ವೈದ್ಯರಿಲ್ಲದೆ ಆಸ್ಪತ್ರೆಯ ನೆಲದ ಮೇಲೆಯೇ ಮಹಿಳೆಗೆ ಹೆರಿಗೆ

ಹೆರಿಗೆ ನೋವಿನಿಂದ ಆಸ್ಪತ್ರೆಗೆ ಧಾವಿಸಿದ ಗರ್ಭಿಣಿ ಮಹಿಳೆಗೆ ವೈದ್ಯರು ಲಭ್ಯವಿರದ ಕಾರಣ ಅಲ್ಲೇ ಇದ್ದ ಇಬ್ಬರು ಮಹಿಳೆಯರು ಕಸದ ರಾಶಿಯ ಬಳಿಯೇ ಶೀಟನ್ನು ಹಾಸಿ, ಹೆರಿಗೆ ಮಾಡಿಸಿದ್ದಾರೆ.

Last Updated : Jan 10, 2019, 03:32 PM IST
ವೈದ್ಯರಿಲ್ಲದೆ ಆಸ್ಪತ್ರೆಯ ನೆಲದ ಮೇಲೆಯೇ ಮಹಿಳೆಗೆ ಹೆರಿಗೆ title=

ಗೊಂಡಾ: ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದಿಂದಾಗಿ ವೈದ್ಯರಿಲ್ಲದ ಕಾರಣ ಮಹಿಳೆಯೊಬ್ಬಳು ಆಸ್ಪತ್ರೆಯ ನೆಲದ ಮೇಲೆಗೆ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರಪ್ರದೇಶದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. 

ಹೆರಿಗೆ ನೋವಿನಿಂದ ಆಸ್ಪತ್ರೆಗೆ ಧಾವಿಸಿದ ಗರ್ಭಿಣಿ ಮಹಿಳೆಗೆ ವೈದ್ಯರು ಲಭ್ಯವಿರದ ಕಾರಣ ಅಲ್ಲೇ ಇದ್ದ ಇಬ್ಬರು ಮಹಿಳೆಯರು ಕಸದ ರಾಶಿಯ ಬಳಿಯೇ ಶೀಟನ್ನು ಹಾಸಿ, ಹೆರಿಗೆ ಮಾಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ರತನ್ ಕುಮಾರ್, ಘಟನೆ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಭಾರತದಲ್ಲಿ ಪ್ರತಿವರ್ಷ 45,000ಕ್ಕೂ ಅಧಿಕ ಮಹಿಳೆಯರು ಹೆರಿಗೆಗೆ ಸಂಬಂಧಿಸಿದ ಕಾರಣಗಳಿಂದಾಗಿ ಸಾಯುತ್ತಿದ್ದಾರೆ ಎನ್ನಲಾಗಿದೆ. ಅಧಿಕೃತ ವಿವರಗಳ ಪ್ರಕಾರ, ಭಾರತದಲ್ಲಿ 1,668 ಜನರಿಗೆ ಒಬ್ಬ ವೈದ್ಯರಿದ್ದು, 2017ರಲ್ಲಿ ಸುಮಾರು 8 ಲಕ್ಷ ವೈದ್ಯರು ಸಕ್ರಿಯ ಸೇವೆಯಲ್ಲಿದ್ದಾರೆ ಎನ್ನಲಾಗಿದೆ. 

Trending News