ಭಾರತದಲ್ಲಿರುವ ಮುಸ್ಲಿಮರು ಭಯಪಡಬೇಕಾಗಿಲ್ಲ: ಆರ್‌ಎಸ್‌ಎಸ್‌ನ ಕೃಷ್ಣ ಗೋಪಾಲ್

ದೇಶದಲ್ಲಿ ಇತರ ಅಲ್ಪಸಂಖ್ಯಾತ ಸಮುದಾಯಗಳಾದ ಪಾರ್ಸಿಗಳು, ಬೌದ್ಧರು ಮತ್ತು ಜೈನರು ಸುರಕ್ಷಿತ ಭಾವನೆ ಹೊಂದಿದ್ದಾರೆ. ಆದರೆ ಮುಸ್ಲಿಮರೇಕೆ ಹಾಗೆ ಭಾವಿಸುವುದಿಲ್ಲ ಎಂದು ಆರ್‌ಎಸ್‌ಎಸ್‌ನ ಕೃಷ್ಣ ಗೋಪಾಲ್ ಪ್ರಶ್ನಿಸಿದ್ದಾರೆ.

Last Updated : Sep 12, 2019, 12:18 PM IST
ಭಾರತದಲ್ಲಿರುವ ಮುಸ್ಲಿಮರು ಭಯಪಡಬೇಕಾಗಿಲ್ಲ: ಆರ್‌ಎಸ್‌ಎಸ್‌ನ ಕೃಷ್ಣ ಗೋಪಾಲ್ title=

ನವದೆಹಲಿ: ಭಾರತೀಯ ಮುಸ್ಲಿಮರು ಯಾವ್ ಕಾರಣಕ್ಕೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ತಿಳಿಸಿದ್ದರೆ.

ದೇಶದಲ್ಲಿ ಇತರ ಅಲ್ಪಸಂಖ್ಯಾತ ಸಮುದಾಯಗಳಾದ ಪಾರ್ಸಿಗಳು, ಬೌದ್ಧರು ಮತ್ತು ಜೈನರು ಸುರಕ್ಷಿತ ಭಾವನೆ ಹೊಂದಿದ್ದಾರೆ. ಆದರೆ ಮುಸ್ಲಿಮರೇಕೆ ಹಾಗೆ ಭಾವಿಸುವುದಿಲ್ಲ ಎಂದು ಅವರು ಪ್ರಶ್ನಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ಅಕಾಡೆಮಿಕ್ಸ್ ಫಾರ್ ನೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆರ್‌ಎಸ್‌ಎಸ್ ನಾಯಕ ಕೃಷ್ಣ ಗೋಪಾಲ್, "ಇತರ ಅಲ್ಪಸಂಖ್ಯಾತರು ಸುರಕ್ಷಿತರೆಂದು ಭಾವಿಸಿದರೆ, ಮುಸ್ಲಿಮರು ಏಕೆ ಹಾಗಿಲ್ಲ? ಭಾರತದಲ್ಲಿ 16 ಕೋಟಿ ಮುಸ್ಲಿಮರಿದ್ದಾರೆ, ಅವರ್ಯಾರೂ ಭಯಪಡಬೇಕಾಗಿಲ್ಲ" ಎಂದು ಹೇಳಿದ್ದರೆ.

"ಭಾರತದಲ್ಲಿ ಎಷ್ಟು ಪಾರ್ಸಿಗಳಿದ್ದಾರೆ, ಗರಿಷ್ಟ 50,000 ಮಂದಿ ಇರಬಹುದು, ಸುಮಾರು 45 ಲಕ್ಷ ಜೈನರು ಮತ್ತು ಸುಮಾರು 80 ಲಕ್ಷ ಬೌದ್ಧರು ಇದ್ದಾರೆ. ಯಹೂದಿಗಳ ಸಂಖ್ಯೆ ಕೇವಲ ಐದು ಸಾವಿರ. ಆದರೂ ಅವರ್ಯಾರೂ ಯಾರಿಗೂ ಹೆದರುವುದಿಲ್ಲ" ಎಂದು ಹೇಳಿದರು.

'ವಸುದೈವ ಕುಟುಂಬಕಂ', 'ಸರ್ವೆ ಜನಾ ಸುಖಿನೋ ಭವಂತು' ಎಂಬ ತತ್ವಗಳ ಬಗ್ಗೆ ಭಾರತ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದು ಇದೇ ವೇಳೆ ಗೋಪಾಲ್ ನುಡಿದರು.

Trending News