೇಜರ್ ಶೈಲೇಂದ್ರ ಕುಮಾರ್ ಸಿಂಗ್ ಅವರ ನಿರ್ದೇಶನದ ಮೇರೆಗೆ ಈ ವ್ಯವಸ್ಥೆ ರೂಪಿಸಲಾಗಿದೆ. ಇದರ ಅಡಿಯಲ್ಲಿ, ಪ್ಲಾಟ್‌ಫಾರ್ಮ್‌ನ ಬೆಳಕಿನ ವ್ಯವಸ್ಥೆಯನ್ನು ಹೋಮ್ ಅಂಡ್ ಸ್ಟಾರ್ಟರ್ ಸಿಗ್ನಲ್‌ಗಳೊಂದಿಗೆ ಯಶಸ್ವಿಯಾಗಿ ಸಂಯೋಜಿಸಲಾಗಿದೆ. ಇದೆ ಕಾರಣದಿಂದ ರೈಲು ಪ್ಲಾಟ್ ಫಾರ್ಮ್ ಗೆ ಆಗಮಿಸುತ್ತಿದ್ದಂತೆ ದೀಪಗಳು ಬೆಳಗುತ್ತವೆ ಮತ್ತು ರೈಲು ನಿರ್ಗಮಿಸುತ್ತಿದ್ದಂತೆ ದೀಪಗಳು ಆಫ್ ಆಗುತ್ತವೆ ಎಂದಿದ್ದಾರೆ.

ಸ್ಟಾರ್ಟರ್ ಸಿಸ್ಟಮ್ ಪಾತ್ರ ಪ್ರಮುಖವಾಗಿದೆ
ನಿಲ್ದಾಣದಲ್ಲಿ ರೈಲು ಇಲ್ಲದಿದ್ದಾಗ, ಶೇಕಡಾ 30 ರಷ್ಟು ದೀಪಗಳು ಉರಿಯುತ್ತವೆ, ಆದರೆ ರೈಲು ಸ್ಟಾರ್ಟರ್ ಸಿಗ್ನಲ್ ತಲುಪಿದ ಕೂಡಲೇ ಉಳಿದ 70 ಪ್ರತಿಶತ ದೀಪಗಳು ಸಹ ಉರಿಯುತ್ತವೆ. ರೈಲು ಪ್ಲಾಟ್‌ಫಾರ್ಮ್‌ನಿಂದ ನಿರ್ಗಮಿಸಿ ಸ್ಟಾರ್ಟರ್ ಸಿಗ್ನಲ್‌ ನಿಂದ ದೂರ ಸರಿದಾಗ ಶೇ.70 ರಷ್ಟು ದೀಪಗಳು ತಾವಾಗಿಯೇ ಆಫ್ ಆಗುತ್ತವೆ. ಜಬಲ್ಪುರ್ ನಿಲ್ದಾಣದ ಮೊದಲು, ನರಸಿಂಗ್‌ಪುರ ನಿಲ್ದಾಣದಲ್ಲೂ ಕೂಡ ಇದೇ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಪಶ್ಚಿಮ ಮಧ್ಯ ರೈಲ್ವೆಯ ಎಲ್ಲಾ ನಿಲ್ದಾಣಗಳಲ್ಲಿ ಇದೇ ರೀತಿಯ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದೆ.
 

Trending News