ನವದೆಹಲಿ: ದೇಶದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರು ಹಾಗೂ ಕೂಲಿ ಕಾರ್ಮಿಕರಿಗೆ ಮೋದಿ ಸರ್ಕಾರ ದೊಡ್ಡ ಯೋಜನೆಯೊಂದನ್ನು ಈಗಾಗಲೇ ಪ್ರಕಟಿಸಿದೆ. ಈ ಯೋಜನೆಯಲ್ಲಿ ನೀವು ಪ್ರತಿ ದಿನ 10 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿಮ್ಮ ವಯಸ್ಸಿನ 60ನೇ ವರ್ಷದ ಬಳಿಕ, ನೀವು ವಾರ್ಷಿಕವಾಗಿ 60 ಸಾವಿರ ರೂ. ಪಿಂಚಣಿ ಪಡೆಯಬಹುದಾಗಿದೆ.
ಅಟಲ್ ಪೆನ್ಷನ್ ಯೋಜನೆ ಒಂದು ಲಾಭಾಕಾರಿ ಯೋಜನೆಯಾಗಿದೆ
ಮೋದಿ ಸರ್ಕಾರ ಖಾಸಗಿ ವಲಯ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಅಟಲ್ ಪಿಂಚಣಿ ಯೋಜನೆ (ಅಟಲ್ ಪಿಂಚಣಿ ಯೋಜನೆ) ಪ್ರಾರಂಭಿಸಿದೆ. ಈ ಯೋಜನೆಯಡಿ 60 ವರ್ಷ ವಯಸ್ಸಿನಲ್ಲಿ ನೀವು ಪ್ರತಿ ತಿಂಗಳು 1,000 ರೂ., 2,000 ರೂ, 3000 ರೂ,, 4000 ರೂ. ಅಥವಾ 5000 ರೂ.ಗಳವರೆಗೆ ಪಿಂಚಣಿ ಪಡೆಯಬಹುದಾಗಿದೆ.
ಝೀ ಬಿಸಿನೆಸ್ ಡಾಟ್ ಕಾಮ್ ಪ್ರಕಟಿಸಿರುವ ವರದಿಯ ಪ್ರಕಾರ, ಈ ಯೋಜನೆಯಡಿಯಲ್ಲಿ ಒಬ್ಬ ವ್ಯಕ್ತಿಯು ದಿನಕ್ಕೆ 10 ರೂ. ಉಳಿಸಿದರೆ, 60 ವರ್ಷಗಳ ನಂತರ, ಅವನಿಗೆ ತಿಂಗಳಿಗೆ 5,000 ರೂ. ಅಥವಾ ವಾರ್ಷಿಕವಾಗಿ 60,000 ರೂ. ಆದಾಯ ಸಿಗಲಿದೆ. ಅಟಲ್ ಪಿಂಚಣಿ ಯೋಜನೆಯಲ್ಲಿ, ಸರ್ಕಾರವು ಕನಿಷ್ಠ ಪಿಂಚಣಿ ಖಾತರಿಪಡಿಸುತ್ತದೆ. ಒಂದು ವೇಳೆ ಪಿಂಚಣಿದಾರರ ನೈಜ ಆದಾಯದಲ್ಲಿ ಯಾವುದೇ ರೀತಿಯ ಕೊರತೆಯಾಗಿದ್ದರೆ, ಸರ್ಕಾರ ಅದರ ಕೊರತೆಯನ್ನು ಸರಿದೂಗಿಸುತ್ತದೆ.
ಅಟಲ್ ಪೆನ್ಷನ್ ಯೋಜನೆಯ ಲಾಭಗಳು
- 18 ರಿಂದ 40 ವರ್ಷದೊಳಗಿನ ವ್ಯಕ್ತಿ ಈ ಪಿಂಚಣಿ ಯೋಜನೆಗೆ ಸೇರಬಹುದು.
- ಪಿಂಚಣಿಯ ಲಾಭ ಪಡೆಯಲು, ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಇರಬೇಕು.
- ಇದರಲ್ಲಿ, ನೀವು ಜೀವನಕ್ಕಾಗಿ ಮಾಸಿಕ ಪಿಂಚಣಿ ಪಡೆಯುತ್ತೀರಿ.
- ಯೋಜನೆಯಡಿ ಕನಿಷ್ಠ 1,000 ರೂ ಮತ್ತು ಗರಿಷ್ಠ 5,000 ರೂ. ಪಿಂಚಣಿ ಸಿಗಲಿದೆ.
- ಯೋಜನೆ ಮುಕ್ತಾಯಗೊಳ್ಳುವ ಮೊದಲು ಪಿಂಚಣಿದಾರ ಮರಣ ಹೊಂದಿದರೆ ಪಿಂಚಣಿಯನ್ನು ಆತನ ನಾಮಿನಿ (ಸಂಗಾತಿಗೆ) ನೀಡಲಾಗುತ್ತದೆ.
- ಇಬ್ಬರ ಮರಣದ ನಂತರ, ಎರಡನೇ ನಾಮಿನಿಗೆ ಹಣ ಸಿಗುತ್ತದೆ.
- ಆದಾಯ ತೆರಿಗೆಯ ಸೆಕ್ಷನ್ 80 ಸಿಸಿಡಿ ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನ ಕೂಡ ಇದರಲ್ಲಿದೆ
- ಒಬ್ಬ ಸದಸ್ಯನ ಹೆಸರಿನಲ್ಲಿ ಕೇವಲ 1 ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ.