ಕೇಂದ್ರದ ಕರಾಳ ಕೃಷಿ ಮಸೂದೆ ವಿರೋಧಿಸಿ ಸೆಪ್ಟೆಂಬರ್ 25ರಂದು ಭಾರತ್ ಬಂದ್

ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಕರಾಳ ಕೃಷಿ ಮಸೂದೆಗಳ ಬಗ್ಗೆ ಒಟ್ಟು 29 ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಅಷ್ಟೂ ಸಂಘಟನೆಗಳು ಐಕ್ಯ ಹೋರಾಟ ಸಮಿತಿ ಕರೆ ನೀಡಿರುವ ಭಾರತ್ ಬಂದ್ ಗೆ ತಾತ್ವಿಕ ಒಪ್ಪಿಗೆ ನೀಡಿವೆ. 

Last Updated : Sep 23, 2020, 09:10 AM IST
  • ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಕರಾಳ ಕೃಷಿ ಮಸೂದೆಗಳ ಬಗ್ಗೆ ಒಟ್ಟು 29 ಸಂಘಟನೆಗಳು ಪ್ರತಿಭಟನೆ
  • ಅಷ್ಟೂ ಸಂಘಟನೆಗಳು ಐಕ್ಯ ಹೋರಾಟ ಸಮಿತಿ ಕರೆ ನೀಡಿರುವ ಭಾರತ್ ಬಂದ್ ಗೆ ತಾತ್ವಿಕ ಒಪ್ಪಿಗೆ ನೀಡಿವೆ
  • ಇಂದು ವೀಡಿಯೋ ಕಾನ್ಫರೆನ್ಸ್ ಮತ್ತೊಂದು ಸಭೆ ನಡೆಸಲಿರುವ ವಿವಿಧ ಸಂಘಟನೆಗಳ ಮುಖಂಡರು
ಕೇಂದ್ರದ ಕರಾಳ ಕೃಷಿ ಮಸೂದೆ ವಿರೋಧಿಸಿ ಸೆಪ್ಟೆಂಬರ್ 25ರಂದು ಭಾರತ್ ಬಂದ್  title=

ಬೆಂಗಳೂರು: ರೈತರ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸುವಂತಹ ಕೃಷಿ ಮಸೂದೆಗಳನ್ನು ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ದೇಶದ ವಿವಿಧ ರೈತ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಸೆಪ್ಟೆಂಬರ್ 25ರಂದು ಭಾರತ್ ಬಂದ್ (Bharat Bandh)ಗೆ ಕರೆ ನೀಡಿವೆ.

ದೇಶಾದ್ಯಂತ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಜೂಮ್‌ ಮೂಲಕ‌ ಕೇಂದ್ರ ಸರ್ಕಾರದ ಜನ ವಿರೋಧಿ ಮತ್ತು ರೈತ ವಿರೋಧಿ ಕೃಷಿ ಮಸೂದೆ (Agriculture Bill)ಗಳ ಹೋರಾಟದ ರೂಪು ರೇಷೆ ಬಗ್ಗೆ ಚರ್ಚಿಸಿ ತಮ್ಮ ಐಕ್ಯ ಹೋರಾಟ ಸಮಿತಿ ವತಿಯಿಂದ ಸೆಪ್ಟೆಂಬರ್ 25ರಂದು ಭಾರತ್ ಬಂದ್ ನಡೆಸಲು‌ ನಿರ್ಧರಿಸಿವೆ.

ಕೃಷಿ ಮಸೂದೆ ವಿರೋಧದ ಹಿನ್ನೆಲೆ; ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಸಂಸದರ ಆಹೋರಾತ್ರಿ ಧರಣಿ

ದೇಶಾದ್ಯಂತ 200ಕ್ಕೂ ಹೆಚ್ಚು ರೈತ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಸೆಪ್ಟೆಂಬರ್ 25ರಂದು ಕರೆ ನೀಡಿರುಚ ಭಾರತ್ ಬಂದ್ ಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಡೆಸುತ್ತಿರುವ ರಾಜ್ಯದ ವಿವಿಧ ರೈತರು (Farmers) ಹಾಗೂ ಮತ್ತಿತರೆ ಸಂಘಟನೆಗಳು ಬೆಂಬಲ‌ ವ್ಯಕ್ತಪಡಿಸಿವೆ. ಐಕ್ಯ ಹೋರಾಟ ಸಮಿತಿ ಕರೆ ನೀಡಿರುವ ಭಾರತ್ ಬಂದ್ ಗೆ ತಾತ್ವಿಕ ಒಪ್ಪಿಗೆ ನೀಡಿವೆ.

ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಕರಾಳ ಕೃಷಿ ಮಸೂದೆಗಳ ಬಗ್ಗೆ ಒಟ್ಟು 29 ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಅಷ್ಟೂ ಸಂಘಟನೆಗಳು ಐಕ್ಯ ಹೋರಾಟ ಸಮಿತಿ ಕರೆ ನೀಡಿರುವ ಭಾರತ್ ಬಂದ್ ಗೆ ತಾತ್ವಿಕ ಒಪ್ಪಿಗೆ ನೀಡಿವೆ. 

ಇಂದು ವೀಡಿಯೋ ಕಾನ್ಫರೆನ್ಸ್ ಮತ್ತೊಂದು ಸಭೆ ನಡೆಸಲಿರುವ ವಿವಿಧ ಸಂಘಟನೆಗಳ ಮುಖಂಡರು ಒಟ್ಟಾರೆ ಹೋರಾಟದ ಹಾಗೂ ಸೆಪ್ಟೆಂಬರ್ 25 ರಂದು ನಡೆಯಲಿರುವ ಭಾರತ್ ಬಂದ್ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಲಿದ್ದಾರೆ.

Trending News