ನವದೆಹಲಿ: 2014 ರಲ್ಲಿನ ಮ್ಯಾಜಿಕ್ ಕೂಡ ಈ ಬಾರಿ ಸಂಭವಿಸಲಿದೆ ಎಂದು ಪ್ರಮುಖ ಸಂಸ್ಥೆಗಳ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
#ZeeMahaExitPoll Live: Exit poll trends predict lead for BJP+
Watch: https://t.co/dznYNGYIwd@Mimansa_Zee @aditi_tyagi @SachinArorra @AmanChopra_ #AbkiBaarKiskiSarkar pic.twitter.com/us449ve7lp
— Zee News (@ZeeNews) May 19, 2019
ರಿಪಬ್ಲಿಕ್ ಸಿ-ವೋಟರ್ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಒಕ್ಕೂಟ 543 ಸೀಟುಗಳಲ್ಲಿ 300 ಕ್ಕಿಂತಲೂ ಅಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದೆ. ಇನ್ನೊಂದೆಡೆ ಟೈಮ್ಸ್ ನೌ-ವಿಎಂಆರ್ ಕೂಡ ಎನ್ಡಿಎ 300 ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ. ಈಗ ಬಂದಿರುವ ಬಹುತೇಕ ಸಮೀಕ್ಷೆಗಳು ಎನ್.ಡಿ.ಎ 298, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ 128 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿವೆ.
ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳ ಪಟ್ಟಿ
ಬಿಜೆಪಿ, ಕಾಂಗ್ರೆಸ್, ಇತರರು
ರಿಪಬ್ಲಿಕ್ ಟಿವಿ-ಸಿ ವೋಟರ್ - 287, 128, 127
ರಿಪಬ್ಲಿಕ್ - ಜನ್ ಕಿ ಬಾತ್- 305, 124, 113,
ಟೈಮ್ಸ್ ನೌ-ವಿಎಂಆರ್ - 306, 142, 94
ನ್ಯೂಸ್ ನೇಷನ್- 282-290, 118-126, 130-138
ಏಳನೇ ಹಾಗೂ ಅಂತಿಮ ಹಂತದ ಮತದಾನದ ನಂತರ ಬಿಡುಗಡೆಯಾಗಿರುವ ಸಮೀಕ್ಷೆ ಗಳು ಎನ್.ಡಿ.ಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರದ ಚುಕ್ಕಾಣೆ ಹಿಡಿಯಲಿದೆ ಎಂದು ಹೇಳಿವೆ. ಮೇ 23 ರಂದು ಮತ ಎಣಿಕೆ ನಡೆಯಲಿದೆ ಅಂದು ಫಲಿತಾಂಶ ಹೊರ ಬಿಳಲಿದೆ. ಅದಕ್ಕೂ ಮೊದಲು ಈಗ ಎಲ್ಲ ಸಮೀಕ್ಷೆಗಳು ಕಾಂಗ್ರೆಸ್ ಹಾಗೂ ಬಿಜೆಪಿ ಹಾಗೂ ಇತರ ಪ್ರಾದೇಶಿಕ ಪಕ್ಷಗಳು ಸ್ಥಾನಗಳನ್ನು ಪಡೆಯಲಿವೆ ಎಂದು ಅಂದಾಜು ಲೆಕ್ಕದ ಮೂಲಕ ಹೇಳಿವೆ.