ಇನ್ಮುಂದೆ ಯಾವುದೇ ಪ್ರಮಾಣ ನೀಡದೆ AADHAAR ಅಡ್ರೆಸ್ಸ್ ಬದಲಾಯಿಸಿ

ನೀವು ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ನವೀಕರಿಸಬೇಕೇ ... ಇದುವರೆಗೂ ಹಳೆಯ ಮನೆಯ ವಿಳಾಸ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಇದ್ದರೆ ಚಿಂತಿಸಬೇಡಿ, ಆಧಾರ್ ನೀಡುವ ಸಂಸ್ಥೆ ಯುಐಡಿಎಐ ನಿಮ್ಮ ಮತ್ತು ನಿಮ್ಮ ಮನೆಯವರಿಗೆ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಸುಲಭವಾಗಿ ಬದಲಾಯಿಸುವ ಮಾರ್ಗವನ್ನು ಸೂಚಿಸಿದೆ.

Last Updated : Mar 16, 2020, 04:48 PM IST
ಇನ್ಮುಂದೆ ಯಾವುದೇ ಪ್ರಮಾಣ ನೀಡದೆ AADHAAR ಅಡ್ರೆಸ್ಸ್ ಬದಲಾಯಿಸಿ title=

ನೀವು ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ನವೀಕರಿಸಬೇಕೇ ... ಇದುವರೆಗೂ ಹಳೆಯ ಮನೆಯ ವಿಳಾಸ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಇದ್ದರೆ ಚಿಂತಿಸಬೇಡಿ, ಆಧಾರ್ ನೀಡುವ ಸಂಸ್ಥೆ ಯುಐಡಿಎಐ ನಿಮ್ಮ ಮತ್ತು ನಿಮ್ಮ ಮನೆಯವರಿಗೆ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಸುಲಭವಾಗಿ ಬದಲಾಯಿಸುವ ಮಾರ್ಗವನ್ನು ಸೂಚಿಸಿದೆ. ಈ ಮಾರ್ಗವನ್ನು ಅನುಸರಿಸಿ ಸುಲಭವಾಣಿ ನಿಮ್ಮ ಹಾಗೂ ಮಿಮ್ಮ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಅಡ್ರೆಸ್ ಬದಲಾಯಿಸಬಹುದಾಗಿದೆ. ಹಲವು ಬಾರಿ ಜನರು ನೌಕರಿ ನಿಮಿತ್ತ ಅಥವಾ ಮಕ್ಕಳ ವಿದ್ಯಾಭ್ಯಾಸದ ಕಾರಣ ಬೇರೆ ನಗರಗಳಿಗೆ ಶಿಫ್ಟ್ ಆಗುತ್ತಾರೆ, ಆದರೆ, ಆಧಾರ್ ಕಾರ್ಡ್ ನಲ್ಲಿ ಅಲ್ಲಿನ ಅಡ್ರೆಸ್ ಇರದೇ ಹೋದ ಸಂದರ್ಭದಲ್ಲಿ ಅವರು ತೊಂದರೆಗಳನ್ನು ಅನುಭವಿಸುತ್ತಾರೆ.

ಈ ಕುರಿತು UIDAI ಟ್ವೀಟ್ ಮಾಡಿದೆ
ಈ ಕುರಿತು ಟ್ವೀಟ್ ಮಾಡಿರುವ UIDAI ಇನ್ಮುಂದೆ ನೀವು 'ಅಡ್ರೆಸ್ ವ್ಯಾಲಿಡೆಶನ್ ಲೆಟರ್'ನ ಬಳಕೆ ಮಾಡಿ ಸುಲಭವಾಗಿ ನಿಮ್ಮ ಆಧಾರ್ ಅಡ್ರೆಸ್ ಅನ್ನು ಅಪ್ಡೇಟ್ ಮಾಡಬಹುದು ಎಂದು ಹೇಳಿದೆ. ಜೊತೆಗೆ ನಿಮ್ಮ ಕುಟುಂಬ ಸದಸ್ಯರ ಅಧಾರ ಅಡ್ರೆಸ್ ಅನ್ನೂ ಕೂಡ ನೀವು ಮನೆಯಲ್ಲಿಯೇ ಕುಳಿತು ಅಪ್ಡೇಟ್ ಮಾಡಬಹುದು ಎಂದು ಸಂಸ್ಥೆ ತನ್ನ ಟ್ವೀಟ್ ನಲ್ಲಿ ಹೇಳಿದೆ.

ಯಾವುದೇ ದಾಖಲೆ ನೀಡದೆಯೂ ಕೂಡ ನೀವು ನಿಮ್ಮ ಅಡ್ರೆಸ್ ಅಪ್ಡೇಟ್ ಮಾಡಬಹುದು
ಒಂದು ವೇಳೆ ನಿಮ್ಮ ಹೊಸ ವಿಳಾಸಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ನಿಮ್ಮ ಬಳಿ ಇಲ್ಲದೆ ಇದ್ದರೂ ಕೂಡ ನೀವು ನಿಮ್ಮ ಅಡ್ರೆಸ್ ಅನ್ನು ಅಪ್ಡೇಟ್ ಮಾಡಬಹುದು. ಇದಕ್ಕಾಗಿ ಮೊದಲು ನೀವು UIDAI ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಬೇಕು. ಬಳಿಕ ಅಲ್ಲಿ ನೀವು ಅಡ್ರೆಸ್ ವ್ಯಾಲಿಡೆಶನ್ ಲೆಟರ್ ಪಡೆಯಲು ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಮನೆಯ ವಿಳಾಸಕ್ಕೆ ಒಂದು ಪತ್ರ ಬರಲಿದ್ದು, ಈ ಪತ್ರದಲ್ಲಿ ಸಿಕ್ರೆಟ್ ಕೊಡ್ ಇರಲಿದೆ. ಈ ಸಿಕ್ರೆಟ್ ಕೋಡ್ ಬಳಸಿ ನೀವು ನಿಮ್ಮ ಆಧಾರ್ ನ ವಿಳಾಸವನ್ನು ಬದಲಾವಣೆ ಮಾಡಬಹುದಾಗಿದೆ. ಈ ಅಡ್ರೆಸ್ ವ್ಯಾಲಿಡೆಶನ್ ಲೇಟರ್ ಅಡಿಯಲ್ಲಿ ನೀವು ನಿಮ್ಮ ಕುಟುಂಬ ಸದಸ್ಯರು, ಬಂಧು ಮಿತ್ರರು, ಇತರೆ ಕುಟುಂಬ ಸದಸ್ಯರು, ಮನೆ ಮಾಲೀಕರು ಅಥವಾ ಯಾವುದೇ ವ್ಯಕ್ತಿಯ ಅಡ್ರೆಸ್ ಕೂಡ ಅಪ್ಡೇಟ್ ಮಾಡಬಹುದು.

ಹೀಗೆ ನಿಮ್ಮ ಆಧಾರ್ ಅಡ್ರೆಸ್ಸ್ ಅಪ್ಡೇಟ್ ಮಾಡಿ

  • ಮೊದಲು UIDAIನ ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ.
  • ಬಳಿಕ ಅಲ್ಲಿ ಅಪ್ಡೇಟ್ ಅಡ್ರೆಸ್ಸ್ ಮೇಲೆ ಕ್ಲಿಕ್ಕಿಸಿ.
  • ನಂತರ ನಿಮ್ಮ 12 ಅಂಕಗಳ ಆಧಾರ್ ಸಂಖ್ಯೆ ನಮೂದಿಸಿ.
  • ಟೆಕ್ಸ್ಟ್ ವೆರಿಫಿಕೆಶನ್ ಗಾಗಿ ಸೆಂಡ್ OTP ಮೇಲೆ ಕ್ಲಿಕ್ಕಿಸಿ.
  • ಈಗ ನೀವು OTP ನಮೂದಿಸಬೇಕು. ಇದಾದ ಬಳಿಕ ಅಡ್ರೆಸ್ ಒಪ್ಶನ್ ಮೇಲೆ ಕ್ಲಿಕ್ಕಿಸಿ.
  • ನಂತರ ಅಲ್ಲಿ ನಿಮ್ಮ ಹಾಲಿ ಅಡ್ರೆಸ್ ಅನ್ನು ನಮೂದಿಸಿ ಸಬ್ಮಿಟ್ ಮಾಡಬೇಕು.
  • ಬಳಿಕ ಡಿಕ್ಲೆರೇಶನ್ ಮೇಲೆ ಕ್ಲಿಕ್ಕಿಸಿ ಮುಂದುವರೆಯಿರಿ.
  • ಈ ಪ್ರಕ್ರಿಯ ಪೂರ್ಣಗೊಂಡ ಕೆಲ ಸಮಯದ ಬಳಿಕ ನಿಮ್ಮ ಅಡ್ರೆಸ್ಸ್ ಅಪ್ಡೇಟ್ ಆಗಲಿದೆ.

Trending News