ಏಮ್ಸ್ ನರ್ಸಿಂಗ್ ಯೂನಿಯನ್ ಮುಷ್ಕರ: ನರ್ಸಿಂಗ್ ಅಧಿಕಾರಿ ಹರೀಶ್ ಕಾಜ್ಲಾ ಅವರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ನರ್ಸಿಂಗ್ ಯೂನಿಯನ್ ಮಂಗಳವಾರದಿಂದ (ಎಪ್ರಿಲ್ 26) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಈ ಕುರಿತಂತೆ ದೆಹಲಿಯ ಎಐಐಎಂಎಸ್ ನಿರ್ದೇಶಕರಿಗೆ ಪತ್ರ ಬರೆದಿರುವ ನರ್ಸಿಂಗ್ ಯೂನಿಯನ್, "ಏಮ್ಸ್ ನರ್ಸ್ ಯೂನಿಯನ್ ಅಧ್ಯಕ್ಷ ಹರೀಶ್ ಕಾಜ್ಲಾ ಅವರನ್ನು ಸರಿಯಾದ ಕಾರಣಗಳನ್ನು ಉಲ್ಲೇಖಿಸದೆ ಅಮಾನತುಗೊಳಿಸುವ ನಿಮ್ಮ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ 26/4/2022 ರಂದು ಬೆಳಿಗ್ಗೆ 8 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಒಕ್ಕೂಟವು ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದೆ.
ನರ್ಸಿಂಗ್ ಯೂನಿಯನ್ ಬರೆದಿರುವ ಪತ್ರದಲ್ಲಿ, ನರ್ಸಿಂಗ್ ಅಧಿಕಾರಿ ಹರೀಶ್ ಕಾಜ್ಲಾ ಅವರನ್ನು ಯಾವುದೇ ರೀತಿಯ ಸೂಕ್ತ ಕಾರಣ ನೀಡದೆ ಸಸ್ಪೆಂಡ್ ಮಾಡಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ. ಹರೀಶ್ ಕುಮಾರ್ ಕಾಜ್ಲಾ ಅವರ ಅಮಾನತುಗೊಳಿಸುವಿಕೆಯನ್ನು ತಕ್ಷಣವೇ ಹಿಂಪಡೆಯಲು ಮತ್ತು ಯೂನಿಯನ್ ಕಾರ್ಯನಿರ್ವಾಹಕರು ಮತ್ತು ಮುಖ್ಯ ಒಟಿಯ ಯೂನಿಯನ್ ಸದಸ್ಯರ ಮೇಲಿನ ನಡೆಯುತ್ತಿರುವ ಎಲ್ಲಾ ರೀತಿಯ ಪ್ರತೀಕಾರದ ಕ್ರಮಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಈ ಮುಷ್ಕರಕ್ಕೆ ಕರೆ ನೀಡಿರುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ- Fake News ಚಲಾಯಿಸಿದ 16 ಯೂಟ್ಯೂಬ್ ಚಾನೆಲ್ ಗಳ ಮೇಲೆ ಕೇಂದ್ರ ಸರ್ಕಾರದ ನಿರ್ಬಂಧ
ಹರೀಶ್ ಕಾಜ್ಲಾ ಅವರನ್ನು ಸಸ್ಪೆಂಡ್ ಮಾಡಲು ಕಾರಣ:
ವಾಸ್ತವವಾಗಿ, ಒಟಿ ರೋಗಿಗಳ ಸೇವೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ನರ್ಸಿಂಗ್ ಅಧಿಕಾರಿ ಹರೀಶ್ ಕಾಜ್ಲಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೋಮವಾರ (ಎಪ್ರಿಲ್ 25) ಅಮಾನತುಗೊಳಿಸಲಾಗಿದೆ. "ನವದೆಹಲಿಯ ಏಮ್ಸ್ ನ ನರ್ಸಿಂಗ್ ಅಧಿಕಾರಿ ಹರೀಶ್ ಕುಮಾರ್ ಕಾಜ್ಲಾ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಚಿಂತನೆ ನಡೆಸಲಾಗಿದೆ" ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
In response to the suspension of AIIMS nursing officer Harish Kajla, also the president of the nurses union of the hospital, the nursing staff to go on an indefinite strike from today
The nurses union has demanded the immediate revocation of Kajla's suspension. pic.twitter.com/hcrj90bZ1A
— ANI (@ANI) April 26, 2022
ನರ್ಸಿಂಗ್ ಅಧಿಕಾರಿ ಹರೀಶ್ ಕಾಜ್ಲಾ, ಅವರನ್ನು ಏಮ್ಸ್ ನಿಯಮಾವಳಿ 2019 ರ ಅಡಿಯಲ್ಲಿ ಅಮಾನತುಗೊಳಿಸಲಾಗಿದೆ, ಈ ಆದೇಶಕ್ಕೆ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಸಹಿ ಹಾಕಿದ್ದಾರೆ. ಏಪ್ರಿಲ್ 22 ರಂದು, ರೆಸಿಡೆನ್ಶಿಯಲ್ ವೈದ್ಯರ ಸಂಘವು (ಆರ್‌ಡಿಎ) ಕಾಜ್ಲಾ ವಿರುದ್ಧ ಕರ್ತವ್ಯದಲ್ಲಿರುವ ರೆಸಿಡೆನ್ಶಿಯಲ್ ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ದೂರು ದಾಖಲಿಸಿದೆ. ಈ ಹಿನ್ನಲೆಯಲ್ಲಿ ಕಾಜ್ಲಾ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಮತ್ತು ಅವರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳುವಂತೆ ದೂರುನಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ- Gold Price: ಬಂಗಾರ ಪ್ರಿಯರೇ ಗುಡ್ ನ್ಯೂಸ್: ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ!
ವೈದ್ಯರೊಂದಿಗೆ ಅನುಚಿತ ವರ್ತನೆಯ ಆರೋಪ ಎದುರಿಸುತ್ತಿರುವ ಹರೀಶ್ ಕಾಜ್ಲಾ:
ರೆಸಿಡೆನ್ಶಿಯಲ್ ವೈದ್ಯರ ಸಂಘವು (ಆರ್‌ಡಿಎ) ಏಮ್ಸ್ ಆಡಳಿತಕ್ಕೆ ನೀಡಿದ ದೂರಿನ ಪತ್ರದಲ್ಲಿ, ಎಪ್ರಿಲ್ 22 ರ ಬೆಳಿಗ್ಗೆ ಕರ್ತವ್ಯದಲ್ಲಿದ್ದ ರೆಸಿಡೆನ್ಶಿಯಲ್ ವೈದ್ಯರೊಂದಿಗೆ ನರ್ಸಿಂಗ್ ಅಧಿಕಾರಿಯೊಬ್ಬರು ಅಸಭ್ಯವಾಗಿ ವರ್ತಿಸಿದ ಅತ್ಯಂತ ನಾಚಿಕೆಗೇಡಿನ ಘಟನೆ ನಡೆದಿದೆ. ವೈದ್ಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿ ಹರೀಶ್ ಕಾಜ್ಲಾ ಅವರು ಒಟಿ ಸಿಬ್ಬಂದಿಯನ್ನು ಪ್ರಚೋದಿಸುವ ಮೂಲಕ ಅಗತ್ಯ ಸೇವೆಗಳಿಗೆ ಅಡ್ಡಿಪಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಮುಖ್ಯ ಆಪರೇಷನ್ ಥಿಯೇಟರ್‌ನಲ್ಲಿ (ಒಟಿಯಲ್ಲಿ) ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಅಂದು ನಿಗದಿಯಾಗಿದ್ದ 50ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ರದ್ದುಗೊಳಿಸಬೇಕಾಯಿತು. ಈ ಘಟನೆ ಬಳಿಕ ಏಮ್ಸ್ ಆಡಳಿತವು ತನ್ನ ಕೆಲವು ನರ್ಸಿಂಗ್ ಅಧಿಕಾರಿಗಳಿಗೆ ಶನಿವಾರ ಶೋಕಾಸ್ ನೋಟಿಸ್‌ಗಳನ್ನು ನೀಡಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.