Omicron Variant: Corona Vaccine ಮೇಲೆ ಭಾರಿ ಬೀಳಲಿದೆ ಓಮಿಕ್ರಾನ್ ರೂಪಾಂತರಿ? AIIMS ವೈದ್ಯರು ನೀಡಿದ ಹೇಳಿಕೆಯಿಂದ ಹೆಚ್ಚಾದ ಆತಂಕ

Omicron India News: ಹೊಸ ಮತ್ತು ಸಂಭಾವ್ಯವಾಗಿ  ಹೆಚ್ಚು ಸಾಂಕ್ರಾಮಿಕವಾಗಿರುವ  ರೂಪಾಂತರಿಯನ್ನು ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ ಮೊದಲ ಬಾರಿಗೆ ವರದಿ ಮಾಡಲಾಗಿದೆ.

Written by - Nitin Tabib | Last Updated : Nov 28, 2021, 08:37 PM IST
  • ಓಮಿಕ್ರಾನ್ ರೂಪಾಂತರಿಯಾ ಸ್ಪೈಕ್ ಪ್ರೋಟೀನ್ ಕ್ಷೇತ್ರದಲ್ಲಿ 30 ಕ್ಕೂ ಹೆಚ್ಚು ಬದಲಾವಣೆಗಳು ಕಂಡುಬಂದಿವೆ.
  • ಪ್ರತಿರಕ್ಷಣಾ ವ್ಯವಸ್ಥೆಗೆ ಇದು ಭಾರಿ ಪರಿಣಮಿಸುವ ಸಾಧ್ಯತೆ ಇದೆ
  • ಇದು ವೈರಸ್ ಗೆ ಲಸಿಕೆಯ ರೋಗನಿರೋಧಕ ಶಕ್ತಿಯನ್ನು ತಪ್ಪಿಸಲು ಸಹಾಯ ಮಾಡುವ ಸಾಧ್ಯತೆ ಇದೆ ಎಂದ ಡಾ. ಗುಲೇರಿಯಾ
Omicron Variant: Corona Vaccine ಮೇಲೆ ಭಾರಿ ಬೀಳಲಿದೆ ಓಮಿಕ್ರಾನ್ ರೂಪಾಂತರಿ? AIIMS ವೈದ್ಯರು ನೀಡಿದ ಹೇಳಿಕೆಯಿಂದ ಹೆಚ್ಚಾದ ಆತಂಕ title=
Omicron Variant News (File Photo)

Omicron Variant News: ಕೊರೊನಾವೈರಸ್‌ನ ಹೊಸ ಓಮಿಕ್ರಾನ್ (Omicron) ರೂಪಾಂತರಿಯ ಸ್ಪೈಕ್ ಪ್ರೋಟೀನ್ ಕ್ಷೇತ್ರದಲ್ಲಿ 30 ಕ್ಕೂ ಹೆಚ್ಚು ಬದಲಾವಣೆಗಳು ಕಂಡುಬಂದಿವೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ಇದು ಭಾರಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (AIIMS) ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ (Dr. Ranadeep Guleria) ಹೇಳಿದ್ದಾರೆ. ಇದರ ಜೊತೆಗೆ ಇದು ವೈರಸ್ ಗೆ   ಲಸಿಕೆಯ ರೋಗನಿರೋಧಕ ಶಕ್ತಿಯನ್ನು ತಪ್ಪಿಸಲು ಸಹಾಯ ಮಾಡುವ ಕಾರಣ, ಪ್ರಸ್ತುತ ಇರುವ ಲಸಿಕೆಗಳ ಪರಿಣಾಮಕಾರಿತ್ವವನ್ನು ಗಂಭೀರವಾಗಿ ಮೌಲ್ಯಮಾಪನ ಮಾಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ. ಸ್ಪೈಕ್ ಪ್ರೋಟೀನ್‌ನ ಉಪಸ್ಥಿತಿಯು ಆತಿಥೇಯ ಕೋಶಕ್ಕೆ ವೈರಸ್‌ನ ಪ್ರವೇಶವನ್ನು ಸುಗಮಗೊಳಿಸುತ್ತದೆ ಮತ್ತು ಅದು ಹರಡಲು ಮತ್ತು ಸೋಂಕನ್ನು ಉಂಟುಮಾಡಲು ಕಾರಣವಾಗುತ್ತದೆ. 

ಈ ಕುರಿತು ಮಾತನಾಡಿರುವ ಡಾ. ಗುಲೇರಿಯಾ, “ಕೊರೊನಾ ವೈರಸ್‌ನ ಹೊಸ ರೂಪಾಂತರವು ಸ್ಪೈಕ್ ಪ್ರೋಟೀನ್ ಕ್ಷೇತ್ರದಲ್ಲಿ  30 ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ ಎಂದು ವರದಿಯಾಗಿದೆ ಮತ್ತು ಆದ್ದರಿಂದ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ತಪ್ಪಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ. ಹೆಚ್ಚಿನ ಲಸಿಕೆಗಳು ಸ್ಪೈಕ್ ಪ್ರೊಟೀನ್ ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸುವ ಮೂಲಕ ಕಾರ್ಯನಿರ್ವಹಿಸುತ್ತವೆ, ಆದ್ದರಿಂದ ಸ್ಪೈಕ್ ಪ್ರೋಟೀನ್ ಕ್ಷೇತ್ರದಲ್ಲಿನ ಅನೇಕ ರೂಪಾಂತರಗಳು COVID-19 ಲಸಿಕೆಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಬಹುದು.

ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿ ಬಳಸಲಾಗುತ್ತಿರುವ ಇತರ ಲಸಿಕೆಗಳ ಪರಿಣಾಮಕಾರಿತ್ವವನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಭವಿಷ್ಯದ ಕ್ರಮವು ಅದರ ಹರಡುವಿಕೆ, ತೀವ್ರತೆ ಮತ್ತು ರೋಗನಿರೋಧಕ ಶಕ್ತಿಯನ್ನು ತಪ್ಪಿಸುವ ಸಾಮರ್ಥ್ಯದ ಕುರಿತು ಯಾವ ವಿವರಗಳು ಹೊರಹೊಮ್ಮುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. 

ಭಾರತೀಯ SARS-CoV-2 ಜೀನೋಮಿಕ್ ಒಕ್ಕೂಟವು ಕೊರೊನಾ ವೈರಸ್‌ನ ಹೊಸ ರೂಪಾಂತರ B.1.1.1.529 ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ದೇಶದಲ್ಲಿ ಅದರ ಉಪಸ್ಥಿತಿಯನ್ನು ಇನ್ನೂ ಖಚಿತಪಡಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಾ ಗುಲೇರಿಯಾ ಅವರು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳವಾಗಿರುವ ಪ್ರದೇಶದಲ್ಲಿ ಬಹಳ ಜಾಗರೂಕರಾಗಿರಬೇಕು ಮತ್ತು ಆಕ್ರಮಣಕಾರಿ ಕಣ್ಗಾವಲು ಇರಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ-COVID-19 ನ Omicron ರೂಪಾಂತರವು ಎಷ್ಟು ಅಪಾಯಕಾರಿ?

“ಇದೇ ವೇಳೆ, ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಲು ನಾವು ಪ್ರತಿಯೊಬ್ಬರನ್ನು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಮತ್ತು ನಮ್ಮ ಸುರಕ್ಷತೆಯನ್ನು ಕಡಿಮೆ ಮಾಡಬಾರದು.  ಜನರು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಇನ್ನೂ ಲಸಿಕೆ ಹಾಕದಿರುವವರು ಅದನ್ನು ತೆಗೆದುಕೊಳ್ಳಲು ಮುಂದೆ ಬರಲು ಪ್ರೋತ್ಸಾಹಿಸಬೇಕು" ಎಂದು ಡಾ. ಗುಲೇರಿಯಾ ಹೇಳಿದ್ದಾರೆ. 

ಇದನ್ನೂ ಓದಿ-Omicron Updates: ಭಾರತದ ಪಾಲಿಗೆ Omicron ಎಷ್ಟೊಂದು ಅಪಾಯಕಾರಿ, Vaccine ಎಷ್ಟು ಪರಿಣಾಮಕಾರಿ?

ಹೊಸ ಮತ್ತು ಸಂಭಾವ್ಯವಾಗಿ ಹೆಚ್ಚು ಸಾಂಕ್ರಾಮಿಕ ರೂಪಾಂತರಿ ಕುರಿತು ಮೊದಲು ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ (WHO) ನವೆಂಬರ್ 24 ರಂದು ವರದಿ ಮಾಡಲಾಗಿತ್ತು. ಅಂದಿನಿಂದ, ಬೋಟ್ಸ್ವಾನಾ, ಬೆಲ್ಜಿಯಂ, ಹಾಂಗ್ ಕಾಂಗ್ ಮತ್ತು ಇಸ್ರೇಲ್, ಇತರ ದೇಶಗಳಲ್ಲಿ ಈ ವೈರಸ್ ನ ಪ್ರಕರಣಗಳು ಕಂಡುಬಂದಿವೆ.

ಇದನ್ನೂ ಓದಿ-Omicron ಭೀತಿ: ಕೊರೊನಾ ಪರೀಕ್ಷೆ, ಕಣ್ಗಾವಲು ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News