ನವದೆಹಲಿ: ಪ್ರತಿಪಕ್ಷಗಳ ಬಣಕ್ಕೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಕುರಿತಾದ ಭಯವಿದೆ ಆದ್ದರಿಂದ ಈಗ ಅವುಗಳೆಲ್ಲವು ಕೂಡ ಭಿನ್ನಭೇಧವನ್ನು ಮರೆತು ಒಂದಾಗಿವೆ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ ವಾರ ಕೊಲ್ಕತ್ತಾದಲ್ಲಿ ಸುಮಾರು 23 ಪಕ್ಷಗಳು ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ರ್ಯಾಲಿಯಲ್ಲಿ ಭಾಗವಹಿಸಿದ್ದವು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಕಡಿವಾಣ ಹಾಕಲು ಸಂಕಲ್ಪತೊಟ್ಟಿದ್ದವು. ಇನ್ನೊಂದೆಡೆಗೆ ಅಮಿತ್ ಷಾ ಕೂಡ ಪ್ರತಿಪಕ್ಷಗಳನ್ನು ವ್ಯಂಗ್ಯವಾಡಿ 9 ಪ್ರಧಾನಿ ಅಭ್ಯರ್ತಿಗಳನ್ನು ಅವು ಹೊಂದಿವೆ ಎಂದು ತಿಳಿಸಿದ್ದರು.
Tamil Nadu: Prime Minister Narendra Modi lays the foundation stone for AIIMS (All India Institutes of Medical Sciences) Madurai. He also inaugurated super-speciality blocks at medical colleges in Thanjavur and Tirunelveli. pic.twitter.com/LjzrOytYRS
— ANI (@ANI) January 27, 2019
ಇಂದು ತಮಿಳುನಾಡಿನ ಮಧುರೈ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ "ಸರ್ಕಾರದ ಯೋಜನೆಗಳಲ್ಲಿ ರಕ್ಷಣಾ ಒಪ್ಪಂಧಗಳಲ್ಲಿ ಜನಪರ ಯೋಜನೆಗಳಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದ್ದವರು ಈಗ ಮ್ಯೂಸಿಕ್ ನ್ನು ಎದುರಿಸುತ್ತಿದ್ದಾರೆ ಆದ್ದರಿಂದಲೇ ಈಗ ಅವರು ಒಂದಾಗಿದ್ದಾರೆ.ತಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಈ ವಾಚಮನ್ ನ್ನು ಕಿತ್ತೊಗೆಯಲು ಅವರು ಒಂದಾಗುತ್ತಿದ್ದಾರೆ" ಎಂದು ಮೋದಿ ಟೀಕಿಸಿದರು.
ಪ್ರಧಾನಿ ಮೋದಿ ಮಧುರೈ ನಲ್ಲಿ ಏಮ್ಸ್ ಆಸ್ಪತ್ರೆಗೆ ಅಡಿಗಲ್ಲು ಹಾಕುವ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದರು.ಈ ಸಂದರ್ಭದಲ್ಲಿ ತಮ್ಮ ಅವಧಿಯಲ್ಲಿ ಜಾರಿಗೆ ತಂದಂತಹ ಯೋಜನೆಗಳ ಕುರಿತಾಗಿ ಅವರು ವಿವರಿಸಿದರು.