ಬಂಗಾಳದಲ್ಲಿಯೂ ಎನ್ಆರ್ಸಿ, ಆದರೆ ಯಾವ ಹಿಂದೂ ಕೂಡ ದೇಶ ಬಿಡುವ ಹಾಗಿಲ್ಲ- ವಿಜಯ್ ವರ್ಗಿಯಾ

 ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಗೆ ಬರುವುದಿಲ್ಲ ಎಂದು ಒಂದು ಕಡೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪದೇ ಪದೇ ಭರವಸೆ ನೀಡುತ್ತಿರುವ ಮಧ್ಯೆ, ಈಗ ಅಲ್ಲಿಯೂ ಕೂಡ ಎನ್ಆರ್ಸಿ ಜಾರಿಗೆ ತರಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಬುಧವಾರ ಹೇಳಿದ್ದಾರೆ.

Last Updated : Sep 25, 2019, 05:20 PM IST
ಬಂಗಾಳದಲ್ಲಿಯೂ ಎನ್ಆರ್ಸಿ, ಆದರೆ ಯಾವ ಹಿಂದೂ ಕೂಡ ದೇಶ ಬಿಡುವ ಹಾಗಿಲ್ಲ- ವಿಜಯ್ ವರ್ಗಿಯಾ  title=

ನವದೆಹಲಿ:  ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಗೆ ಬರುವುದಿಲ್ಲ ಎಂದು ಒಂದು ಕಡೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪದೇ ಪದೇ ಭರವಸೆ ನೀಡುತ್ತಿರುವ ಮಧ್ಯೆ, ಈಗ ಅಲ್ಲಿಯೂ ಕೂಡ ಎನ್ಆರ್ಸಿ ಜಾರಿಗೆ ತರಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಬುಧವಾರ ಹೇಳಿದ್ದಾರೆ.

ಎನ್‌ಆರ್‌ಸಿಯಲ್ಲಿ ಪ್ರಚಾರ ಮಾಡುವ ಮೂಲಕ ಬಿಜೆಪಿ ರಾಜ್ಯದಲ್ಲಿ ಭಯದ ವಾತಾವರಣ ಹರಡಿದೆ ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದ ಎರಡು ದಿನಗಳ ನಂತರ ವಿಜಯ್ ವರ್ಗಿಯಾ ಅವರ ಹೇಳಿಕೆಗಳು ಬಂದಿವೆ. ಮಂಗಳವಾರ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಅಗತ್ಯವಾದ ಪ್ರಮಾಣಪತ್ರಗಳನ್ನು ಪಡೆಯಲು ವಿಫಲವಾದ ಕಾರಣ ಇನ್ನಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈಗ ಸಾವಿನ ಸಂಖ್ಯೆಯನ್ನು ಎಂಟಕ್ಕೆ ಏರಿದೆ ಎಂದು ಪಿಟಿಐ ವರದಿ ಮಾಡಿದೆ.

ಮಮತಾ ಬ್ಯಾನರ್ಜೀ ಅವರನ್ನು ಹೆಸರಿಸದೆಯೇ ವಾಗ್ದಾಳಿ ನಡೆಸಿದ ಅವರು ಕೆಲವು ರಾಜಕೀಯ ವ್ಯಕ್ತಿಗಳು ಮತ್ತು ಪಕ್ಷಗಳು ಎನ್ ಆರ್ ಸಿ ಬಗ್ಗೆ ಜನರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿವೆ ಎಂದರು. 'ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಎನ್‌ಆರ್‌ಸಿ ಜಾರಿಗೆ ಬರಲಿದೆ ಎಂದು ನಿಮ್ಮೆಲ್ಲರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ. ಆದರೆ ಒಬ್ಬ ಹಿಂದೂ ಕೂಡ ದೇಶವನ್ನು ತೊರೆಯಬೇಕಾಗಿಲ್ಲ. ಪ್ರತಿಯೊಬ್ಬ ಹಿಂದೂಗೂ ಪೌರತ್ವ ನೀಡಲಾಗುವುದು 'ಎಂದು ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ವಿಜಯವರ್ಗಿಯ ಹೇಳಿದರು. 

Trending News