Omicron Enters Rajasthan: ರಾಜಸ್ಥಾನಕ್ಕೆ ಓಮಿಕ್ರಾನ್ ಪ್ರವೇಶ, ಒಂದೇ ದಿನದಲ್ಲಿ 9 ಪ್ರಕರಣಗಳು ಪತ್ತೆ

Omicron Enters Rajasthan - ರಾಜಸ್ಥಾನದ ಆರೋಗ್ಯ ಇಲಾಖೆ (Rajasthan Health Department), "ರಾಜಸ್ಥಾನದ ಜೈಪುರನಲ್ಲಿ (Omicron In Jaipur) ಇದುವರೆಗೆ ಒಮಿಕ್ರಾನ್ ರೂಪಾಂತರಿಯ ಒಟ್ಟು 9 ಪ್ರಕರಣಗಳು ವರದಿಯಾಗಿವೆ" ಎಂದು ದೃಢಪಡಿಸಿದೆ.

Written by - Nitin Tabib | Last Updated : Dec 5, 2021, 09:14 PM IST
  • ದೇಶಾದ್ಯಂತ ಮತ್ತೆ ಹೆಚ್ಚಾದ ಓಮಿಕ್ರಾನ್ ಸೋಂಕಿತರ ಸಂಖ್ಯೆ
  • ಇದೀಗ ರಾಜಸ್ಥಾನದ ಜೈಪುರ್ ನಲ್ಲಿ 9 ಹೊಸ ಪ್ರಕರಣಗಳು ಪತ್ತೆ
  • ದೇಶಾದ್ಯಂತ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 21 ಕ್ಕೆ ಏರಿಕೆ
Omicron Enters Rajasthan: ರಾಜಸ್ಥಾನಕ್ಕೆ ಓಮಿಕ್ರಾನ್ ಪ್ರವೇಶ, ಒಂದೇ ದಿನದಲ್ಲಿ 9 ಪ್ರಕರಣಗಳು ಪತ್ತೆ title=
Omicron Enters Rajasthan (Representational Image)

ಜೈಪುರ: Omicron Enters Rajasthan - ದೇಶಾದ್ಯಂತ ಓಮಿಕ್ರಾನ್ (Omicron In India) ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಾರಾಷ್ಟ್ರದ ನಂತರ, ಇದೀಗ ಜೈಪುರನಲ್ಲಿ  9 ಜನರಲ್ಲಿ ದಕ್ಷಿಣ ಆಫ್ರಿಕಾದ ಓಮಿಕ್ರಾನ್ ರೂಪಾಂತರವು (New Coronavirus Variant)ದೃಢಪಟ್ಟಿದೆ. ಇವರಲ್ಲಿ 4 ಜನರು ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ್ದು, ಉಳಿದ 5 ಜನರು ಅವರೊಂದಿಗೆ ಸಂಪರ್ಕದಲ್ಲಿದ್ದರು. ಎಲ್ಲಾ 9 ಮಾದರಿಗಳಲ್ಲಿ ಓಮಿಕ್ರಾನ್ (Omicron)ದೃಢಪಟ್ಟಿದೆ. ಸದ್ಯ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಸ್ಥಿತಿ ಯಥಾಸ್ಥಿತಿಯಲ್ಲಿದೆ ಎನ್ನಲಾಗಿದೆ.

ಜೀನೋಮ್ ಅನುಕ್ರಮ ಗುರುತಿಸಲಾಗಿದೆ
ರಾಜಸ್ಥಾನದಲ್ಲಿ  ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಕುಟುಂಬವೊಂದರ ಜೀನೋಮ್ ಸಿಕ್ವೆನ್ಸಿಂಗ್ ವರದಿಯಲ್ಲಿ, 9 ಜನರು ಕರೋನಾ (Covid-19) ಹೊಸ ರೂಪಾಂತರದ ಓಮಿಕ್ರಾನ್‌ನಿಂದ (Omicron Variant) ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ವೈದ್ಯಕೀಯ ಕಾರ್ಯದರ್ಶಿ ವೈಭವ್ ಗಲಾರಿಯಾ, ಇಲಾಖೆಯು ಈಗಾಗಲೇ ದಕ್ಷಿಣ ಆಫ್ರಿಕಾದಿಂದ ಬಂದ ಕುಟುಂಬ ಸದಸ್ಯರನ್ನು RUHS ಗೆ ದಾಖಲಿಸಿದೆ ಎಂದು ಹೇಳಿದ್ದಾರೆ. ಅವರ ಸಂಪರ್ಕಕ್ಕೆ ಬಂದ ಇತರ 5 ಮಂದಿಗೂ ಸೋಂಕು (Corona) ತಗುಲಿರುವುದು ಪತ್ತೆಯಾಗಿದ್ದು, ಅವರನ್ನೂ ಆರ್‌ಯುಎಚ್‌ಎಸ್‌ಗೆ ದಾಖಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ-Omicron Updates: ಭಾರತದ ಈ ರಾಜ್ಯದಲ್ಲಿ ಓಮಿಕ್ರಾನ್ ನ 7 ಹೊಸ ಪ್ರಕರಣಗಳು ಪತ್ತೆ, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆ

34 ಮಂದಿ ಸಂಪರ್ಕಕ್ಕೆ ಬಂದಿದ್ದಾರೆ ಈ ಜನ
ದಕ್ಷಿಣ ಆಫ್ರಿಕಾದ ಕುಟುಂಬ ಸೇರಿದಂತೆ ಅವರ ಸಂಪರ್ಕಕ್ಕೆ ಬಂದ 34 ಜನರ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವೈದ್ಯಕೀಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಅದರಲ್ಲಿ 9 ಜನರಿಗೆ ಕರೋನಾ ಹೊಸ ರೂಪಾಂತರದ ಒಮಿಕ್ರಾನ್‌ನೊಂದಿಗೆ ಪಾಸಿಟಿವ್ ಕಂಡುಬಂದಿದೆ, ಉಳಿದ 25 ಜನರು ನೆಗೆಟಿವ್ ಆಗಿದ್ದಾರೆ ಎನ್ನಲಾಗಿದೆ. ಸಿಕರ್ ಜಿಲ್ಲೆಯ ಅಜಿತ್‌ಗಢದ ಕುಟುಂಬವೂ ಈ ಕುಟುಂಬದೊಂದಿಗೆ ಸಂಪರ್ಕಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ಇಲಾಖೆಯು ಸಿಕರ್‌ನಲ್ಲಿ ಎಲ್ಲಾ 8 ಜನರನ್ನು ಪತ್ತೆಹಚ್ಚಿದೆ, ಆದರೆ ಅವರೆಲ್ಲರ ಕರೋನಾ ವರದಿ ನೆಗೆಟಿವ್ ಕಂಡುಬಂದಿದೆ.

ಇದನ್ನೂ ಓದಿ-Omicron variant: ಹೊಸ ರೂಪಾಂತರದ ರೋಗಲಕ್ಷಣಗಳ ಬಗ್ಗೆ ತಜ್ಞರು ಹೇಳುವುದೇನು?

ಸಂಪರ್ಕ ಪತ್ತೆಹಚ್ಚುವಿಕೆ ಮುಂದುವರೆದಿದೆ
ಸಂಪರ್ಕಕ್ಕೆ ಬಂದ ಎಲ್ಲ ಜನರ ಸಂಪರ್ಕವನ್ನು ದೊಡ್ಡ ಪ್ರಮಾಣದಲ್ಲಿ ಪತ್ತೆಹಚ್ಚುವ ಮೂಲಕ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವೈಭವ್ ಗಲಾರಿಯಾ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಜೈಪುರಕ್ಕೆ ಕುಟುಂಬ ಆಗಮಿಸಿದಾಗಿನಿಂದ ಇಲಾಖೆಯು ಸಂಪೂರ್ಣವಾಗಿ ಸಕ್ರಿಯವಾಗಿದೆ ಮತ್ತು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಗಲಾರಿಯಾ ಹೇಳಿದ್ದಾರೆ. ಇಲಾಖೆ ವತಿಯಿಂದ ತೀವ್ರ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದ್ದು, ಸಂಪರ್ಕಕ್ಕೆ ಬಂದ ಎಲ್ಲರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-'ಭಾರತವು COVID-19 ನ ಮೊದಲ ಮತ್ತು ಎರಡನೇ ಅಲೆಗಿಂತ ಉತ್ತಮ ಸ್ಥಿತಿಯಲ್ಲಿದೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News