Omicron Updates: ಹೆಚ್ಚಾಗುತ್ತಿರುವ ಓಮಿಕ್ರಾನ್ ಹರಡುವಿಕೆ ತಡೆಗಟ್ಟಲು ಸಾಧ್ಯವಿಲ್ಲ, ಕೈ ಮೇಲಕ್ಕೆತ್ತಿದ ತಜ್ಞರ ಸಮಿತಿ ವೈದ್ಯರು

Omicron Updates: ಕರೋನಾ ವೈರಸ್‌ನ (Coronavirus) ಓಮಿಕ್ರಾನ್ ರೂಪಾಂತರದ (Omicron Variant) ಹೆಚ್ಚುತ್ತಿರುವ ಸೋಂಕನ್ನು ನಿಲ್ಲಿಸಲಾಗುವುದಿಲ್ಲ. ಕೇರಳದಲ್ಲಿ ಕೋವಿಡ್ -19  (Covid-19) ಸೋಂಕಿನ ಕುರಿತು ರಚಿಸಲಾದ ತಜ್ಞರ ಸಮಿತಿಯ ವೈದ್ಯರು (Expert Panel Doctors) ಇದನ್ನು ಹೇಳಿದ್ದಾರೆ. ಪ್ರತಿ ಎರಡು ದಿನಗಳಿಗೊಮ್ಮೆ ಹೊಸ ರೂಪಾಂತರಗಳ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ ಎಂದು ಸಮಿತಿಯ ಸದಸ್ಯ ಡಿಎಸ್ ಅನಿಸ್ (DS Anees) ಹೇಳಿದ್ದಾರೆ. 

Written by - Nitin Tabib | Last Updated : Dec 25, 2021, 12:30 PM IST
  • ಒಮಿಕ್ರೊನ್ ಸೋಂಕು ಹರಡುವಿಕೆ ನಿಲ್ಲಿಸಲು ಸಾಧ್ಯವಿಲ್ಲ.
  • ಕೇರಳದ ತಜ್ಞರ ಸಮಿತಿ ಸದಸ್ಯರ ಅಭಿಪ್ರಾಯ.
  • ಸೋಂಕು ತಡೆಗಟ್ಟಲು ನಮ್ಮ ಬಳಿ ಒಂದೇ ತಿಂಗಳ ಸಮಯಾವಕಾಶ ಇದೆ, ಇಲ್ದಿದ್ರೆ ಪರಿಸ್ಥಿತಿ ಕೈ ಮೀರಲಿದೆ.
Omicron Updates: ಹೆಚ್ಚಾಗುತ್ತಿರುವ ಓಮಿಕ್ರಾನ್ ಹರಡುವಿಕೆ ತಡೆಗಟ್ಟಲು ಸಾಧ್ಯವಿಲ್ಲ, ಕೈ ಮೇಲಕ್ಕೆತ್ತಿದ ತಜ್ಞರ ಸಮಿತಿ ವೈದ್ಯರು title=
Omicron Updates (File Photo)

Omicron Updates: ಕರೋನಾ ವೈರಸ್‌ನ (Coronavirus) ಓಮಿಕ್ರಾನ್ ರೂಪಾಂತರದ (Omicron Variant) ಹೆಚ್ಚುತ್ತಿರುವ ಸೋಂಕನ್ನು ನಿಲ್ಲಿಸಲಾಗುವುದಿಲ್ಲ. ಕೇರಳದಲ್ಲಿ ಕೋವಿಡ್ -19  (Covid-19)ಸೋಂಕಿನ ಕುರಿತು ರಚಿಸಲಾದ ತಜ್ಞರ ಸಮಿತಿಯ ವೈದ್ಯರು (Expert Panel Doctors) ಇದನ್ನು ಹೇಳಿದ್ದಾರೆ. ಪ್ರತಿ ಎರಡು ದಿನಗಳಿಗೊಮ್ಮೆ ಹೊಸ ರೂಪಾಂತರಗಳ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ ಎಂದು ಸಮಿತಿಯ ಸದಸ್ಯ ಡಿಎಸ್ ಅನಿಸ್ (DS Anees) ಹೇಳಿದ್ದಾರೆ. 

ದೇಶದ ಬಳಿ ಒಂದು ತಿಂಗಳ ಸಮಯಾವಕಾಶ ಇದೆ
ಸುದ್ದಿ ಸಂಸ್ಥೆ 'ANI' ಜೊತೆಗೆ ಮಾತನಾಡಿದ ಡಾ ಅನಿಸ್, 'ಜಾಗತಿಕ ಪ್ರವೃತ್ತಿಯು 2-3 ವಾರಗಳಲ್ಲಿ ಓಮಿಕ್ರಾನ್ ಪ್ರಕರಣಗಳು (Omicron Cases) 1000 ತಲುಪುತ್ತಿದೆ ಮತ್ತು 2 ತಿಂಗಳಲ್ಲಿ 1 ಮಿಲಿಯನ್ ತಲುಪಬಹುದು ಎಂದು ತೋರಿಸುತ್ತದೆ. ಭಾರತದಲ್ಲಿ ಈ ಸೋಂಕಿನ ಸ್ಫೋಟವನ್ನು ನಿಲ್ಲಿಸಲು ನಮಗೆ ಒಂದು ತಿಂಗಳಿಗಿಂತ ಹೆಚ್ಚು ಸಮಯವಿಲ್ಲ. ಇದನ್ನು ನಿಲ್ಲಿಸಬೇಕು’ ಎಂದು ಹೇಳಿದ್ದಾರೆ. ದೇಶದಲ್ಲಿ ಹೆಚ್ಚಿನ ಪ್ರಕರಣಗಳು ವಲಸಿಗರಿಗೆ ಸಂಬಂಧಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- Corona New Variant - Omicronನಿಂದ ರಕ್ಷಣೆಗೆ ಉಪಾಯ ಹುಡುಕುತ್ತಿರುವಿರಾ? ಬಂದಿದೆ ಅದಕ್ಕಿಂತಲೂ ಅಪಾಯಕಾರಿ ಕೊರೊನಾ ರೂಪಾಂತರಿ

..ಇಲ್ಲದಿದ್ದರೆ ಪರಿಸ್ಥಿತಿ ಕೈ ಮೀರುತ್ತದೆ
ಈ ಕುರಿತು ಎಚ್ಚರಿಕೆ ನೀಡಿರುವ ಸಮಿತಿ ವೈದ್ಯರು, 'ನಾವು ಭಾರತದಲ್ಲಿ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಸಿಸ್ಟಂ ಅನ್ನು ಪುನಃ ಸಕ್ರಿಯಗೊಳಿಸಲು ನಮಗೆ 1 ತಿಂಗಳು ಸಮಯವಿದೆ. ಇದರಿಂದ ಪರಿಸ್ಥಿತಿಯನ್ನು ನಾವು ನಿಯಂತ್ರಿಸಬಹುದು. ನಾವು ನಮ್ಮ ವ್ಯವಸ್ಥೆಯನ್ನು ಸಮಯಕ್ಕೆ ಸರಿಯಾಗಿ ಬಳಸಿಕೊಂಡರೂ, ಭಾರತದಂತಹ ದೇಶದಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಾಗುವ ಸಾಧ್ಯತೆ ತುಂಬಾ ಪ್ರಬಲವಾಗಿದೆ ಎಂದು ಅವರು ಹೇಳಿದ್ದಾರೆ. ಕೇರಳದಲ್ಲಿ ಇದುವರೆಗೆ 35 ಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣಗಳು ವರದಿಯಾಗಿರುವುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Omicron: ಯುರೋಪ್ ನಲ್ಲಿ ಕರೋನಾ 'ಚಂಡಮಾರುತ', ಕುಸಿಯಲಿದೆ ಆರೋಗ್ಯ ಕ್ಷೇತ್ರ; WHO ಎಚ್ಚರಿಕೆ

ಭಾರತದಲ್ಲಿನ ಓಮಿಕ್ರಾನ್ ರೂಪಾಂತರವು ಕೇಂದ್ರ, ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳನ್ನು ಚಿಂತೆಗೀಡು ಮಾಡಿದೆ. ಇದುವರೆಗೆ ಈ ರೂಪಾಂತರದ ಪ್ರಕರಣಗಳು ದೇಶದ 15 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಂಡುಬಂದಿವೆ. ಅನೇಕ ರಾಜ್ಯಗಳಲ್ಲಿ Omicron ಬೆಳೆಯುತ್ತಿರುವ ಬೆದರಿಕೆಯ ದೃಷ್ಟಿಯಿಂದ, ನಿರ್ಬಂಧಗಳು ಸಹ ಮರಳಲು ಪ್ರಾರಂಭಿಸಿವೆ. ದೇಶದ ಜನತೆಗೆ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರವೂ ಚಿಂತನ ಮಂಥನ ಆರಂಭಿಸಿದೆ. ಬೂಸ್ಟರ್ ಡೋಸ್ ನೀಡುವ ಕುರಿತು ಅಧ್ಯಯನ ನಡೆಸುವ ಜವಾಬ್ದಾರಿಯನ್ನು Translational Health Science and Technology Institute ನೀಡಲಾಗಿದೆ. ಇದರ ಅಡಿಯಲ್ಲಿ, ದೇಶದ ಜನರಿಗೆ ಹೆಚ್ಚುವರಿ ಲಸಿಕೆ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಮಾರು 3000 ಜನರಿಗೆ ಬೂಸ್ಟರ್ ಡೋಸ್ ನೀಡುವ ಮೂಲಕ ಆರಂಭದಲ್ಲಿ ಸಂಶೋಧನೆ ಮಾಡಲಾಗುವುದು.

ಇದನ್ನೂ ಓದಿ-Omicron Variant: ಉಡುಪಿಯಲ್ಲಿ 2 ಒಮಿಕ್ರಾನ್ ಕೇಸ್ ಪತ್ತೆ, ಆತಂಕ ಬೇಡವೆಂದ ಡಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News