ನವದೆಹಲಿ: ಪಂಜಾಬಿನ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರಾಗಿ ನವಜೋತ್ ಸಿಂಗ್ ಸಿಧು ಹೆಸರನ್ನು ಘೋಷಿಸಿದ ನಂತರ ಈಗ ಅವರು ತಮ್ಮ ಬಲ ಪ್ರದರ್ಶನವನ್ನು ತೋರಿಸುವ ನಿಟ್ಟಿನಲ್ಲಿ 62 ಶಾಸಕರು ಹಾಗೂ ಸಚಿವರೊಂದಿಗೆ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ವಿದ್ಯುತ್ ಬಿಕ್ಕಟ್ಟಿನ ವಿಷಯದ ಬಗ್ಗೆ ತಮ್ಮ ಸರ್ಕಾರದ ವಿರುದ್ಧ ಮಾಡಿದ ಹೇಳಿಕೆಗಳ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಆಪ್ತರು ಅಸಮಾಧಾನಗೊಂಡಿದ್ದಾರೆ.ಇದು ಸಿಧು (Navjot Singh Sidhu) ಅವರ ಕ್ಷೇತ್ರ ಮತ್ತು ನಗರದ ಧಾರ್ಮಿಕ ಸ್ಥಳಗಳಿಗೆ ನೀಡುತ್ತಿರುವ ಮೊದಲ ಭೇಟಿಯಲ್ಲಿ ಅಮರಿಂದರ್ ಬೆಂಬಲಿಗರ ಗೈರು ಹಾಜರಿ ಸ್ಪಷ್ಟವಾಗಿ ಕಾಣುತಿತ್ತು.ಸುವರ್ಣ ಮಂದಿರದಲ್ಲಿ ನಮಸ್ಕಾರ ಮಾಡಿದ ನಂತರ, ಸಿಧು ಮತ್ತು ಶಾಸಕರು ಹಿಂದೂ ಪ್ರಮುಖ ತಾಣಗಳಾದ ದುರ್ಗಿಯಾನಾ ಮಂದಿರ ಮತ್ತು ರಾಮ್ ತಿರಥ್ ಸ್ಥಾಲ್ ಗೆ ಭೇಟಿ ನೀಡಲಿದ್ದಾರೆ.
ಈ ಹಿಂದಿನ ದಿನ 62 ಕಾಂಗ್ರೆಸ್ ಶಾಸಕರು ಸಿಧು ಅಮೃತಸರ ನಿವಾಸದಲ್ಲಿ ಜಮಾಯಿಸಿ ಎರಡು ಚಾರ್ಟರ್ಡ್ ಐಷಾರಾಮಿ ಬಸ್ಗಳಲ್ಲಿ ಗೋಲ್ಡನ್ ಟೆಂಪಲ್ ಸಂಕೀರ್ಣವನ್ನು ತಲುಪಿದರು.ಸ್ವರ್ಣ ಮಂದಿರವನ್ನು ತಲುಪಿದ ನಂತರ ಅವರಿಗೆ ಪಕ್ಷದ ಕಾರ್ಯಕರ್ತರು ಆತ್ಮೀಯ ಸ್ವಾಗತ ನೀಡಿದರು.
ಇದನ್ನೂ ಓದಿ: Punjab Congress Crisis: ರಾಹುಲ್ ಗಾಂಧಿ ಭೇಟಿಯಾದ ನವಜೋತ್ ಸಿಂಗ್ ಸಿಧು
ಸಿಧು ಜೊತೆ ಹಾಜರಿದ್ದ ಶಾಸಕರಲ್ಲಿ ರಾಜಾ ವಾರಿಂಗ್, ರಾಜ್ ಕುಮಾರ್ ವರ್ಕಾ, ಇಂದರ್ಬೀರ್ ಬೊಲಾರಿಯಾ, ಬರೀಂದರ್ ಧಿಲ್ಲಾನ್, ಮದನ್ ಲಾಲ್ ಜಲಪುರಿ, ಹರ್ಮಿಂದರ್ ಗಿಲ್, ಹರ್ಜೋತ್ ಕಮಲ್, ಹರ್ಮಿಂದರ್ ಜಸ್ಸಿ, ಜೋಗಿಂದರ್ ಪಾಲ್ ಮತ್ತು ಪರಗತ್ ಸಿಂಗ್ ಇದ್ದರು. ಕ್ಯಾಬಿನೆಟ್ ಮಂತ್ರಿಗಳಲ್ಲಿ ಸುಖ್ಜಿಂದರ್ ಸಿಂಗ್ ರಾಂಧವಾ, ಚರಣಜಿತ್ ಚನ್ನಿ ಮತ್ತು ಟ್ರಿಪ್ತ್ ರಾಜಿಂದರ್ ಸಿಂಗ್ ಬಜ್ವಾ ಸೇರಿದ್ದಾರೆ.
ಪಕ್ಷದ ಹೈಕಮಾಂಡ್ ನಾಲ್ಕು ಶಾಸಕರಾದ ಸಂಗತ್ ಸಿಂಗ್ ಗಿಲ್ಜಿಯಾನ್, ಸುಖ್ವಿಂದರ್ ಸಿಂಗ್ ಡ್ಯಾನಿ, ಕುಲ್ಜಿತ್ ಸಿಂಗ್ ನಾಗ್ರಾ ಮತ್ತು ಪವನ್ ಗೋಯೆಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ.ಪಕ್ಷದ ಮುಖ್ಯಸ್ಥರ ಭೇಟಿಯ ಸಮಯದಲ್ಲಿ ಅವರು ಜೊತೆಯಲ್ಲಿದ್ದರು.
ಇದನ್ನೂ ಓದಿ: ನವಜೋತ್ ಸಿಂಗ್ ಸಿಧು ಗೆ ಔತಣಕೂಟಕ್ಕೆ ಆಹ್ವಾನ ನೀಡಿ ಅಚ್ಚರಿ ಮೂಡಿಸಿದ ಸಿಎಂ ಅಮರಿಂದರ್ ಸಿಂಗ್ ...!
ತಮ್ಮ ನಿಲುವನ್ನು ಕಠಿಣಗೊಳಿಸಿದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸಿಧು ಅವರನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೂ ಭೇಟಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಯಾವುದೇ ಸಮಯವನ್ನು ಕೋರಿಲ್ಲ. ನಿಲುವುಗಳಲ್ಲಿ ಯಾವುದೇ ಬದಲಾವಣೆಯಿಲ್ಲ ... ತಮ್ಮ ವಿರುದ್ಧ ವೈಯಕ್ತಿಕವಾಗಿ ಅವಹೇಳನಕಾರಿಯಾಗಿ ಸಾಮಾಜಿಕ ಮಾಧ್ಯಮಗಳ ದಾಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೂ ಸಿಧು ಅವರನ್ನು ಭೇಟಿಯಾಗುವುದಿಲ್ಲ" ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ