ದೆಹಲಿಯ ಹೋಟೆಲ್-ಗೆಸ್ಟ್ ಹೌಸ್ ಗಳಲ್ಲಿ ಚೀನಿಯರಿಗೆ No Entry, ಈಗೇನು ಮಾಡಲಿದೆ ಡ್ರ್ಯಾಗನ್?

ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಹಿಂಸಾತ್ಮಕ ಘರ್ಷಣೆಯ ನಂತರ ದೇಶಾದ್ಯಂತ ಜನರು ಬೀಜಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Last Updated : Jun 25, 2020, 01:58 PM IST
ದೆಹಲಿಯ ಹೋಟೆಲ್-ಗೆಸ್ಟ್ ಹೌಸ್ ಗಳಲ್ಲಿ ಚೀನಿಯರಿಗೆ No Entry, ಈಗೇನು ಮಾಡಲಿದೆ ಡ್ರ್ಯಾಗನ್? title=

ನವದೆಹಲಿ:ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಹಿಂಸಾತ್ಮಕ ಘರ್ಷಣೆಯ ನಂತರ ದೇಶಾದ್ಯಂತ ಜನರು ಬೀಜಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕಾರಣದಿಂದ, ಚೀನಾದ ಸರಕುಗಳನ್ನು ಬಹಿಷ್ಕರಿಸುವಂತೆ ದೇಶಾದ್ಯಂತ ಕೂಗು ಕೇಳಿಬರಲಾರಂಭಿಸಿದೆ. ಏತನ್ಮಧ್ಯೆ ದೆಹಲಿಯ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳ ಮಾಲೀಕರು ಚೀನಾದ ನಾಗರಿಕರಿಗೆ ಪ್ರವೇಶ ನೀಡದೆ ಇರಲು ನಿರ್ಧರಿಸಿದ್ದಾರೆ.

ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಚೀನಾದ ಸರಕುಗಳನ್ನು ನಿಷೇಧಿಸುವ ಕುರಿತು ನಿರ್ಣಯ ಕೈಗೊಂಡ ಬಳಿಕ ಗುರುವಾರ ದೆಹಲಿ ಹೋಟೆಲ್ ಹಾಗೂ ಅತಿಥಿ ಗೃಹ ಮಾಲೀಕರ ಸಂಘ(ಧುರ್ವಾ) ಕೂಡ ಈ ದೊಡ್ಡ ನಿರ್ಣಯ ಕೈಗೊಂಡು ಈ ಕುರಿತು ಘೋಷಣೆ ಮಾಡಿದೆ. ಗಡಿಭಾಗದಲ್ಲಿ ಚೀನಾ ತೋರುತ್ತಿರುವ ಅಸಹನೀಯ ವರ್ತನೆಗಳ ಹಿನ್ನೆಲೆ, ದೆಹಲಿಯ ಹೋಟೆಲ್ ಗಳು ಹಾಗೂ ಅತಿಥಿ ಗೃಹಗಳು ಇನ್ಮುಂದೆ ಚೀನಾ ಮೂಲಕ ಯಾವುದೇ ವ್ಯಕ್ತಿಗೆ ತಮ್ಮ ಸಂಘಟನೆಯ ಹೋಟೆಲ್ ಗಳಲ್ಲಿ ತಂಗಲು ಅವಕಾಶ ನೀಡಲು ನಿರ್ಧರಿಸಿವೆ ಎಂದು ಕ್ಯಾಟ್ ಹೇಳಿದೆ. ಸದ್ಯ ದೆಹಲಿಯಲ್ಲಿ ಸುಮಾರು 3000 ಬಜೆಟ್ ಹೋಟೆಲ್ ಹಾಗೂ ಗೆಸ್ಟ್ ಹೌಸ್ ಗಳಿದ್ದು, ಇವುಗಳಲ್ಲಿ ಸುಮಾರು 75 ಸಾವಿರ ರೂಮ್ ಗಲಿವೆ .

ಇದಕ್ಕೆ ಸಂಬಂಧಿಸಿದಂತೆ ಗುರುವಾರ ಮಾಹಿತಿ ನೀಡಿರುವ ದೆಹಲಿ ಹೋಟೆಲ್ ಮತ್ತು ಅತಿಥಿ ಗೃಹ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ, ಚಾನಾ ಭಾರತದೊಂದಿಗೆ ವ್ಯವಹರಿಸುತ್ತಿರುವ ರೀತಿ ಮತ್ತು ಅದು ಭಾರತೀಯ ಸೈನಿಕರ ವಿರುದ್ಧ ಕ್ರೂರವಾಗಿ ನಡೆದುಕೊಳ್ಳುತ್ತಿರುವ ರೀತಿಯ ಕಾರಣ ದೆಹಲಿ ಜನರಲ್ಲಿ ಭಾರಿ ಆಕ್ರೋಶವಿದೆ ಎಂದಿದ್ದಾರೆ. ಇಂತಹ ಪರಿಸ್ಥಿಯಲ್ಲಿ ಕ್ಯಾಟ್ ದೇಶಾದ್ಯಂತ ಚೀನಾ ಸರಕುಗಳನ್ನು ನಿಷೇಧಿಸಲು ಅಭಿಯಾನ ಕೈಗೊಂಡ ಹಿನ್ನೆಲೆ, ಈ ಅಭಿಯಾನಕ್ಕೆ ದೆಹಲಿ ಹೋಟೆಲ್ ಮತ್ತು ಅತಿಥಿ ಗೃಹ ಉದ್ಯಮಿಗಳು ಸಹ ಕೈಜೋಡಿಸಲಿದ್ದಾರೆ ಹಾಗೂ ಹೀಗಾಗಿ ದೆಹಲಿಯ ಯಾವುದೇ ಹೋಟೆಲ್ ಹಾಗೂ ಅತಿಥಿ ಗೃಹ ಉದ್ಯಮಿಗಳು ತಮ್ಮ ಹೋಟೆಲ್/ಅತಿಥಿಗೃಹಗಳಲ್ಲಿ ಚೀನಿಯರಿಗೆ ತಂಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸಂತಸ ವ್ಯಕ್ತಪಡಿಸಿದ ಕ್ಯಾಟ್ 
 ದೆಹಲಿ ಹೋಟೆಲ್ ಹಾಗೂ ಅತಿಥಿ ಗೃಹ ಮಾಲೀಕರ ಸಂಘ(ಧುರ್ವಾ) ಕೈಗೊಂಡ ಈ ನಿರ್ಧಾರವನ್ನು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಸ್ವಾಗತಿಸಿದ್ದಾರೆ. ಕ್ಯಾಟ್ ಆರಂಭಿಸಿರುವ ಅಭಿಯಾನಕ್ಕೆ ಇದೆಗ ದೇಶದ ವಿವಿಧ ಭಾಗಗಳ ಜನರು ಇದೀಗ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಇನ್ಮುಂದೆ ಈ ಸಂಬಂಧ ಕ್ಯಾಟ್, ರಾಷ್ಟ್ರೀಯ ಸಾರಿಗೆ ಸಂಸ್ಥೆಗಳು, ರೈತರು, ವ್ಯಾಪಾರಿಗಳು, ಸಣ್ಣ ಪ್ರಮಾಣದ ಕೈಗಾರಿಕೆಗಳು, ಗ್ರಾಹಕ ಉದ್ಯಮಿಗಳು, ಮಹಿಳಾ ಉದ್ಯಮಿಗಳ ರಾಷ್ಟ್ರೀಯ ಸಂಘಟನೆಗಳನ್ನು ಕೂಡ ಸಂಪರ್ಕಿಸಿ ಅವರನ್ನೂ ಕೂಡ ಈ ಅಭಿಯಾನಕ್ಕೆ ಜೋಡಿಸಲು ಯೋಜನೆ ರೂಪಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Trending News