ಗದ್ದಲದಲ್ಲಿ ವ್ಯರ್ಥವಾದ ಸಂಸತ್ ಕಲಾಪ: 23 ದಿನಗಳ ವೇತನ ಪಡೆಯದಿರಲು ಎನ್ಡಿಎ ಸಂಸದರ ನಿರ್ಧಾರ

ಈ ಬಾರಿಯ ಬಜೆಟ್ ಅಧಿವೇಶನ ಪ್ರತಿಪಕ್ಷಗಳ ಗದ್ದಲದಲ್ಲೇ ವ್ಯರ್ಥವಾಗಿರುವುದರಿಂದ ಅಷ್ಟು ದಿನಗಳ ವೇತನ ಪಡೆಯದಿರಲು ಎನ್ಡಿಎ ಸಂಸದರು ತೀರ್ಮಾನಿಸಿರುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.

Last Updated : Apr 5, 2018, 08:50 AM IST
ಗದ್ದಲದಲ್ಲಿ ವ್ಯರ್ಥವಾದ ಸಂಸತ್ ಕಲಾಪ: 23 ದಿನಗಳ ವೇತನ ಪಡೆಯದಿರಲು ಎನ್ಡಿಎ ಸಂಸದರ ನಿರ್ಧಾರ title=

ನವದೆಹಲಿ: ಸಂಸತ್ ಬಜೆಟ್ ಅಧಿವೇಶನದ 23 ದಿನಗಳು ಪ್ರತಿಪಕ್ಷಗಳ ಗದ್ದಲಕ್ಕೆ ಬಲಿಯಾಗಿದ್ದು, ಕಲಾಪ ವ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಅಷ್ಟು ದಿನಗಳ ವೇತನ ಪಡೆಯದಿರಲು ಎನ್ಡಿಎ ಸಂಸದರು ತೀರ್ಮಾನಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.

23 ದಿನಗಳ ಕಲಾಪ ಯಾವುದೇ ಚರ್ಚೆ, ಮಸೂದೆ ಮಂಡನೆ ಇಲ್ಲದೆ ವ್ಯರ್ಥವಾಗಿದೆ. ಕಲಾಪ ವ್ಯರ್ಥವಾಗಲು ಕಾಂಗ್ರೆಸ್ ಕಾರಣ ಎಂದು ಆರೋಪ ಮಾಡಿರುವ ಸಚಿವ ಅನಂತ್ ಕುಮಾರ್, ದೇಶದ ಜನರ ಸೇವೆ ಮಾಡುವುದಕ್ಕಾಗಿ ನಮಗೆ ಈ ಹಣ ನೀಡಲಾಗುತ್ತಿದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ವಿಷಯ ಕಲಾಪದಲ್ಲಿ ಚರ್ಚೆಯಾಗಿಲ್ಲ, ಆದ್ದರಿಂದ ನಮಗೆ ಆ ಹಣ ಪಡೆಯುವ ಅಧಿಕಾರವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರೂ ಸೇರಿದಂತೆ ಎನ್ಡಿಎ ಮೈತ್ರಿಕೂಟದ ಎಲ್ಲ ಸಂಸದರೂ ಸಂಸತ್ ಕಲಾಪದ ವೇತನ ಪಡೆಯದಿರಲು ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದರು.

Trending News