Aligarh Muslim University ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರೊಫೆಸರ್, ಪ್ರಧಾನಿ ಮೋದಿ ಮೊರೆ ಹೋದ ವಿದ್ಯಾರ್ಥಿನಿ ಹೇಳಿದ್ದೇನು?

AMU: ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ವೊಬ್ಬರು ಪಿ,ಹೆಚ್ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ನ್ಯಾಯಕ್ಕಾಗಿ ಪ್ರಧಾನಿ ಮೋದಿ ಹಾಗೂ ಯೋಗಿಗೆ ಮನವಿ ಮಾಡಿದ ಯುವತಿ, ನ್ಯಾಯ ಸಿಗದೇ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮಾತನ್ನು ಹೇಳಿದ್ದಾಳೆ.   

Written by - Nitin Tabib | Last Updated : Jun 14, 2023, 08:25 PM IST
  • ಬಳಿಕ ಸಂತ್ರಸ್ತೆ ಆರೋಪಿ ಪ್ರೊಫೆಸರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಮೋದಿ ಮತ್ತು ಯೋಗಿಗೆ ನನ್ನ ಏಕೈಕ ಮನವಿಯಾಗಿದೆ ಎಂದು ಹೇಳಿದ್ದಾಳೆ.
  • ಯೋಗಿ-ಮೋದಿ ಹೊರತುಪಡಿಸಿ ನನಗೆ ಯಾವುದೇ ಭರವಸೆ ಇಲ್ಲ, ಏಕೆಂದರೆ ಯಾರೂ ಕೇಳಲು ಸಿದ್ಧರಿಲ್ಲ.
  • ಮೇ 27 ರಂದು ಎಫ್‌ಐಆರ್ ದಾಖಲಿಸಲಾಗಿದೆ, ಸೆಕ್ಷನ್ 164 ರ ಅಡಿಯಲ್ಲಿ ನನ್ನ ಹೇಳಿಕೆಯನ್ನು ಸಹ ಪಡೆಯಲಾಗಿದೆ.
Aligarh Muslim University ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರೊಫೆಸರ್, ಪ್ರಧಾನಿ ಮೋದಿ ಮೊರೆ ಹೋದ ವಿದ್ಯಾರ್ಥಿನಿ ಹೇಳಿದ್ದೇನು? title=

Sexual Harassment In AMU: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ವನ್ಯಜೀವಿ ವಿಭಾಗದ ಪ್ರೊಫೆಸರ್ ವೊಬ್ಬರು ಪಿಎಚ್‌ಡಿ ವಿದ್ಯಾರ್ಥಿಗೆ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಪತ್ರಿಕಾಗೋಷ್ಠಿ ನಡೆಸುವ ಮೂಲಕ ವಿದ್ಯಾರ್ಥಿನಿ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಅವರಿಗೆ ಮನವಿ ಮಾಡಿದ್ದಾಳೆ. ಆರೋಪಿ ಪ್ರೊಫೆಸರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ. ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯಾರ್ಥಿನಿ ಹೇಳಿದ್ದಾಳೆ. AMU ನಲ್ಲಿ ವಿದ್ಯಾರ್ಥಿನಿಯರಿಗಾಗಿ ರಚಿಸಲಾದ ಸಮಿತಿಯನ್ನು ತಾನು ನಂಬುವುದಿಲ್ಲ ಎಂದು ಸಂತ್ರಸ್ತ ವಿದ್ಯಾರ್ಥಿನಿ ಹೇಳಿದ್ದಾರೆ. AMU ನಲ್ಲಿ ಪಿಎಚ್‌ಡಿ ಮಾಡುತ್ತಿರುವ ಇತರ ಎಲ್ಲ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯದ ಘಟನೆಗಳು ನಡೆಯುತ್ತಿವೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಆದರೂ ಮರ್ಯಾದೆಯ ಕಾರಣ ಆ ಹುಡುಗಿಯರು ಸುಮ್ಮನಿರುತ್ತಾರೆ ಎಂದು ಆಕೆ ಹೇಳಿದ್ದಾಳೆ.

ತನ್ನ ಪಿಹೆಚ್ಡಿಗಾಗಿ ಗೈಡ್ ಮಾಡುತ್ತಿರುವ ಪ್ರಾಧ್ಯಾಪಕನ ವರ್ತನೆ ತುಂಬಾ ಕೆಟ್ಟದಾಗಿದೆ ಎಂದುವಿದ್ಯಾರ್ಥಿನಿ ಆರೋಪಿಸಿದ್ದಾರೆ. ಪ್ರೊಫೆಸರ್ ಅಫೀಫ್ ಉಲ್ಲಾ ಖಾನ್ ಸಂತ್ರಸ್ತೆಗೆ ಕೆಟ್ಟ ಕೆಟ್ಟ ಕಾಮೆಂಟ್ಗಳನ್ನು ಮಾಡುತ್ತಿದ್ದರು. ಮೊದಲು ಪ್ರೊಫೆಸರ್ ಚೇಂಬರ್ ಹೊರ ಭಾಗದಲ್ಲಿತ್ತು, ಚೇಂಬರ್ ಹಿಂಬದಿ ತಲುಪಿದ ಕೂಡಲೇ ಕಿರುಕುಳ ನೀಡಲು ಆರಂಭಿಸಿ ಆಕೆಯನ್ನು ಸ್ಪರ್ಶಿಸಲು ಆರಂಭಿಸಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಸಂತ್ರಸ್ತೆಯ ನಿರಾಕರಣೆಯಿಂದ ಕೋಪಗೊಂಡ ಪ್ರಾಧ್ಯಾಪಕ, ನಿಮ್ಮ ಪಿಎಚ್‌ಡಿ ಥೇಸಿಸ್ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ-Modi Government: ಸರ್ಕಾರಿ ನೌಕರರನ್ನು ಒತ್ತಡ ಮುಕ್ತವಾಗಿರಿಸಲು ಆಶ್ಚರ್ಯಕರ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಸಂತ್ರಸ್ತೆ ಹೇಳುವಂತೆ ನಾನು ಪ್ರೊಫೆಸರ್ ಬಳಿ ಹೋಗಿದ್ದೆ, ನಾನು ಪಿಎಚ್‌ಡಿ ಸಲ್ಲಿಸಲು ಕೋರಿದೆ, ಆತ  ಒಪ್ಪಲಿಲ್ಲ, ಯಾರ ಬಳಿ ಬೇಕಾದರೂ ಹೋಗು ಎಂದು ನನ್ನನ್ನು ಆತ ಅಲ್ಲಿಂತ ಕೆಟ್ಟ ರೀತಿಯಲ್ಲಿ ಹೊರಹಾಕಿದ. ನಂತರ ನಾನು ಎಎಂಯು ಆಡಳಿತಕ್ಕೆ ಪತ್ರ ಬರೆದಿದ್ದೇನೆ, ಅದರಲ್ಲಿ ಇಡೀ ಘಟನೆಯನ್ನು ಉಲ್ಲೇಖಿಸಿದ್ದೇನೆ, ಅವರೂ ಕೂಡ ಕ್ರಮ ಕೈಗೊಂಡಿಲ್ಲ, 40 ದಿನಗಳಿಗಿಂತ ಹೆಚ್ಚು ಕಾಲ ಕಳೆದಿದೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾಳೆ. ಎಎಂಯು ಆಡಳಿತವು ಪ್ರಾಧ್ಯಾಪಕರಿಗೆ ಕ್ಲೀನ್ ಚಿಟ್ ಕೂಡ ನೀಡಿದೆ ಎಂದು ಆಕೆ ಹೇಳಿದ್ದಾಳೆ.

ಇದನ್ನೂ ಓದಿ-Biparjoy Update: ಭಾರಿ ವಿನಾಶ ಸೃಷ್ಟಿಸಲಿದೆ ಬಿಪರ್ ಜಾಯ್, ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ!

ಬಳಿಕ ಸಂತ್ರಸ್ತೆ ಆರೋಪಿ ಪ್ರೊಫೆಸರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಮೋದಿ ಮತ್ತು ಯೋಗಿಗೆ ನನ್ನ ಏಕೈಕ ಮನವಿಯಾಗಿದೆ ಎಂದು ಹೇಳಿದ್ದಾಳೆ. ಯೋಗಿ-ಮೋದಿ ಹೊರತುಪಡಿಸಿ ನನಗೆ ಯಾವುದೇ ಭರವಸೆ ಇಲ್ಲ, ಏಕೆಂದರೆ ಯಾರೂ ಕೇಳಲು ಸಿದ್ಧರಿಲ್ಲ. ಮೇ 27 ರಂದು ಎಫ್‌ಐಆರ್ ದಾಖಲಿಸಲಾಗಿದೆ, ಸೆಕ್ಷನ್ 164 ರ ಅಡಿಯಲ್ಲಿ ನನ್ನ ಹೇಳಿಕೆಯನ್ನು ಸಹ ಪಡೆಯಲಾಗಿದೆ. ಎಎಂಯುನಲ್ಲಿ ಬಾಲಕಿಯರಿಗಾಗಿ ರಚಿಸಲಾದ ಸಮಿತಿಯು ಜನವರಿ 1 ರಂದು ತನ್ನ ವರದಿಯನ್ನು ಸಿದ್ಧಪಡಿಸಿ ಕಳುಹಿಸಿದೆ, ನಾನು ಅದನ್ನು ನಂಬುವುದಿಲ್ಲ, ಒಂದೇ ದಿನದಲ್ಲಿ ಸಂಪೂರ್ಣ ವರದಿಯನ್ನು ಕಳುಹಿಸುವ ಇಂತಹ ಸಮಿತಿಯಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ ಎಂದು ವಿದ್ಯಾರ್ಥಿಯ ಪ್ರಶ್ನೆಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News