NEET PG Exam Postpone: ನೀಟ್ ಸ್ನಾತಕೋತ್ತರ 2022 ಮುಂದೂಡಿಕೆ, ಆರೋಗ್ಯ ಸಚಿವಾಲಯ ನೀಡಿದ ಕಾರಣ ಇಲ್ಲಿದೆ

NEET PG 2022: ನೀಟ್ ಪಿಜಿ ಪರೀಕ್ಷೆಯನ್ನು ಆರೋಗ್ಯ ಸಚಿವಾಲಯ 6-8 ವಾರಗಳ ಕಾಲ ಮುಂದೂಡಿದೆ. ಈ ಪರೀಕ್ಷೆ ಮಾರ್ಚ್ 12 ರಂದು ನಡೆಯಬೇಕಿತ್ತು.

Written by - Nitin Tabib | Last Updated : Feb 4, 2022, 01:12 PM IST
  • ಮಾರ್ಚ್ 12ಕ್ಕೆ ಈ ಪರೀಕ್ಷೆ ನಡೆಯಬೇಕಿತ್ತು.
  • ದಿನಾಂಕಗಳು ಘರ್ಷಣೆಯಾಗುತ್ತಿವೆ ಎಂದು ತರ್ಕ ಮಂಡಿಸಿದ್ದ ವಿದ್ಯಾರ್ಥಿಗಳು.
  • ಶೀಘ್ರದಲ್ಲಿಯೇ ಹೊಸ ದಿನಾಂಕ ಘೋಷಣೆ.
NEET PG Exam Postpone: ನೀಟ್ ಸ್ನಾತಕೋತ್ತರ 2022 ಮುಂದೂಡಿಕೆ, ಆರೋಗ್ಯ ಸಚಿವಾಲಯ ನೀಡಿದ ಕಾರಣ ಇಲ್ಲಿದೆ title=
NEET PG Exam Postponed (File Photo)

ನವದೆಹಲಿ: NEET PG Exam 2022 Postpone - NEET PG ಪರೀಕ್ಷೆ (NEET PG 2022) ಕುರಿತು ಆರೋಗ್ಯ ಸಚಿವಾಲಯವು (Union Health Ministry) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. NEET PG 2021 ರ ಕೌನ್ಸೆಲಿಂಗ್ ಕಾರಣ, ಈ ವರ್ಷ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಪರೀಕ್ಷೆಯನ್ನು 6-8 ವಾರಗಳ ಕಾಲ ಮುಂದೂಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಪರೀಕ್ಷೆ ಮಾರ್ಚ್ 12 ರಂದು ನಡೆಯಬೇಕಿತ್ತು.

ಇದನ್ನೂ ಓದಿ-Asaduddin Owaisi ಮೇಲೆ ಗುಂಡು ಹಾರಿಸಿದ್ದು ಯಾರು, ಯಾಕೆ ಆತ AIMIM ಸಂಸದನನ್ನು ಗುರಿಯಾಗಿಸಿದ್ದು?

ವಾಸ್ತವದಲ್ಲಿ,  ಈ ಪರೀಕ್ಷೆಯನ್ನು ಮುಂದೂಡಬೇಕೆಂದು ವಿದ್ಯಾರ್ಥಿಗಳು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಕಳೆದ ವರ್ಷ ಅಂದರೆ 2021ರ NEET ಪಿಜಿ ಕೌನ್ಸೆಲಿಂಗ್‌ನ ದಿನಾಂಕಗಳು ಮತ್ತು ಈ ವರ್ಷದ ಪರೀಕ್ಷೆಯ ದಿನಾಂಕಗಳು ಪರಸ್ಪರ ಘರ್ಷಣೆಯಾಗುತ್ತಿವೆ ಹೀಗಾಗಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ವಿದ್ಯಾರ್ಥಿಗಳು ತರ್ಕ ಮಂಡಿಸಿದ್ದರು.

ಇದನ್ನೂ ಓದಿ-Pune: ನಿರ್ಮಾಣದ ಹಂತದ ಕಟ್ಟಡ ಕುಸಿದು 7 ಮಂದಿ ದುರ್ಮರಣ, ಹಲವರಿಗೆ ಗಾಯ

ವಿದ್ಯಾರ್ಥಿಗಳ ತರ್ಕ ಒಪ್ಪಿಕೊಂಡ ಸರ್ಕಾರ
ವಿದ್ಯಾರ್ಥಿಗಳ ಬೇಡಿಕೆಗಳನ್ನು ನ್ಯಾಯಯುತವೆಂದು ಪರಿಗಣಿಸಿ ಆರೋಗ್ಯ ಸಚಿವಾಲಯ ಇದೀಗ ಪರೀಕ್ಷೆಯನ್ನು 6-8 ವಾರಗಳ ಕಾಲ ಮುಂದೂಡಿದೆ. ಪರೀಕ್ಷೆಯ ದಿನಾಂಕವು ಹಿಂದಿನ ಅಧಿವೇಶನದ ಕೌನ್ಸೆಲಿಂಗ್ ದಿನಾಂಕಗಳೊಂದಿಗೆ ಘರ್ಷಣೆಯಾಗುತ್ತಿದೆ, ಇದು ವಿದ್ಯಾರ್ಥಿಗಳಿಗೆ ಹಾನಿಯಾಗಬಹುದು ಎಂದು ಸಚಿವಾಲಯ ಒಪ್ಪಿಕೊಂಡಿದೆ. ಆದರೆ, ಪರೀಕ್ಷೆಯ ಮುಂದಿನ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ-Bengaluru: ಅಂಗನವಾಡಿ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರ ಆರಂಭವನ್ನು ವಿರೋಧಿಸಿ ಪ್ರತಿಭಟನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News