CoronaVirus New Guidelines: ಕರೋನಾ ರೋಗಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ

CoronaVirus New Guidelines: ಕರೋನಾ ವೈರಸ್ ಸೋಂಕಿತ ರೋಗಿಗಳಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಯಾವ ರೋಗಿಗೆ ಹೋಂ ಕ್ವಾರೆಂಟೈನ್‌ನಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಯಾರನ್ನು ಪರೀಕ್ಷಿಸಲಾಗುವುದು ಎಂದು ವೈದ್ಯರು ನಿರ್ಧರಿಸುತ್ತಾರೆ ಎಂದು ಅದು ಹೇಳಿದೆ. 

Written by - Zee Kannada News Desk | Last Updated : May 7, 2021, 03:20 PM IST
  • ಕೇಂದ್ರ ಸರ್ಕಾರ ಹೊರಡಿಸಿದ ನೂತನ ಮಾರ್ಗಸೂಚಿಗಳ ಪ್ರಕಾರ, ರೋಗಿಯ ಸ್ವಯಂ-ಪ್ರತ್ಯೇಕತೆಯನ್ನು ಅವರ ಮನೆಯಲ್ಲಿ ವ್ಯವಸ್ಥೆ ಮಾಡಬೇಕಾಗುತ್ತದೆ
  • ಜ್ವರ ನಿಯಂತ್ರಣಕ್ಕೆ ಬರದಿದ್ದರೆ ಅವರನ್ನು ಹೋಂ ಕ್ವಾರೆಂಟೈನ್‌ನಲ್ಲಿ ಇರಿಸದೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕು
  • ರೆಮೆಡಿಸಿವಿರ್ ಚುಚ್ಚುಮದ್ದನ್ನು ಆಸ್ಪತ್ರೆಯಲ್ಲಿ ಮಾತ್ರ ನೀಡಬಹುದು
CoronaVirus New Guidelines: ಕರೋನಾ ರೋಗಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ  title=
CoronaVirus New Guidelines

CoronaVirus New Guidelines:  ಹೋಂ ಕ್ವಾರೆಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೋನಾ ರೋಗಿಗಳಿಗೆ ಮತ್ತು ಸೌಮ್ಯವಾದ ಸೋಂಕಿನ ಲಕ್ಷಣ ಹೊಂದಿರುವವರಿಗೆ ಹಾಗೂ ಯಾವುದೇ ರೋಗಲಕ್ಷಣಗಳಿಲ್ಲದೆಯೇ ಸೋಂಕಿಗೆ ಒಳಗಾಗಿರುವ ರೋಗಿಗಳಿಗೆ ಪರಿಷ್ಕೃತ ಮಾರ್ಗಸೂಚಿಗಳೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯ ಕರೋನಾ ರೋಗಿಗಳಿಗಾಗಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. 

ಕೇಂದ್ರ ಸರ್ಕಾರ ಹೊರಡಿಸಿದ ನಿರ್ದೇಶನದಲ್ಲಿ ಸತತ ಮೂರು ದಿನಗಳವರೆಗೆ ಜ್ವರವಿಲ್ಲದಿದ್ದರೆ ಹೋಂ ಕ್ವಾರೆಂಟೈನ್‌ನಲ್ಲಿರುವವರು 10 ದಿನಗಳ ನಂತರ ಹೊರಗೆ ಬರಬಹುದು ಎನ್ನಲಾಗಿದೆ. ಅದೇ ಸಮಯದಲ್ಲಿ ಅವರಿಗೆ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಆದರೆ ಜ್ವರ ನಿಯಂತ್ರಣಕ್ಕೆ ಬರದಿದ್ದರೆ ಅವರನ್ನು ಹೋಂ ಕ್ವಾರೆಂಟೈನ್‌ನಲ್ಲಿ ಇರಿಸದೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕು. ಅಷ್ಟೇ ಅಲ್ಲ ರೆಮೆಡಿಸಿವಿರ್ ಚುಚ್ಚುಮದ್ದನ್ನು ಆಸ್ಪತ್ರೆಯಲ್ಲಿ ಮಾತ್ರ ನೀಡಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ - Covid precautions: ಕರೋನಾ ತಪ್ಪಿಸಲು ಆಯುಷ್ ಸಚಿವಾಲಯದ ಈ ಮುನ್ನೆಚ್ಚರಿಕಾ ಕ್ರಮ ಅನುಸರಿಸಿ

ಕೇಂದ್ರ ಸರ್ಕಾರ (Central Government) ಹೊರಡಿಸಿದ ನೂತನ ಮಾರ್ಗಸೂಚಿಗಳ ಪ್ರಕಾರ, ರೋಗಿಯ ಸ್ಥಿತಿ ಸೌಮ್ಯವಾಗಿದೆಯೇ ಅಥವಾ ಕರೋನಾ ಇಲ್ಲವೇ ಎಂದು ಆರೋಗ್ಯ ಅಧಿಕಾರಿ ನಿರ್ಧರಿಸುತ್ತಾರೆ. ಅಂತಹ ಸಂದರ್ಭದಲ್ಲಿ, ರೋಗಿಯ ಸ್ವಯಂ-ಪ್ರತ್ಯೇಕತೆಯನ್ನು ಅವರ ಮನೆಯಲ್ಲಿ ವ್ಯವಸ್ಥೆ ಮಾಡಬೇಕಾಗುತ್ತದೆ. ಕೋಣೆಯಲ್ಲಿ ವಾಸಿಸುವ ಅಂತಹ ರೋಗಿಗಳ ಆಮ್ಲಜನಕದ ಶುದ್ಧತ್ವವು ಶೇಕಡಾ 94 ಕ್ಕಿಂತ ಹೆಚ್ಚಿರಬೇಕು ಮತ್ತು ವಾತಾಯನ ಉತ್ತಮ ವ್ಯವಸ್ಥೆ ಕೂಡ ಇರಬೇಕು. 

ಕರೋನಾ (Coronavirus) ಸೋಂಕಿತ ರೋಗಿಗೆ ಎಲ್ಲಾ ಸಮಯದಲ್ಲೂ ಒಬ್ಬ ಆರೈಕೆದಾರ ಹಾಜರಿರಬೇಕು ಮತ್ತು ಮನೆ ಪ್ರತ್ಯೇಕತೆಯ ಸಮಯದಲ್ಲಿ ಉಸ್ತುವಾರಿ ಮತ್ತು ಆಸ್ಪತ್ರೆಯ ನಡುವಿನ ಸಂವಾದವನ್ನು ಮುಂದುವರಿಸಬೇಕು ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಮತ್ತು ಒತ್ತಡ, ಮಧುಮೇಹ, ಹೃದ್ರೋಗ, ದೀರ್ಘಕಾಲದ ಶ್ವಾಸಕೋಶ / ಯಕೃತ್ತು / ಮೂತ್ರಪಿಂಡ ಕಾಯಿಲೆ ಇತ್ಯಾದಿಗಳಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಕರೋನಾ ಪಾಸಿಟಿವ್ ಆಗಿದ್ದರೆ ರೋಗಿಯ ಆರೋಗ್ಯವನ್ನು ಸರಿಯಾಗಿ ಪರಿಶೀಲಿಸಿದ ನಂತರವೇ ವೈದ್ಯಕೀಯ ಅಧಿಕಾರಿ ಹೋಂ ಕ್ವಾರೆಂಟೈನ್‌ಗೆ ಅನುಮೋದಿಸುತ್ತಾರೆ.

ಇದನ್ನೂ ಓದಿ -  Immunity Booster Drink: ಕರೋನಾ ಯುಗದಲ್ಲಿ ರಾಮಬಾಣವಾಗಿ ಕಾರ್ಯನಿರ್ವಹಿಸಲಿದೆ ಈ ಪಾನೀಯ

ರೋಗಿಯ ಜ್ವರವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಪ್ಯಾರಸಿಟಮಾಲ್ 650 ಮಿಗ್ರಾಂ ಅನ್ನು ದಿನಕ್ಕೆ ನಾಲ್ಕು ಬಾರಿ ತೆಗೆದುಕೊಳ್ಳಬಹುದು. ಅದಾಗ್ಯೂ ಜ್ವರ ನಿಯಂತ್ರಣಕ್ಕೆ ಬಾರದಿದ್ದರೆ ದಿನಕ್ಕೆ ಎರಡು ಬಾರಿ ನೊಪ್ರೊಕ್ಸೆನ್ 250 ಮಿಗ್ರಾಂನಂತಹ ಸ್ಟೀರಾಯ್ಡ್ ಅಲ್ಲದ ಉರಿಯೂತದ ಔಷಧಿಗಳನ್ನು ನೀಡುವ ವೈದ್ಯರನ್ನು ಸಂಪರ್ಕಿಸಬಹುದು.

ಅಂತಹ ರೋಗಿಗಳು ಐವರ್ಮೆಕ್ಟಿನ್ (200 ಎಂಸಿಜಿ / ಕೆಜಿ) ಟ್ಯಾಬ್ಲೆಟ್ ಅನ್ನು ದಿನಕ್ಕೆ ಒಮ್ಮೆ ಮೂರರಿಂದ ಐದು ದಿನಗಳವರೆಗೆ ತೆಗೆದುಕೊಳ್ಳಬಹುದು ಎಂದು ಮಾರ್ಗಸೂಚಿಗಳು ಹೇಳುತ್ತವೆ. ಐದು ದಿನಗಳಿಗಿಂತ ಹೆಚ್ಚು ಜ್ವರ / ಕೆಮ್ಮುಗಾಗಿ ಇನ್ಹೇಲರ್ ಬುಡೆಸೊನೈಡ್ ಅನ್ನು ಪ್ರತಿದಿನ ಎರಡು ಬಾರಿ 800 ಎಂಸಿಜಿ ಇನ್ಹೇಲರ್ ಮೂಲಕ ನೀಡಬಹುದು ಎಂದು ಇದರಲ್ಲಿ ಸೂಚಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News