National Voters Day 2021 - ಇನ್ಮುಂದೆ ನಿಮ್ಮ ಫೋನ್ ನಲ್ಲಿಯೇ ನೀವು ವೋಟರ್ ಡೌನ್ಲೋಡ್ ಮಾಡಬಹುದು

National Voters Day 2021 - ನವದೆಹಲಿ: 11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ (NVD) ಅಂಗವಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ಮತದಾರರ ಗುರುತಿನ ಚೀಟಿಯ ಎಲೆಕ್ಟ್ರಾನಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ. 

Written by - Nitin Tabib | Last Updated : Jan 25, 2021, 10:58 AM IST
  • ಇಂದು ಮತದಾರರ ಗುರುತು ಚೀಟಿಯ ಇ-ಆವುರ್ತ್ತಿ ಬಿಡುಗಡೆ.
  • ಅಭಿಯಾನಕ್ಕೆ ಚಾಲನೆ ನೀಡಲಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್.
  • ಗುರುತು ಚೀಟಿಗಳನ್ನು ವೇಗವಾಗಿ ಮತದಾರರವರೆಗೆ ತಲುಪಿಸುವುದೇ ಇದರ ಉದ್ದೇಶ.
National Voters Day 2021 - ಇನ್ಮುಂದೆ ನಿಮ್ಮ ಫೋನ್ ನಲ್ಲಿಯೇ ನೀವು ವೋಟರ್ ಡೌನ್ಲೋಡ್ ಮಾಡಬಹುದು title=
National Voters Day 2021 (File Photo)

National Voters Day 2021 - ನವದೆಹಲಿ: 11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ (NVD) ಅಂಗವಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ಮತದಾರರ ಗುರುತಿನ ಚೀಟಿಯ ಎಲೆಕ್ಟ್ರಾನಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ. ಮೊಬೈಲ್ ಫೋನ್ ಅಥವಾ ವೈಯಕ್ತಿಕ ಕಂಪ್ಯೂಟರ್ ನಲ್ಲಿ ಇದನ್ನು ನೀವು ಡೌನ್ಲೋಡ್ ಮಾಡಬಹುದು. ಮತದಾರರ ಈ ಫೋಟೋ ಐಡೆಂಟಿಟಿ ಕಾರ್ಡ್ ಅನ್ನು ಮತದಾರರ ಹೆಲ್ಪ್ ಲೈನ್ ಆಪ್ ಅಥವಾ https://voterportal.eci.gov.in/ ಹಾಗೂ https://www.nvsp.in/ ವೆಬ್ಸೈಟ್ ಗಳಿಗೆ ಭೇಟಿ ನೀಡುವ ಮೂಲಕ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ಇದಕ್ಕೆ ಇ-ಇಪಿಐಸಿ ಅಂದರೆ ಎಲೆಕ್ಟ್ರಾನಿಕ್ ಎಲೆಕ್ಟರಲ್ ಫೋಟೋ ಐಡೆಂಟಿಟಿ ಕಾರ್ಡ್ ಪ್ರೋಗ್ರಾಂ ಎಂದು ಕರೆಯಲಾಗಿದೆ. ಇದನ್ನು ನೀವು ಮೊಬೈಲ್ ಫೋನ್ ಅಥವಾ ಪರ್ಸನಲ್ ಕಂಪ್ಯೂಟರ್ ನಲ್ಲಿ ನೀವು ಡೌನ್ ಲೋಡ್ ಮಾಡಬಹುದು.

ಇ-ಎಲೆಕ್ಟರ್ ಫೋಟೋ ಗುರುತಿನ ಚೀಟಿ ಚುನಾವಣಾ ಫೋಟೋ ಗುರುತಿನ ಚೀಟಿಯ ಡಿಜಿಟಲ್ ಆವೃತ್ತಿಯಾಗಿದ್ದು, ಅದನ್ನು ಡಿಜಿಟಲ್ ಲಾಕರ್‌ನಂತಹ ಸೌಲಭ್ಯಗಳಲ್ಲಿ ಉಳಿಸಬಹುದು ಮತ್ತು ಮುದ್ರಿಸಬಹುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಹೊಸ ನೋಂದಣಿಗಾಗಿ ನೀಡಲಾದ ಭೌತಿಕ ಐಡಿಗೆ ಹೆಚ್ಚುವರಿಯಾಗಿ ನೀಡಲಾಗುತ್ತಿದೆ.

ಇ-ಇಪಿಐಸಿ ಪ್ರೋಗ್ರಾಮ್ ಅನ್ನು ಒಟ್ಟುಎರಡು ಹಂತಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ ಜನವರಿ 25 ರಿಂದ 31 ರವರೆಗೆ, ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ ಮತ್ತು ತಮ್ಮ ಮೊಬೈಲ್ ಸಂಖ್ಯೆಯನ್ನು ಫಾರ್ಮ್ -6 ನಲ್ಲಿ ನೋಂದಾಯಿಸಿಕೊಂಡ ಎಲ್ಲಾ ಹೊಸ ಮತದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಸುನಿಶ್ಚಿತಗೊಳಿಸುವ ಮೂಲಕ ಇ-ಇಪಿಐಸಿ ಡೌನ್‌ಲೋಡ್  ಮಾಡಬಹುದಾಗಿದೆ.

ಇದನ್ನು ಓದಿ- Digital India: ವೋಟರ್ IDಗೆ ಸಂಬಂಧಿಸಿದ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ

ಇದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆ ವಿಶಿಷ್ಟವಾಗಿರಬೇಕು ಹಾಗೂ ಈ ಮೊದಲೇ ಮತದಾರರ ಪಟ್ಟಿಯಲ್ಲಿ ನೊಂದಾಯಿತವಾಗಿರಬಾರದು. ಈ ಕಾರ್ಯಕ್ರಮದ  ಎರಡನೇ ಹಂತ ಫೆ.1 ರಿಂದ ಆರಂಭವಾಗಲಿದೆ. ಸಾಮಾನ್ಯ ಮತದಾರರಿಗೆ ಇದು ಮುಕ್ತವಾಗಿರಲಿದೆ. ಅಂದರೆ, ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ ಎಲ್ಲರೂ ಕೂಡ  ಇ-ಇಪಿಐಸಿ ಡೌನ್ ಲೋಡ್ ಮಾಡಬಹುದು. ಈ ಕುರಿತು ಭಾನುವಾರ ಹೇಳಿಕೆಯೊಂದನ್ನು ನೀಡಿರುವ ಆಯೋಗ "ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಇ-ಇಪಿಐಸಿ ಕಾರ್ಯಕ್ರಮದ ಶುಭಾರಂಭ ಮಾಡಲಿದ್ದಾರೆ ಹಾಗೂ e-EPIC ಹಾಗೂ ಐದು ಹೊಸ ಮತದಾರರಿಗೆ ಫೋಟೋ ಐಡೆಂಟಿಟಿ ಕಾರ್ಡ್ (Voter ID) ಅನ್ನು ವಿತರಿಸಲಿದ್ದಾರೆ" ಎಂದಿದೆ.

ಇದನ್ನು ಓದಿ- ಇನ್ಮುಂದೆ ನಿಮ್ಮ ಈ ದಾಖಲೆಯನ್ನೂ ಕೂಡ ಆಧಾರ್‌ಗೆ ಲಿಂಕ್ ಮಾಡುವುದು ಅಗತ್ಯ!

ಐದು ರಾಜ್ಯಗಳಾಗಿರುವ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೆರಿಯಾ ವಿಧಾನಸಭೆ ಚುನಾವಣೆಗೂ ಮುನ್ನ ಈ ಕಾರ್ಯಕ್ರಮ ನಡೆಯುತ್ತಿರುವುದು ಇಲ್ಲಿ ಗಮನಾರ್ಹ. ಭೌತಿಕ ಕಾರ್ಡ್ ಮುದ್ರಣಗೊಂಡು ಮತದಾರರವರೆಗೆ ತಲುಪಲು ಸಮಯ ಬೇಕಾಗುತ್ತದೆ ಹಾಗೂ ಈ ಕಾರ್ಯಕ್ರಮದ ಮೂಲಕ ವೇಗವಾಗಿ ಮತದಾರರ ಗುರುತು ಚೀಟಿಯನ್ನು ಅವರ ಬಳಿ ತಲುಪಿಸಲು ಸಹಕಾರಿಯಾಗಲಿದೆ.

ಇದನ್ನು ಓದಿ-ನಿಮ್ಮ Voter ID ಕಳೆದಿದೆಯೇ? ಈ 11 ದಾಖಲೆಗಳಿದ್ದರೂ ಮತ ಚಲಾಯಿಸಬಹುದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News