coronavirus ನಿಂದ ಭಾರತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ

ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಆಯುಕ್ತರು ಭಾರತದಲ್ಲಿ ಕೊರೊನಾ ವೈರಸ್ ಕಾರಣ ಯಾವುದೇ ಸಾವು ಸಂಭವಿಸಿಲ್ಲ ಎಂದಿದ್ದಾರೆ.

Last Updated : Mar 11, 2020, 04:16 PM IST
coronavirus ನಿಂದ ಭಾರತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ title=

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಆರೋಗ್ಯ ಸಚಿವರು, "ಭಾರತದಲ್ಲಿ ಕೊರೊನಾ ವೈರಸ್ ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುವೆ. ಕೆಲ ಸಮಯದ ಹಿಂದೆ ಸುಳ್ಳು ಸುದ್ದಿಯೊಂದು ಪ್ರಸಾರಗೊಳ್ಳುತ್ತಿದ್ದು, ಕರ್ನಾಟಕದ ಕಲಬುರಗಿಯಲ್ಲಿ 76 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ನಿಂದ ಸಾವಿಗೀಡಾಗಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ" ಎಂದು ಅವರು ಹೇಳಿದ್ದಾರೆ.

ಇದಲ್ಲದೆ ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಯುರೋಪ್ ನ ಕೆಲ ಹೊಸ ದೇಶಗಳಿಗೆ ವಿಜಾ ರದ್ದುಗೊಳಿಸಿದೆ. ಮಂಗಳವಾರ ಭಾರತ ಸರ್ಕಾರ ಫ್ರಾನ್ಸ್, ಜರ್ಮನಿ ಹಾಗೂ ಸ್ಪೇನ್ ನ ನಾಗರಿಕರಿಗೆ ನೀಡಿರುವ ವಿಜಾ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಈ ದೇಶದ ನಾಗರಿಕರ ಭಾರತ ಪ್ರವೇಶವನ್ನು ತಡೆಹಿಡಿಯಲಾಗಿದೆ. ಭಾರತದಲ್ಲಿ ಕೊರೊನಾ ವೈರಸ್ ಸೋಂಕಿಗೆ ಗುರಿಯಾದವರ ಸಂಖ್ಯೆ 50ಕ್ಕೆ ತಲುಪಿದ್ದು, ಇವರಲ್ಲಿ 34 ಜನರು ಭಾರತೀಯರಾಗಿದ್ದರೆ, 16 ಮಂದಿ ಇಟಲಿ ಮೂಲದ ನಾಗರಿಕರಾಗಿದ್ದಾರೆ.

ದೆಹಲಿ ಏರ್ಪೋರ್ಟ್ ನಲ್ಲಿ ಏರ್ ಇಂಡಿಯಾ ವಿಮಾನದ ತಪಾಸಣೆ
ಈ ಕುರಿತು ಮಾಹಿತಿ ನೀಡಿರುವ ಏರ್ಪೋರ್ಟ್ ಅಧಿಕಾರಿಗಳು ದೆಹಲಿಯ ಇಂದಿರಾ ಗಾಂಧಿ ಏರ್ಪೋರ್ಟ್ ನ ಟರ್ಮಿನಲ್ 3 ನಲ್ಲಿ ಏರ್ ಇಂಡಿಯಾ AI138 ಫ್ಲೈಟ್ ಲ್ಯಾಂಡ್ ಮಾಡಿದ್ದು, ಇದರಿಂದ ಕೊರೊನಾ ವೈರಸ್ ಭೀತಿ ಪಸರಿಸಿದೆ. ಈ ವಿಮಾನವನ್ನು ಮಿಲಾನ್ ನಲ್ಲಿ ಯಾವುದೇ ತಪಾಸಣೆಗೆ ಒಳಪಡಿಸದೆ ರವಾನೆ ಮಾಡಲಾಗಿದೆ ಎನ್ನಲಾಗಿದೆ. ಈ ಫ್ಲೈಟ್ ನಿಂದ ಸುಮಾರು 80 ಪ್ರವಾಸಿಗರು ಭಾರತಕ್ಕೆ ಬಂದಿಳಿದಿದ್ದಾರೆ. ಈ ಎಲ್ಲ ಯಾತ್ರಿಗಳ ಆರೋಗ್ಯದ ಕುರಿತು ತಪಾಸಣೆ ಜಾರಿಯಲ್ಲಿದೆ. ಈ ಫ್ಲೈಟ್ ಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಇದೆ ಒಂದು ಕಾರಣದಿಂದ ಈ ವಿಮಾನವನ್ನು ಟರ್ಮಿನಲ್ 3 ರಲ್ಲಿ ಪ್ರತ್ಯೇಕವಾಗಿ ಪಾರ್ಕ್ ಮಾಡಲಾಗಿದೆ. ಇಲ್ಲಿ ಆರೋಗ್ಯ ಕಾರ್ಮಿಕರು ಈ ವಿಮಾನವನ್ನು ಸೋಂಕು ಮುಕ್ತಗೊಳಿಸಲಿದ್ದಾರೆ.

Trending News