ನವದೆಹಲಿ: ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಕಳೆದ 9 ದಿನಗಳಿಂದ ಸರ್ದಾರ್ ಸರೋವರ್ ಆಣೆಕಟ್ಟು ಪೀಡಿತರ ಪರವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮೇದಾ ಪಾಟ್ಕರ್ ಸರ್ಕಾರದ ಭರವಸೆ ಮೇರೆಗೆ ಸೋಮವಾರ ರಾತ್ರಿ ಉಪವಾಸ ಅಂತ್ಯಗೊಳಿಸಿದ್ದಾರೆ.
ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯ ಚೋಟಾ ಬಡ್ಡಾ ಗ್ರಾಮದಲ್ಲಿ ಮೇಧಾ ಪಾಟ್ಕರ್ ಮತ್ತು ಅವರ ಬೆಂಬಲಿಗರು ಆಗಸ್ಟ್ 25 ರಿಂದ ಚೋಟಾ ಬಡ್ಡಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.ಮಧ್ಯಪ್ರದೇಶದ ಬಾರ್ವಾನಿ ಸೇರಿದಂತೆ ಕೆಲವು ಹಳ್ಳಿಗಳು ಜಲಾಶಯದ ಹಿನ್ನೀರಿನ ಕಾರಣದಿಂದಾಗಿ ಮುಳುಗುತ್ತಿರುವುದರಿಂದ ಗುಜರಾತ್‌ನಲ್ಲಿ ಅಣೆಕಟ್ಟಿನ ಗೇಟ್‌ಗಳನ್ನು ತೆರೆಯಬೇಕೆಂದು ಪಾಟ್ಕರ್ ಬಯಸಿದ್ದರು.
Madhya Pradesh: Medha Patkar ends her indefinite fast after 9 days in Barwani. She was protesting against Gujarat Government's move to close the shutters of Sardar Sarovar Dam & raise water level to 138.68 metres. pic.twitter.com/6J4rp1RKNU
— ANI (@ANI) September 2, 2019
ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಪರವಾಗಿ ಸಂಧಾನಕ್ಕೆ ಬಂದಿದ್ದ ಮಾಜಿ ಮುಖ್ಯ ಕಾರ್ಯದರ್ಶಿ ಎಸ್.ಸಿ.ಬೆಹಾರ್ ಅವರೊಂದಿಗಿನ ಚರ್ಚೆ ನಂತರ ಮೇಧಾ ಪಾಟ್ಕರ್ ಉಪವಾಸವನ್ನು ಅಂತ್ಯಗೊಳಿಸಿದರು ಎನ್ನಲಾಗಿದೆ. ಇದೇ ವೇಳೆ ಪಾಟ್ಕರ್ ಜೊತೆಗಿದ್ದ ಇನ್ನೂ ಆರು ಮಂದಿ ತಮ್ಮ ಉಪವಾಸವನ್ನು ಕೊನೆಗೊಳಿಸಿದ್ದಾರೆ ಎಂದು ರಾಜ್ಯದ ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೆಪ್ಟೆಂಬರ್ 1 ರಂದು ಪಾಟ್ಕರ್ ಅವರ ಆರೋಗ್ಯವು ಹದಗೆಟ್ಟಿದೆ ಎಂಬ ವರದಿಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ಕಮಲ್ ನಾಥ್ ಸರ್ಕಾರದ ಪರವಾಗಿ ಬೆಹಾರ್ ಅವರನ್ನು ಸಂಧಾನಕ್ಕೆ ಕಳಿಸಿದ್ದರು. ಈ ವೇಳೆ ಅವರು ಸಿಮ್ ಕಮಲ್ ನಾಥ್ ಅವರ ಕಳವಳಗಳ ಬಗ್ಗೆ ಮತ್ತು ಅಣೆಕಟ್ಟಿನಲ್ಲಿ ನೀರಿನ ಮಟ್ಟವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವು ಮಾಡಿದ ಪ್ರಯತ್ನಗಳ ಬಗ್ಗೆ ಬೆಹರ್ ಅವರು ಪಾಟ್ಕರ್ ಅವರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.ಈಗ ಅಣೆಕಟ್ಟಿನ ಹಿನ್ನಿರಿನಿಂದಾಗಿ ರಾಜ್ಯದ ವಿವಿಧ ಭಾಗಗಳನ್ನು ಮುಳುಗಿವೆ.