New Government Scheme: ಸರ್ಕಾರಿ ಪಡಿತರ ಅಂಗಡಿಗಳ ಮೂಲಕ ಗ್ಯಾಸ್ ಸಿಲಿಂಡರ್ ಮಾರಾಟ! ಬ್ಯಾಂಕ್ ಸೇವೆ, ಇನ್ಸುರೆನ್ಸ್ ಸೇವೆ ಕೂಡ ಆರಂಭ!

New Government Scheme: ಈ ಯೋಜನೆಯಲ್ಲಿ ಆಸಕ್ತಿ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳಿಗೆ ಅಗತ್ಯ ಬೆಂಬಲ ನೀಡಲಾಗುವುದು ಎಂದು ಆಯಿಲ್ ಮಾರ್ಕೆಟಿಂಗ್ ಕಂಪನಿಗಳ ಪ್ರತಿನಿಧಿಗಳು ತಿಳಿಸಿದ್ದಾರೆ.

Written by - Nitin Tabib | Last Updated : Oct 27, 2021, 10:08 PM IST

    ಶೀಘ್ರದಲ್ಲೇ ನೀವು ಸರ್ಕಾರಿ ಪಡಿತರ ಅಂಗಡಿಗಳಲ್ಲಿ ಗ್ಯಾಸ್ ಸಿಲಿಂಡರ್ ಖರೀದಿಸಲು ಸಾಧ್ಯವಾಗಲಿದೆ .

    ವಿಮೆಯ ಪ್ರೀಮಿಯಂ ಪಾವತಿಸುವುದು ಅಥವಾ ಅಂಚೆ ಕಛೇರಿಯಲ್ಲಿ ನಿಮ್ಮ ಮಾಸಿಕ ಉಳಿತಾಯ ಯೋಜನೆಯ ಕಂತು ಪಾವತಿಸುವುದು ಮುಂತಾದ ಹಣಕಾಸು ಸೇವೆಗಳನ್ನು ನೀವು ನ್ಯಾಯಬೆಲೆ ಅಂಗಡಿಗಳಲ್ಲಿಯೇ ಪಡೆಯಬಹುದು

New Government Scheme: ಸರ್ಕಾರಿ ಪಡಿತರ ಅಂಗಡಿಗಳ ಮೂಲಕ ಗ್ಯಾಸ್ ಸಿಲಿಂಡರ್ ಮಾರಾಟ! ಬ್ಯಾಂಕ್ ಸೇವೆ, ಇನ್ಸುರೆನ್ಸ್ ಸೇವೆ ಕೂಡ ಆರಂಭ! title=
New Government Scheme (Representational Image)

New Government Scheme: ಶೀಘ್ರದಲ್ಲೇ ನೀವು ಸರ್ಕಾರಿ ಪಡಿತರ ಅಂಗಡಿಗಳಲ್ಲಿ ಗ್ಯಾಸ್ ಸಿಲಿಂಡರ್ ಖರೀದಿಸಲು ಸಾಧ್ಯವಾಗಲಿದೆ ಎಂಬ ವರದಿಯೊಂದು ಪ್ರಕಟವಾಗಿದೆ. ವಿಮೆಯ ಪ್ರೀಮಿಯಂ ಪಾವತಿಸುವುದು ಅಥವಾ ಅಂಚೆ ಕಛೇರಿಯಲ್ಲಿ ನಿಮ್ಮ ಮಾಸಿಕ ಉಳಿತಾಯ ಯೋಜನೆಯ ಕಂತು ಪಾವತಿಸುವುದು ಮುಂತಾದ ಹಣಕಾಸು ಸೇವೆಗಳನ್ನು (Financial Services) ನೀವು ನ್ಯಾಯಬೆಲೆ ಅಂಗಡಿಗಳಲ್ಲಿಯೇ ಪಡೆಯಬಹುದು ಎಂದು ಈ ವರದಿಯಲ್ಲಿ ಹೇಳಲಾಗಿದೆ.  ನ್ಯಾಯಬೆಲೆ ಅಂಗಡಿಗಳಲ್ಲಿ ಸಣ್ಣ ಗ್ಯಾಸ್ ಸಿಲಿಂಡರ್‌ಗಳ ಮಾರಾಟ ಮತ್ತು ಹಣಕಾಸು ಸೇವೆಗಳನ್ನು ಒದಗಿಸಲು ಅವಕಾಶ ನೀಡಬಹುದು ಎಂದು ಸರ್ಕಾರ ಬುಧವಾರ ಹೇಳಿದೆ. ಈ ನ್ಯಾಯಬೆಲೆ ಅಂಗಡಿಗಳನ್ನು ( Fair Price Shops) ಸರ್ಕಾರಿ ಪಡಿತರ ಅಂಗಡಿಗಳೆಂದೂ (Ration Shops) ಕರೆಯುತ್ತಾರೆ. ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಮತ್ತು ರಾಜ್ಯಗಳ ನಡುವಿನ ವರ್ಚುವಲ್ ಸಭೆಯಲ್ಲಿ ಈ ಯೋಜನೆಗಳನ್ನು ಪ್ರಾರಂಭಿಸುವ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ. 

ಸರ್ಕಾರಿ ಪಡಿತರ ಅಂಗಡಿಗಳ ಫೈನಾನ್ಸಿಯಲ್ ವಯಾಬಿಲಿಟಿ ಹೆಚ್ಚಳಕ್ಕೆ ಕ್ರಮ
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ನಂತರ, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ನೀಡಿರುವ ಹೇಳಿಕೆಯಲ್ಲಿ ಎಫ್‌ಪಿಎಸ್‌ನ ಆರ್ಥಿಕ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಬಲವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. FPS ಮೂಲಕ ಸಣ್ಣ LPG ಸಿಲಿಂಡರ್‌ಗಳ (LPG Cylinder) ಚಿಲ್ಲರೆ ಮಾರಾಟದ ಯೋಜನೆಯು ಪರಿಗಣನೆಯಲ್ಲಿದೆ ಅದು ಹೇಳಿದೆ. 

ಇದನ್ನೂ ಓದಿ-Agni-5 Test Fired Successfully - Agni-5 ಕ್ಷಿಪಣಿಯ ಯಶಸ್ವಿ ಪರೀಕ್ಷೆ, 5000 ಕಿ.ಮೀ ಮಾರಕ ಸಾಮರ್ಥ್ಯ, ತೆಕ್ಕೆಗೆ ಇಡೀ ಚೀನಾ ಹಾಗೂ ಪಾಕಿಸ್ತಾನ

ಸಂಪೂರ್ಣ ನೆರವು ಒದಗಿಸುವುದಾಗಿ ಹೇಳಿದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು
ಪಡಿತರ ಅಂಗಡಿಗಳ ಮೂಲಕ ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳ ಚಿಲ್ಲರೆ ಮಾರಾಟದ ಪ್ರಸ್ತಾಪವನ್ನು ತೈಲ ಮಾರುಕಟ್ಟೆ ಕಂಪನಿಗಳ ಪ್ರತಿನಿಧಿಗಳು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ ಆಸಕ್ತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅಗತ್ಯ ಬೆಂಬಲ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-'Drugs ಜೀವನದ ನೋವನ್ನು ಕಡಿಮೆ ಮಾಡುತ್ತದೆ, ಮದ್ಯ-ಗುಟಕಾ ರೀತಿ ಅದಕ್ಕೂ ವಿನಾಯ್ತಿ ಸಿಗಬೇಕು'

ಈ ಕುರಿತು ನಿರಂತರ ಟ್ವೀಟ್ ಮಾಡಿರುವ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ (Piyush Goyal), ಸರ್ಕಾರಿ ಪಡಿತರ ಕೇಂದ್ರಗಳ  ಮೂಲಕ ಸಣ್ಣ ಗ್ಯಾಸ್ ಸಿಲಿಂಡರ್‌ಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಡಿತರದಾರರಿಗೆ ಅರಿವು ಮೂಡಿಸಬೇಕು. ಸರ್ಕಾರಿ ಪಡಿತರ ಅಂಗಡಿಗಳ (FPS) ಆರ್ಥಿಕ ಸದೃಢತೆಯನ್ನು ಹೆಚ್ಚಿಸಲು ತಮ್ಮ ಸಚಿವಾಲಯವು ಈಗಾಗಲೇ ಪ್ರಯತ್ನಗಳನ್ನು ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರ. ದೇಶದಲ್ಲಿ 5.26 ಲಕ್ಷ ನ್ಯಾಯಬೆಲೆ ಅಂಗಡಿಗಳು ಅಂದರೆ ಸರ್ಕಾರಿ ಪಡಿತರ ಅಂಗಡಿಗಳಿವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸರ್ಕಾರಿ ಪಡಿತರ ಅಂಗಡಿಗಳ ಮೂಲಕ ಸಬ್ಸಿಡಿ ಮೇಲೆ ಪಡಿತರ ನೀಡಲಾಗುತ್ತದೆ.

ಇದನ್ನೂ ಓದಿ-Neeraj Chopra ಸೇರಿದಂತೆ 11 ಆಟಗಾರರಿಗೆ ಖೇಲ್ ರತ್ನ, 35 ಆಟಗಾರರಿಗೆ ಅರ್ಜುನ ಪ್ರಶಸ್ತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News