ಛತ್ತೀಸ್‌ಗಢದಲ್ಲಿ ಡೀಸೆಲ್ ಟ್ಯಾಂಕರ್ ಸ್ಫೋಟಿಸಿದ ನಕ್ಸಲರು; ಮೂವರು ನಾಗರಿಕರ ಸಾವು

ಈ ಘಟನೆಯ ಹಿನ್ನೆಲೆಯಲ್ಲಿ, ಕಂಕರ್‌ನ ಎಸ್‌ಪಿ ಕೂಡ ಸ್ಥಳಕ್ಕೆ ತಲುಪಿದ್ದಾರೆ. ಮುನ್ನೆಚ್ಚರಿಕೆಯಾಗಿ, ಭನುಪ್ರತಾಪುರ ಮತ್ತು ನಾರಾಯಣ್ ಪುರವನ್ನು ಸಂಪರ್ಕಿಸುವ ರಸ್ತೆಯನ್ನು ಕೆಲವು ಗಂಟೆಗಳ ಕಾಲ ಮುಚ್ಚಲಾಗಿದ್ದು, ಸೈನಿಕರು ನಕ್ಸಲರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Last Updated : Sep 24, 2019, 03:12 PM IST
ಛತ್ತೀಸ್‌ಗಢದಲ್ಲಿ ಡೀಸೆಲ್ ಟ್ಯಾಂಕರ್ ಸ್ಫೋಟಿಸಿದ ನಕ್ಸಲರು; ಮೂವರು ನಾಗರಿಕರ ಸಾವು title=

ಛತ್ತೀಸ್‌ಗಢ: ಛತ್ತೀಸ್‌ಗಢದ ಕಂಕರ್ ಜಿಲ್ಲೆಯಲ್ಲಿ ರೈಲ್ವೆ ಹಳಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಡೀಸೆಲ್ ಟ್ಯಾಂಕರ್ ಅನ್ನು ನಕ್ಸಲ್ಸ್ ಸ್ಫೋಟಿಸಿದ್ದು, ಕನಿಷ್ಠ ಮೂರು ನಾಗರಿಕರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ತುಮಾ ಪಾಲ್ ಗ್ರಾಮದ ಬಳಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.

ಕಂಕರ್ ಜಿಲ್ಲೆಯ ರೌಫಾಟ್ ಪ್ರದೇಶದಲ್ಲಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಟ್ರಕ್ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ಈ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ, ಪರಿಸ್ಥಿತಿಯನ್ನು ಬಗ್ಗೆ ಪರಿಶೀಲಿಸಲು ಜವಾನರು ಸ್ಥಳಕ್ಕೆ ತಲುಪಿದಾಗ, ಹೊಂಚುದಾಳಿಯಾದ ನಕ್ಸಲರು ಅವರ ಮೇಲೆ ಗುಂಡು ಹಾರಿಸಿದರು. ಇನ್ನೂ ಕೂಡ ನಕ್ಸರರಿಂದ ಗುಂಡಿನ ದಾಳಿ ಮುಂದುವರೆದಿದೆ ಎನ್ನಲಾಗಿದೆ.

ಈ ಘಟನೆಯ ಹಿನ್ನೆಲೆಯಲ್ಲಿ, ಕಂಕರ್‌ನ ಎಸ್‌ಪಿ ಕೂಡ ಸ್ಥಳಕ್ಕೆ ತಲುಪಿದ್ದಾರೆ. ಮುನ್ನೆಚ್ಚರಿಕೆಯಾಗಿ, ಭನುಪ್ರತಾಪುರ ಮತ್ತು ನಾರಾಯಣ್ ಪುರವನ್ನು ಸಂಪರ್ಕಿಸುವ ರಸ್ತೆಯನ್ನು ಕೆಲವು ಗಂಟೆಗಳ ಕಾಲ ಮುಚ್ಚಲಾಗಿದ್ದು, ಸೈನಿಕರು ನಕ್ಸಲರಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
 

Trending News