ಜನಸಾಮಾನ್ಯರಿಗೆ ಆರ್‌ಬಿಐ ಗಿಫ್ಟ್: RTGS, NEFT ಬ್ಯಾಂಕ್ ವಹಿವಾಟಿನ ಮೇಲಿನ ಶುಲ್ಕ ರದ್ದು

ಆರ್‌ಬಿಐನ ಈ ನಿರ್ಧಾರದಿಂದ ಆನ್ಲೈನ್ ವಹಿವಾಟು ಮಾಡುವ ಲಕ್ಷಾಂತರ ಗ್ರಾಹಕರಿಗೆ ಅನುಕೂಲವಾಗಲಿದೆ.

Last Updated : Jun 6, 2019, 01:23 PM IST
ಜನಸಾಮಾನ್ಯರಿಗೆ ಆರ್‌ಬಿಐ ಗಿಫ್ಟ್: RTGS, NEFT ಬ್ಯಾಂಕ್ ವಹಿವಾಟಿನ ಮೇಲಿನ ಶುಲ್ಕ ರದ್ದು title=

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗುರುವಾರ ಅದರ ಹಣಕಾಸಿನ ನೀತಿ ಘೋಷಿಸಿತು. ಇದರಲ್ಲಿ ಆರ್‌ಬಿಐ ರೆಪೋ ದರವನ್ನು ಶೇ.0.25 ರಷ್ಟು ಕಡಿಮೆ ಮಾಡಿದೆ. ಆರ್‌ಬಿಐನಿಂದ ರೆಪೋ ದರ 0.25% ಇಳಿಕೆಯಾದ ನಂತರ ಶೇ. 6ರಷ್ಟಿದ್ದ ರೆಪೋ ದರ ಈಗ ಶೇ. 5.75ಕ್ಕೆ ತಲುಪಿದೆ. ಈಗ ಆರ್‌ಬಿಐ ದೇಶದ ಬ್ಯಾಂಕುಗಳಿಗೆ 5.75% ದರದಲ್ಲಿ ಸಾಲವನ್ನು ಒದಗಿಸುತ್ತದೆ. ಇದರೊಂದಿಗೆ, ಬ್ಯಾಂಕ್ ಸಾಲ ಪಡೆಯುವ ಗ್ರಾಹಕರು EMI ಯಿಂದ ಲಾಭ ಪಡೆಯುತ್ತಾರೆ.

ಅದೇ ಸಮಯದಲ್ಲಿ, ಆನ್ಲೈನ್ ವಹಿವಾಟಿನ ಮೇಲಿನ ಶುಲ್ಕವನ್ನು ತೆಗೆದುಹಾಕುವುದಾಗಿ ಆರ್‌ಬಿಐ ಘೋಷಿಸಿದೆ. ಇದರಿಂದಾಗಿ ಆರ್.ಟಿ.ಜಿ.ಎಸ್(RTGS) ಹಾಗೂ ಎನ್.ಇ.ಎಫ್.ಟಿ.(NEFT) ವಹಿವಾಟುಗಳು ನಿಶುಲ್ಕವಾಗಲಿವೆ. 

ಈ ನಿರ್ಧಾರದ ನೇರ ಪರಿಣಾಮವೆಂದರೆ ಆನ್ಲೈನ್ ವಹಿವಾಟುಗಳನ್ನು ಹೊಂದಿರುವ ಗ್ರಾಹಕರಿಗೆ ಲಾಭದಾಯಕವಾಗಿರುತ್ತದೆ.  ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಇದರ ಪ್ರಯೋಜನ ನೀಡುವ ಅಗತ್ಯವಿದೆ ಎಂದು ಆರ್‌ಬಿಐ ತಿಳಿಸಿದೆ.

Trending News