Video: ಮಗನ ನಿಶ್ಚಿತಾರ್ಥದಲ್ಲಿ ಗಮನ ಸೆಳೆದ ನೀತಾ ಅಂಬಾನಿ ನೃತ್ಯ

ಹೆಸರಾಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರನ ನಿಶ್ಚಿತಾರ್ಥ ಗುರುವಾರ ಮುಂಬೈನಲ್ಲಿ ನಡೆಯಿತು. 

Last Updated : Jun 29, 2018, 02:50 PM IST
Video: ಮಗನ ನಿಶ್ಚಿತಾರ್ಥದಲ್ಲಿ ಗಮನ ಸೆಳೆದ ನೀತಾ ಅಂಬಾನಿ ನೃತ್ಯ title=

ನವದೆಹಲಿ: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರ ಆಕಾಶ್ ಅಂಬಾನಿ ಅವರು ನಿಶ್ಚಿತಾರ್ಥ ಕಾರ್ಯಕ್ರಮ ಗುರುವಾರ ಶ್ಲೋಕ ಮೆಹತಾ ಅವರೊಂದಿಗೆ ಮುಂಬೈನಲ್ಲಿ ನೆರವೇರಿತು. ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮೊದಲಾದ ಹಲವು ದೊಡ್ಡ ಬಾಲಿವುಡ್ ಸ್ಟಾರ್ ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಗನ ನಿಶ್ಚಿತಾರ್ಥದ ಸಂದರ್ಭದಲ್ಲಿ, ನೀತಾ ಅಂಬಾನಿ ಅದ್ಭುತ ನೃತ್ಯ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ನೃತ್ಯ ಎಲ್ಲರ ಗಮನ ಸೆಳೆಯಿತು. ಅದೇ ಸಮಯದಲ್ಲಿ, ಮುಕೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ನೂತನ ವಧುವನ್ನು ಸ್ವಾಗತಿಸಿದರು.

ಮುಖೇಶ್ ಅಂಬಾನಿಯವರ ಮುಂಬೈನ ಆಂಟಿಲಿಯಾ ಬಂಗಲೆಯಲ್ಲಿ ಗುರುವಾರ ಈ ಕಾರ್ಯಕ್ರಮ ನೆರವೇರಿತು. ಈ ಕಾರ್ಯಚಟುವಟಿಕೆಯ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು. ನೀತಾ ಅಂಬಾನಿ ನಿಶ್ಚಿತಾರ್ಥದ ಸಂದರ್ಭದಲ್ಲಿ ಮಾಡಿರುವ ನೃತ್ಯದ ತುಣುಕು ಒಂದು ವಿಡಿಯೋದಲ್ಲಿದೆ. ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ನೀತಾ ಕಾರ್ಯಕ್ರಮದಲ್ಲಿ ಅದ್ಭುತವಾಗಿ ನೃತ್ಯ ಮಾಡಿದ್ದಾರೆ.

 

Watch the mother of Groom #nitaambani performs a classical dance at #akashambani and #shlokamehta pre engagement Sangeet ceremony last night.. ❤ Follow 👉 @fablifestyle.in for more updates.. ✔ . . . . . #mukeshambani #anantambani #luxurywedding #wedding #prewedding #prewed #momstyle #momsofinstagram #momlife #dance #engaged #engagement #engagementphotos #weddingparty #preweddingphoto #dancemom #dancemoms #akustoletheshlo #dancephotography #dancefloor #luxurywedding #TheFabApp #FabOccasions #FabLifestyle #likeforlike #followforfollow #akashloka

A post shared by Fab Lifestyle (@fablifestyle.in) on

ಎರಡನೆಯ ವಿಡಿಯೋದಲ್ಲಿ, ಈಶಾ ಅಂಬಾನಿ ಅವರ ಸಹೋದರ ಆಕಾಶ್ ಮತ್ತು ಅತ್ತಿಗೆ ಶ್ಲೋಕ ಅವರನ್ನು ಗುಜರಾತಿ ಸಂಪ್ರದಾಯದಂತೆ  ಸ್ವಾಗತಿಸಿದರು. 

Trending News