ನವದೆಹಲಿ: 2020 ರ ಬಹುಪಾಲು ಭಾಗವನ್ನು ಕರೋನಾವೈರಸ್ ತಡೆಗಟ್ಟಲು ಜಾರಿಗೆ ತರಲಾಗಿದ್ದ ಲಾಕ್‌ಡೌನ್ ಅಡಿಯಲ್ಲಿ ಕಳೆಯಲಾಯಿತು. ಜನರು ಹಿಂದೆಂದಿಗಿಂತಲೂ ಹೆಚ್ಚು ಸಮಯ ಮನೆಯಲ್ಲಿ ಕಳೆಯುವಂತಾಯಿತು. ಮೋಜಿನ ಸಾಧ್ಯತೆಗಳೂ ಕಡಿಮೆ ಇದ್ದವು. ಅಂತಹ ಪರಿಸ್ಥಿತಿಯಲ್ಲಿ ಹಳೆಯ ವರ್ಷಕ್ಕೆ ವಿದಾಯ ಹೇಳುವ ಉತ್ಸಾಹದಲ್ಲಿ ಜನರು ಕರೋನಾವೈರಸ್ ಅಟ್ಟಹಾಸವನ್ನು ಬದಿಗೊತ್ತಿ ಮೋಜಿನಲ್ಲಿ ತೊಡಗಬಹುದು ಎಂದು ನಿರೀಕ್ಷಿಸಲಾಗಿದೆ.
ಆದರೆ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಹಾಗೂ ದೇಶಕ್ಕೆ ಲಗ್ಗೆ ಇಟ್ಟಿರುವ ಬ್ರಿಟನ್ ಕರೋನಾ ಸ್ಟ್ರೈನ್ (Britain Corona Strain) ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ಹೊಸ ವರ್ಷದ ಆಚರಣೆಗೆ ಹೊಸ ನಿಯಮಗಳನ್ನು ಘೋಷಿಸಿರುವ ದೆಹಲಿ ಪೊಲೀಸರು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಲವು ವಿಶೇಷ ಸಿದ್ಧತೆಗಳನ್ನು ಸಹ ಮಾಡಿದ್ದಾರೆ.
ದೆಹಲಿ ಪೊಲೀಸ್ ಆಯುಕ್ತ ಎಸ್. ಎನ್. ಶ್ರೀವಾಸ್ತವ ಹೊಸ ವರ್ಷದಲ್ಲಿ ಕುಡಿದು ವಾಹನ ಚಲಾಯಿಸುವವರ ಮೇಲೆ ನಿಗಾ ಇಡಲು ದೆಹಲಿ ಪೊಲೀಸರು ವಿಶೇಷ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕರೋನಾದ ಕಾರಣ ದೆಹಲಿ ಪೊಲೀಸರು ಆಲ್ಕೋಮೀಟರ್ ಬಳಸುವುದಿಲ್ಲ. ಆದರೆ ಮದ್ಯಪಾನ ಮಾಡುವ ಮೂಲಕ ಇತರರ ಪ್ರಾಣಕ್ಕೆ ಅಪಾಯವನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಪೂರ್ಣ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ Lockdown ಆಗುತ್ತಾ? ಸಿಎಂ ಯಡಿಯೂರಪ್ಪ ಮಹತ್ವದ ಸುದ್ದಿಗೋಷ್ಠಿ
ಹೊಸ ವರ್ಷದ ಸಂಭ್ರಮಾಚರಣೆಗಾಗಿ ಮನೆಯಿಂದ ಹೊರಗಡೆ ಹೋಗುವವರಿಗೆ ಕೋವಿಡ್-19 ಪ್ರೋಟೋಕಾಲ್ ಅನ್ನು ಸಂಪೂರ್ಣವಾಗಿ ಅನುಸರಿಸುವಂತೆ ದೆಹಲಿ ಪೊಲೀಸರು ಸೂಚನೆ ನೀಡಿದ್ದಾರೆ. ಈ ವಿಷಯದಲ್ಲಿ ಹೋಟೆಲ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಸಹ ಸೂಚನೆ ನೀಡಲಾಗಿದೆ. ಹೊಸ ವರ್ಷದ ಆಚರಣೆಯ ಸಮಯದಲ್ಲಿ ಕೋವಿಡ್ ಪ್ರೋಟೋಕಾಲ್ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಯಾವುದೇ ಸಂದರ್ಭದಲ್ಲಿ ಐವತ್ತು ಪ್ರತಿಶತಕ್ಕಿಂತಲೂ ಹೆಚ್ಚು ಜನರು ಆಚರಣೆಗೆ ಸೇರಬಾರದು. ಸಂಭ್ರಮಾಚರಣೆಯಲ್ಲಿ ದೆಹಲಿ ಪೊಲೀಸರು ಕೋವಿಡ್ ಪ್ರೋಟೋಕಾಲ್ ಜನರ ಸಂಖ್ಯೆ ಮತ್ತು ಆಚರಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಮಾಹಿತಿ ಲಭ್ಯವಾಗಿದೆ.
ಕೋವಿಡ್ ಪ್ರೋಟೋಕಾಲ್ ಪ್ರಕಾರ ಕೊನಾಟ್ ಪ್ಲೇಸ್‌ನಲ್ಲಿರುವ ಹೋಟೆಲ್ ಮಾಲೀಕರು ಹೊಸ ವರ್ಷದ ಆಚರಣೆಗೆ ಸೂಕ್ತ ರೀತಿಯಲ್ಲಿ ಸಿದ್ಧತೆ ನಡೆಸಿದ್ದಾರೆ ಎಂದು ದೆಹಲಿ ಸಂಚಾರ ಪೊಲೀಸ್ ಜಂಟಿ ಸಿಪಿ ಮನೀಶ್ ಅಗರ್‌ವಾಲ್ ತಿಳಿಸಿದ್ದಾರೆ. ಮಾಸ್ಕ್ (Mask)ಗಳು, ಸ್ಯಾನಿಟೈಜರ್‌ಗಳು ಮತ್ತು ಸಾಮಾಜಿಕ ದೂರ ಕಡ್ಡಾಯ. ಜನರ ಸಂಖ್ಯೆ ಕಡಿಮೆ ಇದ್ದರೆ ಬಾರ್, ರೆಸ್ಟೋರೆಂಟ್ ಗಳಿಗೆ ನಷ್ಟವಾಗಬಹುದು. ಆದರೆ ಯಾವುದೇ ಸಂದರ್ಭದಲ್ಲಿ, ಹೋಟೆಲ್ ಮಾಲೀಕರು ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: New Year 2021 ವೇಳೆ ಜನ ಎಲ್ಲಿ ಮತ್ತು ಹೇಗೆ ಸಂಭ್ರಮಾಚರಿಸಲು ನಿರ್ಧರಿಸಿದ್ದಾರೆ ಗೊತ್ತಾ?
ಇಂದಿನಿಂದ 2 ದಿನಗಳ ಕಾಲ ದೆಹಲಿಯಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ದೆಹಲಿಯಲ್ಲಿ ಡಿಸೆಂಬರ್ 31 ಮತ್ತು ಜನವರಿ 1 ರಂದು ರಾತ್ರಿ ಕರ್ಫ್ಯೂ (Night Curfew) ಮುಂದುವರಿಯಲಿದೆ. ದೆಹಲಿಯಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ 2 ದಿನಗಳವರೆಗೆ ಕರ್ಫ್ಯೂ ಅನ್ವಯವಾಗಲಿದೆ. ಇದಲ್ಲದೆ ದೆಹಲಿಯಲ್ಲಿ ಸೆಕ್ಷನ್ 144 ಅನ್ನು ಸಹ ಘೋಷಿಸಲಾಗಿದ್ದು 5 ಕ್ಕೂ ಹೆಚ್ಚು ಜನರು ಒಟ್ಟಿಗೆ ಗುಂಪು ಗಟ್ಟುವುದನ್ನು ನಿಷೇಧಿಸಲಾಗಿದೆ.
ಹೊಸ ವರ್ಷವನ್ನು ಆಚರಿಸಿ, ಆದರೆ...
- ಕೊನಾಟ್ ಪ್ಲೇಸ್‌ನಲ್ಲಿ ರಾತ್ರಿ 8 ಗಂಟೆಯ ನಂತರ ಪ್ರವೇಶವನ್ನು ಮುಚ್ಚಲಾಗುತ್ತದೆ.
- ಪ್ರಯಾಣಿಕರ ವಾಹನಗಳಿಗೆ ಮಾತ್ರ ಪ್ರವೇಶ ಸಿಗುತ್ತದೆ.
- ನವದೆಹಲಿ ರೈಲ್ವೆ ನಿಲ್ದಾಣಕ್ಕೆ ಕೊನಾಟ್ ಪ್ಲೇಸ್ ಮತ್ತು ಮಿಂಟೋ ರಸ್ತೆಯ ಮಾರ್ಗವನ್ನು ತಪ್ಪಿಸಲು ಸಲಹೆ.
- ಇಂಡಿಯಾ ಗೇಟ್ ಮತ್ತು ಮೃಗಾಲಯವನ್ನು ಜನವರಿ 1 ರಂದು ಮುಚ್ಚಲಾಗುವುದು.
- ಪಿಕ್ ನಿಕ್ ಗಾಗಿ ಮನೆಯಿಂದ ಹೊರಡುವ ಮೊದಲು ಮಾಹಿತಿಯನ್ನು ಸಂಗ್ರಹಿಸಿ.
- ಪಾದಚಾರಿಗಳಿಗೆ ಕಾಲುದಾರಿಯಲ್ಲಿ ಮಾತ್ರ ನಡೆಯಲು ಸಲಹೆ.
- ಸ್ಟಂಟ್‌ಗಳನ್ನು ಓಡಿಸುವವರ ಮೇಲೆ ಪೊಲೀಸರು ವಿಶೇಷ ನಿಗಾ ಇಡುತ್ತಾರೆ.
- ಬ್ಯಾರಿಕೇಡ್‌ಗಳನ್ನು ಅನ್ವಯಿಸುವ ಮೂಲಕ ಪೊಲೀಸರು ಸ್ಟಂಟ್ ಬೈಕ್ ಸವಾರರನ್ನು ನಿಯಂತ್ರಿಸುತ್ತಾರೆ.
ಇದನ್ನೂ ಓದಿ: New Year : ಬೆಂಗಳೂರಿನಲ್ಲಿ ಹೊಸ ವರ್ಷ ಸೆಲಬ್ರೇಟ್ ಮಾಡ್ತೀರಾ? ಮೊದಲು ಇದನ್ನೊಮ್ಮೆ ಓದಿ
ಪ್ರಸ್ತುತ ರಾಜೀವ್ ಚೌಕ್ ಮೆಟ್ರೋ (Metro) ನಿಲ್ದಾಣವನ್ನು ಮುಚ್ಚದಿರಲು ನಿರ್ಧರಿಸಲಾಗಿದೆ. ಆದರೆ ದೆಹಲಿ ಪೊಲೀಸರು ಮೆಟ್ರೊದೊಂದಿಗೆ ಸಂಪರ್ಕದಲ್ಲಿರುತ್ತಾರೆ. ದಟ್ಟಣೆ ಹೆಚ್ಚಾದರೆ ಕೆಲವು ನಿಲ್ದಾಣಗಳಲ್ಲಿ ಮೆಟ್ರೊ ಸೇವೆಯನ್ನು ನಿಲ್ಲಿಸಬಹುದು.
ಹೊಸ ವರ್ಷ (New Year) ವು ಹೊಸ ನಿರೀಕ್ಷೆಗಳನ್ನು ತರುತ್ತದೆ ಎಂದು ಜನರು ಭಾವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಹೊಸ ವರ್ಷವನ್ನು ಆಚರಿಸುವಾಗ ಜನರು ತಮ್ಮ ಆಚರಣೆಯನ್ನು ಬೇರೆಯವರಿಗೆ ಸಮಸ್ಯೆಯಾಗದಂತೆ ಯಮಗಳನ್ನು ಅನುಸರಿಸುತ್ತಾರೆ ಎಂದು ನಾವು ಆಶಿಸುತ್ತೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.