ಈಗ ಒಂದೇ ಒಂದು ಕರೆಯಲ್ಲಿ ಸಿಗಲಿದ್ದಾರೆ ಡಾಕ್ಟರ್

ದೇಶದಲ್ಲಿ ಕರೋನಾವೈರಸ್ ಸೋಂಕು ಹೆಚ್ಚುತ್ತಿದೆ. ಪ್ರಸ್ತುತ ಪ್ರತಿದಿನ ಸುಮಾರು ಆರು ಸಾವಿರ ಹೊಸ ಪ್ರಕರಣಗಳು ಹೊರಬರುತ್ತಿವೆ. 

Last Updated : May 27, 2020, 10:50 AM IST
ಈಗ ಒಂದೇ ಒಂದು ಕರೆಯಲ್ಲಿ ಸಿಗಲಿದ್ದಾರೆ ಡಾಕ್ಟರ್ title=

ನವದೆಹಲಿ: ದೇಶದಲ್ಲಿ ಕರೋನವೈರಸ್ (Coronavirus)  ಸೋಂಕು ಹೆಚ್ಚುತ್ತಿದೆ. ಪ್ರಸ್ತುತ ಪ್ರತಿದಿನ ಸುಮಾರು ಆರು ಸಾವಿರ ಹೊಸ ಪ್ರಕರಣಗಳು ಹೊರಬರುತ್ತಿವೆ.  ಈ ಸಮಯದಲ್ಲಿ ಸಾಮಾನ್ಯ ಶೀತ, ಜ್ವರ ಬಂದರೂ ಜನರು ಗಾಬರಿಗೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕರೋನಾ ಭೀತಿ ಹೆಚ್ಚಾಗಿದೆ. ಅದಾಗ್ಯೂ ಜ್ವರ ಬಂದರೂ ಕೆಲವರು ಇದನ್ನು ಸಾಮಾನ್ಯ ಸೋಂಕು ಎಂದು ಆಸ್ಪತ್ರೆಗೆ ಹೋಗುವುದಿಲ್ಲ. ಇನ್ನೂ ಕೆಲವರು ಆಸ್ಪತ್ರೆಗೆ ಹೋದರೆ ಎಲ್ಲಿ ಕರೋನಾವೈರಸ್ ಕೋವಿಡ್ -19 (Covid-19) ಸೋಂಕು ತಾಗುವುದೋ ಎಂಬ ಭಯಕ್ಕೆ ವೈದ್ಯರನ್ನು ಸಂಪರ್ಕಿಸಲು ಹೋಗುವುದಿಲ್ಲ. ಜನರ ಈ ಸಮಸ್ಯೆಯನ್ನು ಹೋಗಲಾಡಿಸಲು, ನೋಯ್ಡಾ ಪ್ರಾಧಿಕಾರವು ಒಂದೇ ಒಂದು ಕರೆಯಲ್ಲಿ ವೈದ್ಯರು ಲಭ್ಯವಾಗುವಂತೆ ಕ್ರಮ ಕೈಗೊಂಡಿದೆ.

ನೋಯ್ಡಾ ಪ್ರಾಧಿಕಾರವು ಟ್ವೀಟ್ ಮಾಡುವ ಮೂಲಕ ಇದರ ಬಗ್ಗೆ ಮಾಹಿತಿ ನೀಡಿದೆ. ನೋಯ್ಡಾ ಪ್ರಾಧಿಕಾರವು ಲಾಕ್‌ಡೌನ್ (Lockdown)‌ ಸಮಯದಲ್ಲಿ ಪ್ರಾಧಿಕಾರವು ನೋಯ್ಡಾ ನಿವಾಸಿಗಳಿಗೆ   ಡಾಕ್ಟರ್-ಆನ್-ಕಾಲ್ ಸೇವೆಯನ್ನು ಪ್ರಾರಂಭಿಸಿದೆ. ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ 0120-2422317 ಗೆ ಕರೆ ಮಾಡಿ ನಿಮ್ಮ ರೋಗದ ಪ್ರಕಾರ ಕೌನ್ಸೆಲಿಂಗ್ ಪಡೆಯಬಹುದು. ಭಾರತೀಯ ವೈದ್ಯ ಸಂಘದ ಸಹಯೋಗದೊಂದಿಗೆ ಈ ವೈದ್ಯರ ಸಮಾಲೋಚನೆ ಸೇವೆಯನ್ನು ಪ್ರಾರಂಭಿಸಲಾಗಿದೆ.

ಲಾಕ್ ಡೌನ್ ಸಮಯದಲ್ಲಿ ನೋಯ್ಡಾ ಜನರಿಗೆ ಅನುಕೂಲಕ್ಕಾಗಿ ಪ್ರಾಧಿಕಾರವು ಈ ಸೇವೆಯನ್ನು ಪ್ರಾರಂಭಿಸಿದೆ. ನೋಯ್ಡಾ ಜನರು ನೋಯ್ಡಾ ಪ್ರಾಧಿಕಾರವು ಒದಗಿಸಿದ ಸಂಖ್ಯೆ 0120-2422317 ಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಸಂಪರ್ಕಿಸಬಹುದು. 

Trending News