ಭಾರತದಲ್ಲಿ ಬಿಡುಗಡೆ ಆಯ್ತು Honda Activa 6G; ಇಲ್ಲಿದೆ ಬೆಲೆ, ವೈಶಿಷ್ಟ್ಯಗಳ ಮಾಹಿತಿ

ಈ ಹೊಸ ಸ್ಕೂಟರ್‌ನ ವಿಶೇಷವೆಂದರೆ, ಇದರಲ್ಲಿ ಗ್ರಾಹಕರಿಗೆ ಬಾಹ್ಯ ಇಂಧನ ಫಿಲ್ಲರ್ ಕ್ಯಾಪ್ ಸಿಗುತ್ತದೆ. ಇದರರ್ಥ ಇಂಧನವನ್ನು ತುಂಬಲು ನೀವು ಇನ್ನು ಮುಂದೆ ಆಸನ(ಸೀಟ್)ವನ್ನು ಎತ್ತುವ ಅಗತ್ಯವಿಲ್ಲ.

Last Updated : Jan 16, 2020, 11:23 AM IST
ಭಾರತದಲ್ಲಿ ಬಿಡುಗಡೆ ಆಯ್ತು Honda Activa 6G; ಇಲ್ಲಿದೆ ಬೆಲೆ, ವೈಶಿಷ್ಟ್ಯಗಳ ಮಾಹಿತಿ title=

ನವದೆಹಲಿ: ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಬಹು ನಿರೀಕ್ಷಿತ Honda Activa 6G ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಕೂಟರ್‌ನ ಆರಂಭಿಕ ಬೆಲೆ 63,912 ರೂ. 2001 ರಲ್ಲಿ, ಹೋಂಡಾ ತನ್ನ ಮೊದಲ ಆಕ್ಟಿವಾ ಸ್ಕೂಟರ್ ಅನ್ನು ಪ್ರಾರಂಭಿಸಿತು. ಹೋಂಡಾ ಆಕ್ಟಿವಾ ಭಾರತದಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದೆ. ಇದು ಕಂಪನಿಯ 6 ನೇ ತಲೆಮಾರಿನ ಸ್ಕೂಟರ್ ಆಗಿದೆ. ಈ ಹೊಸ ಸ್ಕೂಟರ್‌ನ ವಿಶೇಷವೆಂದರೆ, ಇದರಲ್ಲಿ ಗ್ರಾಹಕರಿಗೆ ಬಾಹ್ಯ ಇಂಧನ ಫಿಲ್ಲರ್ ಕ್ಯಾಪ್ ಸಿಗುತ್ತದೆ. ಇದರರ್ಥ ಇಂಧನವನ್ನು ತುಂಬಲು ನೀವು ಇನ್ನು ಮುಂದೆ ಆಸನ(ಸೀಟ್)ವನ್ನು ಎತ್ತುವ ಅಗತ್ಯವಿಲ್ಲ. ವಿತರಕರು ಈ ಸ್ಕೂಟರ್ ಅನ್ನು ಈ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ವಿತರಿಸಲಿದ್ದಾರೆ. ಕಂಪನಿಯು ಇದನ್ನು ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ.

ಹೋಂಡಾ ಆಕ್ಟಿವಾ 6 ಜಿ ಸ್ಕೂಟರ್ ವೈಶಿಷ್ಟ್ಯಗಳು:
ಈ ಹೊಸ ಸ್ಕೂಟರ್‌ನ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದರಲ್ಲಿ ನೀವು ಸಾಕಷ್ಟು ಹೊಸತನವನ್ನು ಕಾಣಬಹುದಾಗಿದೆ. ಇದರಲ್ಲಿ, ನೀವು ಎಸಿಜಿ ಸೈಲೆಂಟ್ ಸ್ಟಾರ್ಟರ್ ಮೋಟಾರ್, ಇಂಧನ ಇಂಜೆಕ್ಷನ್, ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹೊಸ ಬಾಹ್ಯ ಇಂಧನ ಕ್ಯಾಪ್, ಹೊಸ ಇಎಸ್ಪಿ ತಂತ್ರಜ್ಞಾನ ಮತ್ತು ಡ್ಯುಯಲ್ ಫಂಕ್ಷನ್ ಸ್ವಿಚ್ ಪಡೆಯುತ್ತೀರಿ. ಇದು ಸುರಕ್ಷತೆಗಾಗಿ ಸೈಡ್-ಸ್ಟ್ಯಾಂಡ್ ಸೂಚಕವನ್ನು ಸಹ ಹೊಂದಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಹೋಂಡಾ ಆಕ್ಟಿವಾ 6 ಜಿ ಯ ವಿಶೇಷಣಗಳು:
ಈ ಹೊಸ ಸ್ಕೂಟರ್ 5 ಜಿ ಮಾದರಿಗಿಂತ ಹೆಚ್ಚಿನ ಮೈಲೇಜ್ ಹೊಂದಿದೆ ಎಂದು ಕಂಪನಿ ಹೇಳಿದೆ. ಇದು 110 ಸಿಸಿ ಶಕ್ತಿಯೊಂದಿಗೆ ಹೊಸ ಬಿಎಸ್ 6 ಎಂಜಿನ್ ಹೊಂದಿದೆ. ಇದು 8bhp ಶಕ್ತಿ ಮತ್ತು 9Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ, ಆಕ್ಟಿವಾ 6 ಜಿ 12 ಇಂಚಿನ ಮುಂಭಾಗದ ಚಕ್ರ ಮತ್ತು 10 ಇಂಚಿನ ಹಿಂಬದಿ ಚಕ್ರವನ್ನು ಹೊಂದಿದೆ. ಹೋಂಡಾದ ಹೊಸ ಆಕ್ಟಿವಾ 6 ಜಿ ಸ್ಕೂಟರ್ 109.2 ಸಿಸಿ ಸಿಂಗಲ್ ಸಿಲಿಂಡರ್, ಆಕ್ಟಿವಾ 5 ಜಿ ಸ್ಕೂಟರ್‌ನಂತೆಯೇ ಏರ್ ಕೂಲ್ಡ್ ಎಂಜಿನ್ ಪಡೆಯಲಿದ್ದು, ಇದು ಬಿಎಸ್ 6 ಹೊರಸೂಸುವಿಕೆಯ ಮಾನದಂಡಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

Trending News