ಸೆಪ್ಟೆಂಬರ್ 1ರಿಂದ ಹೊಸ ಬ್ಯಾಂಕ್ ಆರಂಭ, ಶೂನ್ಯ ಬ್ಯಾಲೆನ್ಸ್ನಲ್ಲಿ ತೆರೆಯಿರಿ ಉಳಿತಾಯ ಖಾತೆ

ದೀರ್ಘಾವಧಿಯ ಕಾಯುವಿಕೆಯ ನಂತರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(IPPB) ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 1 ರಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗೆ ಚಾಲನೆ ನೀಡಲಿದ್ದಾರೆ.

Last Updated : Aug 24, 2018, 03:38 PM IST
ಸೆಪ್ಟೆಂಬರ್ 1ರಿಂದ ಹೊಸ ಬ್ಯಾಂಕ್ ಆರಂಭ, ಶೂನ್ಯ ಬ್ಯಾಲೆನ್ಸ್ನಲ್ಲಿ  ತೆರೆಯಿರಿ ಉಳಿತಾಯ ಖಾತೆ title=

ನವದೆಹಲಿ: ದೀರ್ಘಾವಧಿಯ ಕಾಯುವಿಕೆಯ ನಂತರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(IPPB) ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 1 ರಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗೆ ಚಾಲನೆ ನೀಡಲಿದ್ದಾರೆ.  IPPB ದೇಶದ ಮೂರನೇ ಪೇಮೆಂಟ್ ಬ್ಯಾಂಕ್ ಆಗಿರುತ್ತದೆ. ಇದಕ್ಕೂ ಮುನ್ನ ಏರ್ಟೆಲ್ ಮತ್ತು paytm ಇದರ ಪರವಾನಗಿ ದೊರೆತಿತ್ತು. ಯಾವುದೇ ವ್ಯಕ್ತಿ ಅಥವಾ ಸಣ್ಣ ವ್ಯಾಪಾರಿ ಇದರ ಮೂಲಕ 1 ಲಕ್ಷದವರೆಗೂ ಹಣವನ್ನು ಜಮಾ ಮಾಡಬಹುದು.

ಈ ಮೊದಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅನ್ನು ಆಗಸ್ಟ್ 21ಕ್ಕೆ ಪ್ರಾರಂಭಿಸಲು ಸಮಯ ನಿಗದಿಗೊಳಿಸಲಾಗಿತ್ತು. ಆದರೆ ಆಗಸ್ಟ್ 16 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ದಿನಾಂಕವನ್ನು ಬದಲಾಯಿಸಲಾಯಿತು. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಆರಂಭದ ದಿನದಂದೇ ಅದರ ಆಪ್ ಅನ್ನೂ ಸಹ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆ ಅಪ್ಲಿಕೇಶನ್ ನ ಮೂಲಕ ಗ್ರಾಹಕರು 100 ಕಂಪನಿಗಳ ಸೇವೆಗಳಲ್ಲಿ ಸುಲಭವಾಗಿ ಪಾವತಿಸಲು ಸಹಾಯವಾಗುತ್ತದೆ.

ಒಂದೇ ಪ್ಲಾಟ್ ಫಾರ್ಮ್ ನಲ್ಲಿ 100 ಸೇವೆ
ಒಂದೇ ಪ್ಲಾಟ್ ಫಾರ್ಮ್ ನಲ್ಲಿ ನೀವು ಫೋನ್ ರೀಚಾರ್ಜ್, ವಿದ್ಯುತ್ ಬಿಲ್, ಡಿಟಿಎಚ್ ಸೇವೆ ಮತ್ತು ಕಾಲೇಜು ಶುಲ್ಕ ಇತ್ಯಾದಿಗಳನ್ನು ಪಾವತಿಸಲು ಇದು ನಿಮ್ಮನ್ನು ಅನುಮತಿಸುತ್ತದೆ. ಇಂಡಿಯಾ ಪೋಸ್ಟ್ ಬ್ಯಾಂಕ್ ಸಿಇಒ ಸುರೇಶ್ ಸೇಥಿ ಅವರು ದೇಶಾದ್ಯಂತ ಐಪಿಪಿಬಿನ 650 ಶಾಖೆಗಳು ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. 

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಬಗೆಗಿನ ಪ್ರಮುಖ ವಿಷಯಗಳು

Trending News