ಇನ್ಮುಂದೆ ನೀವು ATM ಅನ್ನು ಸ್ಪರ್ಶಿಸದೆಯೇ ಹಣ ವಿಥ್ ಡ್ರಾ ಮಾಡಬಹುದು

ಜನರಿಂದ ಜನರಿಗಾಗುವ ಸ್ಪರ್ಶ ಹಾಗೂ ಮೇಲ್ಮೈಗಳ ಸ್ಪರ್ಶದಿಂದ ಉಳಿಯುವುದು ಇಂದಿನ ಅವಶ್ಯಕತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಟ್ಯಾಕ್ಟ್ ಫ್ರೀ ATM ಒಂದು ಉತ್ತಮ ಆಯ್ಕೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.

Last Updated : Jun 10, 2020, 04:20 PM IST
ಇನ್ಮುಂದೆ ನೀವು ATM ಅನ್ನು ಸ್ಪರ್ಶಿಸದೆಯೇ ಹಣ ವಿಥ್ ಡ್ರಾ ಮಾಡಬಹುದು title=

ನವದೆಹಲಿ: ಕೊರೊನಾ ವೈರಸ್ ಮಹಾಮಾರಿಯ ಕಾಲದಲ್ಲಿ ಜನರು ಮೇಲ್ಮೈಗಳನ್ನು ಸ್ಪರ್ಶಿಸುವುದರಿಂದ ದೂರ ಉಳಿಯುವುದು ಅವಶ್ಯಕವಾಗಿದೆ.  ಇಂತಹುದರಲ್ಲಿ ಕಾಂಟಾಕ್ಟ್ ಫ್ರೀ ATMಗಳು ಒಂದು ಉತ್ತಮ ಆಯ್ಕೆಯಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳು ಇವೆ. ಹೌದು, Empays ಪೇಮೆಂಟ್ ಸಿಸ್ಟಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮಾಸ್ಟರ್ ಕಾರ್ಡ್ ಜೊತೆಗೆ ಒಡಂಬಡಿಕೆಯೊಂದನ್ನು ಮಾಡಿಕೊಂಡು ಕಾರ್ಡ್ ರಹಿತ ATM ಗಳನ್ನು ಆರಂಭಿಸಿದೆ. ಈ ATM ಗಳನ್ನು ಸ್ಪರ್ಶಿಸುವ ಅಗತ್ಯ ಇಲ್ಲ ಹಾಗೂ ಇವು ಸುರಕ್ಷಿತ ಕೂಡ ಆಗಿವೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ Empays IMT ಪೆಮೆಂತ್ಸ್ ಸಿಸ್ಟಮ್ ಜೊತೆಗೆ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದ್ದು, ಅದರ ಅಡಿ ಕಂಪನಿ IMT ಪೇಮೆಂಟ್ಸ್ ಸಿಸ್ಟಮ್ ಹಿಂದೆ ಇರುವ ಬೇಸಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿ, ಮಾಸ್ಟರ್ ಕಾರ್ಡ್ ಕಾರ್ಡ್ ಲೆಸ್ ಕಾರ್ಡ್ ಲೆಸ್ ATM ಅವಶ್ಯಕತೆಯನ್ನು ಶಾಮೀಲುಗೊಳಿಸಲಾಗುವುದು ಹಾಗೂ EMV ಕ್ಯಾಶ್ ವಿಥ್ ಡ್ರಾ ವ್ಯವಹಾರ ನಡೆಸಲಾಗುವುದು ಎಂದು ಹೇಳಿದೆ.

IMT ವಿಶ್ವಾದ್ಯಂತ ಕಾರ್ಡ್ ಲೆಸ್ ಹಣ ವಿಥ್ ಡ್ರಾ ಮಾತುವ ಅತಿದೊಡ್ಡ ಏಟಿಎಂ ನೆಟ್ವರ್ಕ್. ಇದು ಭಾರತದ ದೇಶಾದ್ಯಂತ ಸುಮಾರು 40000 ATM ಗಳನ್ನು ಹೊಂದಿದೆ. ಈ ATM ಗಳಿಂದ ಯಾವುದೇ ಕಾರ್ಡ್ ಸಹಾಯ ಇಲ್ಲದೆ ಹಾಗೂ ಫಿಸಿಕಲ್ ಕಾಂಟಾಕ್ಟ್ ಇಲ್ಲದೆ ಹಣವನ್ನು ವಿಥ್ ಡ್ರಾ ಮಾಡಬಹುದಾಗಿದೆ. ಇದಕ್ಕಾಗಿ SMS ಟೆಕ್ನಾಲಾಜಿ ಬಳಸಲಾಗುತ್ತದೆ. EMPAYSಗೆ ಭಾರತೀಯ ರಿಸರ್ವ ಬ್ಯಾಂಕ್ ಪೇಮೆಂಟ್ ಸಿಸ್ಟಮ್ ರೂಪದಲ್ಲಿ ಅಧಿಕೃತ ಮಾನ್ಯತೆ ನೀಡಿದೆ.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ಇದು ಕೇವಲ ನಾಲ್ಕು ಸುಲಭ ಸ್ಟೆಪ್ಸ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ. 
1. ಬ್ಯಾಂಕಿಂಗ್ ಆಪ್ ಓಪನ್ ಮಾಡಿ 
2. ATMನಲ್ಲಿ QR ಕೋಡ್ ಸ್ಕ್ಯಾನ್ ಮಾಡಿ.
3. ಬ್ಯಾಂಕಿಂಗ್ ಆಪ್ ನಲ್ಲಿ ನೀವು ವಿಥ್ ಡ್ರಾ ಮಾಡಬಯಸುವ ರಾಷ್ಟಿಯನ್ನು ನಮೂದಿಸಿ.
4 ATMನಿಂದ ಹಣಪಡೆಯಿರಿ. 
ಇದಕ್ಕಾಗಿ ನೀವು ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ನ ಫಿಸಿಕಲ್ ಕಾರ್ಡ್ ಬಳಸುವ ಅಗತ್ಯತೆ ಇಲ್ಲ. ಹೀಗಾಗಿ ನೀವು ಅನಾವಶ್ಯಕವಾಗಿ ಸ್ಪರ್ಶಿಸುವುದರಿಂದ ದೂರ ಇರಬಹುದು. ಹೀಗಾಗಿ ಕೊರೊನಾ ಕಾಲದಲ್ಲಿ ಇದು ATM ನಿಂದ ಹಣ ಹಿಂಪಡೆಯುವ ಒಂದು ಉತ್ತಮ ವಿಕಲ್ಪವಾಗಿದೆ.

Trending News