Pitbull Ban: ಈ ನಗರಗಳಲ್ಲೀಗ ಪಿಟ್‌ಬುಲ್ ಮತ್ತು ರಾಟ್‌ವೀಲರ್ ನಾಯಿಗಳನ್ನು ಸಾಕುವಂತಿಲ್ಲ

Pitbull Ban: ನಾಯಿಗಳ ದಾಳಿಯ ಪುನರಾವರ್ತಿತ ಘಟನೆಗಳ ನಂತರ, ಅಪಾಯಕಾರಿ ಎಂದು ಪರಿಗಣಿಸಲಾದ ಪಿಟ್‌ಬುಲ್ ಮತ್ತು ರಾಟ್‌ವೀಲರ್ ಎಂಬ ಎರಡು ತಳಿಗಳ ನಾಯಿಗಳನ್ನು ಸಾಕುವುದನ್ನು ನಿಷೇಧಿಸಲು ಕಾನ್ಪುರ ಮುನ್ಸಿಪಲ್ ಕಾರ್ಪೊರೇಷನ್ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. 

Written by - Yashaswini V | Last Updated : Sep 27, 2022, 02:20 PM IST
  • ಕೆಲ ದಿನಗಳ ಹಿಂದೆ ಲಕ್ನೋ, ಘಾಜಿಯಾಬಾದ್ ಮತ್ತು ಮೀರತ್‌ನಲ್ಲಿ ಪಿಟ್‌ಬುಲ್ ದಾಳಿಯ ಬಗ್ಗೆ ವರದಿ ಆಗಿತ್ತು
  • ಕಾನ್ಪುರದ ಸರ್ಸಯ್ಯ ಘಾಟ್‌ನಲ್ಲಿ ಇತ್ತೀಚೆಗೆ ಹಸುವಿನ ಮೇಲೆ ಪಿಟ್‌ಬುಲ್ ದಾಳಿ ಬಗ್ಗೆ ವರದಿ ಆಗಿತ್ತು.
  • ಕಾನ್ಪುರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗಿತ್ತು.
Pitbull Ban: ಈ ನಗರಗಳಲ್ಲೀಗ  ಪಿಟ್‌ಬುಲ್ ಮತ್ತು ರಾಟ್‌ವೀಲರ್ ನಾಯಿಗಳನ್ನು ಸಾಕುವಂತಿಲ್ಲ title=
Pitbull Ban

ಕಾನ್ಪುರದಲ್ಲಿ ಪಿಟ್‌ಬುಲ್ ನಿಷೇಧ:  ಕಾನ್ಪುರ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಪಿಟ್‌ಬುಲ್ ಮತ್ತು ರಾಟ್‌ವೀಲರ್ ತಳಿಯ ನಾಯಿಗಳ ಸಾಕಣೆಯನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಅಂಗೀಕರಿಸಿದೆ.   ಇದರನ್ವಯ, ಇನ್ನು ಮುಂದೆ ಈ ಪ್ರದೇಶಗಳಲ್ಲಿ ಈ ಎರಡೂ ತಳಿಗಳಲ್ಲಿ ಯಾವುದೇ ತಳಿಯ ನಾಯಿಯನ್ನು ಸಾಕುವ ವ್ಯಕ್ತಿಗೆ 5,000 ರೂ.ವರೆಗೆ ದಂಡ ವಿಧಿಸಲಾಗುವುದು ಮತ್ತು ಅವರ ಪ್ರೀತಿಯ ಪೆಟ್ ಅನ್ನು ಜಪ್ತಿ ಮಾಡಲಾಗುವುದು ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಪ್ರಸ್ತಾವನೆಯನ್ನು ಪಾಲಿಕೆ ಆಯುಕ್ತರಿಗೆ ಕಳುಹಿಸಲಾಗಿದ್ದು, ಅವರು ಈ ಬಗ್ಗೆ ಔಪಚಾರಿಕ ಆದೇಶ ಹೊರಡಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನಾಯಿಗಳ ದಾಳಿಯ ಪುನರಾವರ್ತಿತ ಘಟನೆಗಳ ನಂತರ, ಅಪಾಯಕಾರಿ ಎಂದು ಪರಿಗಣಿಸಲಾದ ಪಿಟ್‌ಬುಲ್ ಮತ್ತು ರಾಟ್‌ವೀಲರ್ ಎಂಬ ಎರಡು ತಳಿಗಳ ನಾಯಿಗಳನ್ನು ಸಾಕುವುದನ್ನು ನಿಷೇಧಿಸಲು ಕಾನ್ಪುರ ಮುನ್ಸಿಪಲ್ ಕಾರ್ಪೊರೇಷನ್ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. 

ಇದನ್ನೂ ಓದಿ- Bull Fight Video: ನಡು ರಸ್ತೆಯಲ್ಲೇ ನಡೆಯಿತು ಗೂಳಿಗಳ ನಡುವೆ ಭಾರೀ ಕಾಳಗ.!

ವಾಸ್ತವವಾಗಿ, ಈ  ವಿಲಕ್ಷಣ ಭಯಾನಕ ಜಾತಿಯ ನಾಯಿಗಳನ್ನು ಸಾಕಲು ಜನರು ದೊಡ್ಡ ದೊಡ್ಡ ಮನೆ ಅಥವಾ ಫಾರ್ಮ್ ಹೌಸ್ ಅನ್ನು ಹೊಂದಿಲ್ಲ. ಕಡಿಮೆ ಜಾಗದಿಂದಾಗಿ ಹಲವು ಬಾರಿ ಅವು ಒತ್ತಡಕ್ಕೆ ಒಳಗಾಗಿ ಜನರ ಮೇಲೆ ದಾಳಿ ಮಾಡುತ್ತವೆ. ಅಪಾಯಕಾರಿ ಎಂದು ಪರಿಗಣಿಸಲಾಗಿರುವ ಇಂತಹ ಶ್ವಾನಗಳ ದಾಳಿಯಿಂದ ಸಾರ್ವಜನಿಕರನ್ನು ರಕ್ಷಿಸಲು ನಗರದ ವ್ಯಾಪ್ತಿಯಲ್ಲಿ ಭಯಾನಕ ಪಿಟ್‌ಬುಲ್ ಮತ್ತು ರಾಟ್‌ವೀಲರ್ ತಳಿಗಳ ಶ್ವಾನಗಳನ್ನು ನಿಷೇಧಿಸುವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. 

ಈ ಕುರಿತಂತೆ ಹೆಚ್ಚುವರಿ ನಗರಸಭೆ ಆಯುಕ್ತ ಸೂರ್ಯಕಾಂತ್ ತ್ರಿಪಾಠಿ ಮಾತನಾಡಿ, ನಗರ ಪ್ರದೇಶದಲ್ಲಿ ಪಳಗಿಸುವಿಕೆ ಮತ್ತು ವ್ಯಾಪಾರದ ಉದ್ದೇಶದಿಂದ ಈ ಎರಡೂ ಜಾತಿಯ ನಾಯಿಗಳನ್ನು ಸಾಕುವುದನ್ನು ನಿಷೇಧಿಸಲಾಗಿದೆ. ಮುನ್ಸಿಪಲ್ ಕಾರ್ಪೊರೇಷನ್ ನಿಯಮವನ್ನು ಉಲ್ಲಂಘಿಸಿ ಯಾರಾದರೂ ಈ ತಳಿಯ ನಾಯಿಗಳನ್ನು ಸಾಕಿದರೆ ಅಂತಹವರಿಗೆ 5,000 ರೂ.ವರೆಗೆ ದಂಡ ವಿಧಿಸಲಾಗುವುದು, ಜೊತೆಗೆ ಅವರ ಪ್ರೀತಿಯ ಶ್ವಾನವನ್ನೂ ಸಹ ಜಪ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ- ಮೊಟ್ಟೆಗಳಿಗಾಗಿ ಎರಡು ನಾಗರ ಹಾವುಗಳೊಂದಿಗೆ ಕೋಳಿ ಸೆಣೆಸಾಟ, ಮುಂದೇನಾಯ್ತು ನೀವೇ ನೋಡಿ

ಲಕ್ನೋ, ಘಾಜಿಯಾಬಾದ್ ಮತ್ತು ಮೀರತ್‌ನಲ್ಲಿ ಪಿಟ್‌ಬುಲ್ ದಾಳಿಯ ಘಟನೆಗಳ ನಂತರ, ಕಾನ್ಪುರದ ಸರ್ಸಯ್ಯ ಘಾಟ್‌ನಲ್ಲಿ ಇತ್ತೀಚೆಗೆ ಹಸುವಿನ ಮೇಲೆ ಪಿಟ್‌ಬುಲ್ ದಾಳಿ ಬಗ್ಗೆ ವರದಿ ಆಗಿತ್ತು.  ಕಾನ್ಪುರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗಿತ್ತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News