PF ಖಾತೆದಾರರಿಗಾಗಿ ಹೊಸ ಸೇವೆ ಜಾರಿಗೆ.. ಏನಿದೆ ಯೋಜನೆಯಲ್ಲಿ?

ನಿಮ್ಮ ಪಿಎಫ್‌ ಖಾತೆಗೆ ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ, ಈಗ ಚಿಂತೆ ಮಾಡುವ ಅಗತ್ಯವಿಲ್ಲ.  ಏಕೆಂದರೆ ಇಪಿಎಫ್‌ಒ ತನ್ನ ಗ್ರಾಹಕರಿಗೆ ಹೊಸ ಸೇವೆಯೊಂದನ್ನು ಪರಿಚಯಿಸಿದೆ.

Last Updated : Jan 10, 2020, 07:12 PM IST
PF ಖಾತೆದಾರರಿಗಾಗಿ ಹೊಸ ಸೇವೆ ಜಾರಿಗೆ.. ಏನಿದೆ ಯೋಜನೆಯಲ್ಲಿ? title=

ನವದೆಹಲಿ:ನಿಮ್ಮ ಪಿಎಫ್‌ ಖಾತೆಗೆ ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ, ಈಗ ಚಿಂತೆ ಮಾಡುವ ಅಗತ್ಯವಿಲ್ಲ.  ಏಕೆಂದರೆ ಇಪಿಎಫ್‌ಒ ತನ್ನ ಗ್ರಾಹಕರಿಗೆ ಹೊಸ ಸೇವೆಯೊಂದನ್ನು ಪರಿಚಯಿಸಿದೆ. ಈ ಸೇವೆ, ನೀವು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ ಈಗ ಪ್ರತಿ ತಿಂಗಳ 10 ನೇ ತಾರೀಖಿಗೆ  'ನಿಧಿ ಆಪ್ಕೆ ನಿಕಟ್' ಎಂಬ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದು,  ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದೆ.

ಟ್ವೀಟ್ ಮೂಲಕ EPFO ಈ ಮಾಹಿತಿ ನೀಡಿದೆ
ಈ ಕುರಿತು ತನ್ನ ಖಾತೆದಾರರಿಗೆ ಟ್ವೀಟ್ ಮಾಡಿರುವ ಇಪಿಎಫ್‌ಓ ಈ ಮಾಹಿತಿ ನೀಡಿದೆ. ಇಪಿಎಫ್‌ಓ ತನ್ನ ಚಂದಾದಾರರ ಸಮಸ್ಯೆಗಳನ್ನು ನಿವಾರಿಸಲು ಮತ್ತು ನೇರವಾಗಿ ಅವರನ್ನು ಸಂಪರ್ಕಿಸಲು ಈ ಕಾರ್ಯಕ್ರಮ ಪ್ರಾರಂಭಿಸಿದೆ. ಈ ಕಾರ್ಯಕ್ರಮವನ್ನು ಇಪಿಎಫ್‌ಓ ಕಚೇರಿಯಲ್ಲಿ ನಡೆಸಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ . ಪ್ರತಿ ತಿಂಗಳ 10 ರಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಅಷ್ಟೇ ಅಲ್ಲ  ಒಂದು ವೇಳೆ ಕೆಲವು ಕಾರಣಗಳಿಂದಾಗಿ 10 ರಂದು ರಜಾದಿನವಿದ್ದರೆ, ಮಾರನೆಯ ದಿನ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

135 ಪ್ರಾದೇಶಿಕ ಕೇಂದ್ರಗಳಲ್ಲಿ ಆಯೋಜನೆ
ಇಪಿಎಫ್ಓ ನ ಒಟ್ಟು 135 ಪ್ರಾದೇಶಿಕ ಕಚೇರಿಗಳಲ್ಲಿ ಪ್ರತಿ ತಿಂಗಳ 10ನೇ ತಾರೀಖಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಲಾಗಿದೆ. ನೀವು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನೂ ಪಡೆಯಬಹುದು. 'NidhiApkeNikat' ಕಾರ್ಯಕ್ರಮದ ಅಡಿ ಸಂಸ್ಥೆ ಗ್ರಾಹಕರಿಗೆ ತನ್ನ ನೂತನ ಪಾಲಸಿ ಹಾಗೂ ನಿಯಮಗಳ ಬಗ್ಗೆಯೂ ಕೂಡ ಮಾಹಿತಿ ಒದಗಿಸಲಿದೆ.

ಸೇವೆಗಳನ್ನು ಉತ್ತಮಗೊಳಿಸಲು ವೇದಿಕೆ
ಖಾತೆದಾರರ ಸಮಸ್ಯೆ ಪರಿಹಾರ ಮತ್ತು ಖಾತೆದಾರರಿಗೆ ಉಪಯುಕ್ತ ಮಾಹಿತಿ ಒದಗಿಸುವುದು 'NidhiApkeNikat' ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲ ತನ್ನ ಸೇವೆಗಳನ್ನು ಮತ್ತಷ್ಟು ಉತ್ತಮಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ. ಈ ಕಾರ್ಯಕ್ರಮದಲ್ಲಿ ನೌಕರರು ಹಾಗೂ ನೌಕರಿದಾತರ  ಎರಡೂ ಪಕ್ಷಗಳನ್ನು ಪರಿಗಣಿಸಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ.

ದೂರಾಗಲಿವೆ ನಿಮ್ಮ ಸಮಸ್ಯೆಗಳು
ಖಾತೆದಾರರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಸೂಕ್ತ ಪರಿಯಾರ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶ.  ಈ ಕಾರ್ಯಕ್ರಮದಲ್ಲಿ ನಿಮ್ಮ ಪ್ರಶ್ನೆ ಹಾಗೂ ಸಮಸ್ಯೆಗಳನ್ನೂ ಆಲಿಸಲಾಗುವುದು ಹಾಗೂ ಅವುಗಳನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಈ ಹೆಜ್ಜೆಯಿಂದ ಸಿಸ್ಟಮ್ ಹಾಗೂ ಖಾತೆದಾರರು ಇಬ್ಬರಿಗೂ ಕೂಡ ಅನುಕೂಲವಾಗಲಿದೆ.

ಒಂದು ವೇಳೆ ಈ ಕಾರ್ಯಕ್ರಮದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ನೀವು ಒಂದು ಅಪ್ಲಿಕೇಶನ್ ಸಲ್ಲಿಸಬೇಕಾಗಲಿದೆ. ಇದನ್ನು ನೀವು ನಿಮ್ಮ ಬ್ರಾಂಚ್ ಅಧಿಕಾರಿಗೆ ಕಳುಹಿಸಬೇಕು. ಬಳಿಕ ಬ್ರಾಂಚ್ ಅಧಿಕಾರಿ ನಿಮ್ಮ ಸಮಸ್ಯೆ ಪರಿಹಾರಕ್ಕೆ ಒಂದು ಕಾಲಾವಕಾಶ ನಿಗದಿಪಡಿಸಲಿದ್ದಾರೆ. ಯಾವುದೇ ಕಾರಣದಿಂದ ಒಂದು ವೇಳೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದೇ ಹೋದಲ್ಲಿ ಪ್ರತಿ ತಿಂಗಳ 25ನೇ ತಾರೀಖಿಗೆ ನಿಮಗೆ ಆಕ್ಷನ್ ಟೇಕನ್ ರಿಪೋರ್ಟ್ ಸಿಗಲಿದ್ದು, ರಿಪೋರ್ಟ್ ನಲ್ಲಿ ನಿಮ್ಮ ಪ್ರಶ್ನೆಗೆ ನಿಮಗೆ ಉತ್ತರ ಸಿಗಲಿದೆ.

Trending News