ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಪಿಡಿಪಿ, ಎನ್ಸಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಕಸರತ್ತು

ಜಮ್ಮು ಕಾಶ್ಮೀರದಲ್ಲಿ ಪಿಡಿಪಿ, ನ್ಯಾಷನಲ್ ಕಾನ್ಫೆರನ್ಸ್, ಮತ್ತು ಕಾಂಗ್ರೆಸ್ ಪಕ್ಷವು ಈಗ ಮೈತ್ರಿಕೂಟದ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ.

Last Updated : Nov 21, 2018, 06:18 PM IST
ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಪಿಡಿಪಿ, ಎನ್ಸಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಕಸರತ್ತು title=

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪಿಡಿಪಿ, ನ್ಯಾಷನಲ್ ಕಾನ್ಫೆರನ್ಸ್, ಮತ್ತು ಕಾಂಗ್ರೆಸ್ ಪಕ್ಷವು ಈಗ ಮೈತ್ರಿಕೂಟದ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ.

ಹಿರಿಯ ಪಿಡಿಪಿ ನಾಯಕ ಅಲ್ತಾಫ್ ಬುಖಾರಿ ಈಗ ಸಿಎಂ ಹುದ್ದೆಗೆ ಮುಂಚೂನೆಯಲ್ಲಿದ್ದಾರೆ.ಇನ್ನೊಂದೆಡೆಗೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಫಾರೂಕ್ ಅಬ್ದುಲ್ಲಾ ಅವರನ್ನು ಸಿಎಂ ಮಾಡಲು ಇಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ನ್ಯಾಷನಲ್ ಕಾನ್ಫೆರನ್ಸ್ ಸರ್ಕಾರದ ಭಾಗವಾಗಿರುವುದರ ಬದಲು ಪಿಡಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ನೀಡಲು ಸಿದ್ಧತೆ ನಡೆಸಿದೆ.ಆದರೆ ಮೂಲಗಳ ಪ್ರಕಾರ ಬುಖಾರಿ ಸಿಎಂ ಹುದ್ದೆಗೆ ಒಮ್ಮತದ ಅಭ್ಯರ್ಥಿ ಎಂದು ಹೇಳಲಾಗಿದೆ.ಈ ಕುರಿತಾಗಿ ಪ್ರತಿಯಿಸಿರುವ ಹಿರಿಯ ಪಿಡಿಪಿ ನಾಯಕ ಮೈತ್ರಿಕೂಟವು ಸಾಯಂಕಾಲದ ಒಳಗೆ ಘೋಷಣೆ ಮಾಡಲಿದ್ದು ಮಿತ್ರ ಪಕ್ಷಗಳು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ. 

ಸದ್ಯ ವಿಧಾನಸಭೆಯಲ್ಲಿ ಪಿಡಿಪಿ 28 ಸ್ಥಾನಗಳನ್ನು ಹೊಂದಿದ್ದು,ನ್ಯಾಷನಲ್ ಕಾನ್ಫೆರನ್ಸ್ 15 ಕಾಂಗ್ರೆಸ್ 12 ಸ್ಥಾನಗಳನ್ನು ಹೊಂದಿದೆ.ಈ ಮೂರು ಪಕ್ಷಗಳನ್ನು ಸೇರಿದರೆ ಒಟ್ಟು 55 ಆಗುತ್ತದೆ. ಆದರೆ ಒಟ್ಟು 87 ಸದಸ್ಯರನ್ನು ಹೊಂದಿರುವ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 87 ಸದಸ್ಯರ ಅವಶ್ಯಕತೆ ಇದೆ.ಪಿಡಿಪಿ 28 ಸ್ಥಾನಗಳನ್ನು ಹೊಂದಿದೆ, ನ್ಯಾಷನಲ್ ಕಾನ್ಫೆರನ್ಸ್ 15 ಮತ್ತು ಕಾಂಗ್ರೆಸ್ 12 ಇವೆ. 87 ಸದಸ್ಯರ ಮನೆಗಳಲ್ಲಿ ಅಗತ್ಯವಿರುವ 44 ಜನರ ವಿರುದ್ಧ 55 ಪಕ್ಷಗಳಿಗೆ ಮೂರು ಪಕ್ಷಗಳು ಒಟ್ಟಾಗಿವೆ.

Trending News