ತನ್ನ ಟ್ವಿಟ್ಟರ್ ಪ್ರೊಫೈಲ್‌ನಿಂದ 'ಬಿಜೆಪಿ' ಹೆಸರು ತೆಗೆದ ಪಂಕಜಾ ಮುಂಡೆ!

ಭಾರತೀಯ ಜನತಾ ಪಕ್ಷ(BJP) ನಾಯಕಿ ಪಂಕಜಾ ಗೋಪಿನಾಥ್ ಮುಂಡೆ ಸೋಮವಾರ ತಮ್ಮ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಹ್ಯಾಂಡಲ್‌ನಿಂದ ಪಕ್ಷದ ಹೆಸರನ್ನು ತೆಗೆದುಹಾಕಿದ್ದಾರೆ. ಈ ಕ್ರಮವು ಹಲವಾರು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

Last Updated : Dec 2, 2019, 01:28 PM IST
ತನ್ನ ಟ್ವಿಟ್ಟರ್ ಪ್ರೊಫೈಲ್‌ನಿಂದ 'ಬಿಜೆಪಿ' ಹೆಸರು ತೆಗೆದ ಪಂಕಜಾ ಮುಂಡೆ! title=

ಮುಂಬೈ: ಭಾರತೀಯ ಜನತಾ ಪಕ್ಷ(BJP) ನಾಯಕಿ ಪಂಕಜಾ ಗೋಪಿನಾಥ್ ಮುಂಡೆ(Pankaja Gopinath Munde) ಸೋಮವಾರ ತಮ್ಮ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಹ್ಯಾಂಡಲ್‌ನಿಂದ ಪಕ್ಷದ ಹೆಸರನ್ನು ತೆಗೆದುಹಾಕಿದ್ದಾರೆ. ಈ ಕ್ರಮವು ಹಲವಾರು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಮಹಾರಾಷ್ಟ್ರದ ಮಾಜಿ ಕ್ಯಾಬಿನೆಟ್ ಸಚಿವರು ಶನಿವಾರ ತಮ್ಮ ಫೇಸ್‌ಬುಕ್ ಪುಟದಲ್ಲಿ ಡಿಸೆಂಬರ್ 12 ರಂದು ಬೀಡ್ ಜಿಲ್ಲೆಯಲ್ಲಿ ರಾಜ್ಯದಾದ್ಯಂತ ತಮ್ಮ ಬೆಂಬಲಿಗರ ರ್ಯಾಲಿಯನ್ನು ಉದ್ದೇಶಿಸಿ ದೊಡ್ಡ ಘೋಷಣೆ ಮಾಡುವುದಾಗಿ ತಿಳಿಸಿದ್ದರು.

ಹಿರಿಯ ಮಹಾರಾಷ್ಟ್ರದ ರಾಜಕಾರಣಿ ಗೋಪಿನಾಥ್ ಮುಂಡೆ ಅವರ ಪುತ್ರಿ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ,  "ಪ್ರಸ್ತುತ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೊಸ ಹಾದಿಯನ್ನು ನಿರ್ಧರಿಸುತ್ತಿದ್ದು" ಡಿಸೆಂಬರ್ 12 ರಂದು ನಡೆಯಲಿರುವ ರ್ಯಾಲಿಯಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುವುದಾಗಿ ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಾರ್ಲಿ ಅಸೆಂಬ್ಲಿ ಸ್ಥಾನದಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಮುಂಡೆ ಅವರು ತಮ್ಮ ಸೋಲಿನ ಸಂಪೂರ್ಣ ನೈತಿಕ ಜವಾಬ್ದಾರಿಯನ್ನು ತಾವೇ ಹೊತ್ತಿದ್ದಾರೆ. ಆಕೆ ತನ್ನ ಸೋದರಸಂಬಂಧಿ ಎನ್‌ಸಿಪಿಯ ಧನಂಜಯ್ ಮುಂಡೆ ವಿರುದ್ಧ 30,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು.

"ರಾಜ್ಯದಲ್ಲಿ ಬದಲಾದ ರಾಜಕೀಯ ಸನ್ನಿವೇಶವನ್ನು ನೋಡುವಾಗ, ಮುಂದಿನ ದಾರಿ ಯೋಚಿಸುವ ಮತ್ತು ನಿರ್ಧರಿಸುವ ಅವಶ್ಯಕತೆಯಿದೆ. ನನ್ನೊಂದಿಗೆ ಸಂವಹನ ನಡೆಸಲು ನನಗೆ ಸುಮಾರು 8-10 ದಿನಗಳ ಕಾಲ ಸಮಯ ಬೇಕು" ಎಂದು ಪಂಕಜಾ ಮುಂಡೆ ಭಾನುವಾರ ಬರೆದಿದ್ದಾರೆ. ಅವರ ತಂದೆಯ 60 ನೇ ಜನ್ಮ ದಿನಾಚರಣೆ ಡಿಸೆಂಬರ್ 12 ರಂದು ಸ್ಮಾರಕ ಸೇವೆಗೆ ತಮ್ಮ ಬೆಂಬಲಿಗರನ್ನು ಆಹ್ವಾನಿಸುವ ವೇಳೆ ಈ ಹೇಳಿಕೆ ನೀಡಿದ್ದಾರೆ.

"ನಮ್ಮ ಮುಂದಿನ ಪ್ರಯಾಣವನ್ನು ಪ್ರಸ್ತುತ ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ ನಿರ್ಧರಿಸಬೇಕಾಗಿದೆ. ಮುಂದೆ ಏನು ಮಾಡಬೇಕು? ಯಾವ ಮಾರ್ಗವನ್ನು ತೆಗೆದುಕೊಳ್ಳಬೇಕು? ನಾವು ಜನರಿಗೆ ಏನು ನೀಡಬಹುದು? ನಮ್ಮ ಶಕ್ತಿ ಏನು? ಜನರ ನಿರೀಕ್ಷೆಗಳು ಏನು?" ಎಂದು ಅವರು ತನ್ನ ಪೋಸ್ಟ್ನಲ್ಲಿ ಬರೆದಿದ್ದರು.

"ನಾನು ಈ ಎಲ್ಲ ಅಂಶಗಳ ಬಗ್ಗೆ ಯೋಚಿಸುತ್ತೇನೆ ಮತ್ತು ಡಿಸೆಂಬರ್ 12 ರಂದು ನಿಮ್ಮ ಮುಂದೆ ಬರುತ್ತೇನೆ" ಎಂದು ಅವರು ಬರೆದಿದ್ದಾರೆ. "ನನಗೆ ಮಾತನಾಡಲು ಸಾಕಷ್ಟು ಇದೆ. ನನ್ನ ಬೆಂಬಲಿಗರು ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನನಗೆ ಭರವಸೆ ಇದೆ" ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ಸೋತ ನಂತರ, ಅವರ ಬೆಂಬಲಿಗರಿಂದ ಭೇಟಿಯಾಗಲು ಹಲವಾರು ಕರೆಗಳು ಮತ್ತು ಸಂದೇಶಗಳು ಬಂದವು. ಆದರೆ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯಿಂದಾಗಿ, ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಅವರು ಪೋಸ್ಟ್ನಲ್ಲಿ ಬರೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ವಿಫಲವಾದ ನಂತರ, ಬಿಜೆಪಿ ಆಂತರಿಕ ಬಿರುಕು ಎದುರಿಸುತ್ತಿದೆ ಮತ್ತು ಪಕ್ಷದೊಳಗೆ ಆಪಾದನೆ ಆಟ ಈಗಾಗಲೇ ಪ್ರಾರಂಭವಾಗಿದೆ ಎಂದು ವರದಿಯಾಗಿದೆ.

Trending News