ನನ್ನ ಸ್ನೇಹಿತ ಇಮ್ರಾನ್ ಖಾನ್ ಕರ್ತಾರ್ಪುರ್ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ ಖಂಡಿತ ಹೋಗುತ್ತೇನೆ- ನವಜೋತ್ ಸಿಂಗ್ ಸಿಧು

ಪಂಜಾಬ್ ಸಚಿವ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕರ್ತಾರ್ಪುರ್ ಗಡಿ ಕಾರಿಡಾರ್ ಸಮಾರಂಭದಲ್ಲಿ ಹಾಜರಾಗಲು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್  ಸಿಧು ಅವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.ಇದಕ್ಕೆ ಸಿಧು ಕೂಡ ಒಪ್ಪಿಗೆಕೊಂಡಿದ್ದಾರೆ.

Last Updated : Nov 24, 2018, 01:22 PM IST
ನನ್ನ ಸ್ನೇಹಿತ ಇಮ್ರಾನ್ ಖಾನ್ ಕರ್ತಾರ್ಪುರ್ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ ಖಂಡಿತ ಹೋಗುತ್ತೇನೆ- ನವಜೋತ್ ಸಿಂಗ್ ಸಿಧು title=

ನವದೆಹಲಿ: ಪಂಜಾಬ್ ಸಚಿವ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕರ್ತಾರ್ಪುರ್ ಗಡಿ ಕಾರಿಡಾರ್ ಸಮಾರಂಭದಲ್ಲಿ ಹಾಜರಾಗಲು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್  ಸಿಧು ಅವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.ಇದಕ್ಕೆ ಸಿಧು ಕೂಡ ಒಪ್ಪಿಗೆಕೊಂಡಿದ್ದಾರೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಆಹ್ವಾನಕ್ಕೆ ಪ್ರತಿಕ್ರಿಯಿಸಿರುವ ಸಿಧು "ಬಾಬಾ ನಾನಕ್ ಈ ಎರಡು ದೇಶಗಳೂ ಒಟ್ಟಿಗೆ ಸೇರಲು ಸಹಾಯ ಮಾಡುತ್ತಿದೆ.ಇದಕ್ಕಾಗಿ ಇಂದು ಕೋಟ್ಯಂತರ ಜನರ ಪ್ರಾರ್ಥನೆಗಳು ಸಲ್ಲಿಸಲಾಗಿದೆ.ಈ ಪ್ರಕ್ರಿಯೆಯು ಮೂರು ತಿಂಗಳ ಹಿಂದೆಯೇ ಪ್ರಾರಂಭವಾಯಿತು. ನನ್ನನ್ನು ಸ್ನೇಹಿತ ಇಮ್ರಾನ್ ಖಾನ್ ಆಹ್ವಾನಿಸಿದ್ದಾರೆ ಖಂಡಿತವಾಗಿ ನಾನು ಹೋಗುತ್ತೇನೆ" ಎಂದು ಹೇಳಿದರು. ಈ ಕ್ರಮವು ಎರಡು ದೇಶಗಳ ನಡುವಿನ ಸಂಬಂಧವೃದ್ದಿಗೆ ನೆರವಾಗಲಿದೆ ಎಂದು ಅವರು ತಿಳಿಸಿದರು.

ಪ್ರಧಾನಿ ಇಮ್ರಾನ್ ಖಾನ್ ನವೆಂಬರ್ 28 ರಂದು ಮೂಲ ಸೌಕರ್ಯಗಳ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಇನ್ನು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಅವರು ಸಿಧು ಪಾಕ್ ಗೆ ಭೇಟಿ ನೀಡಲಿರುವ ಕುರಿತು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.ಆ ಮೂಲಕ  ಈ ವರ್ಷ ಪಾಕಿಸ್ತಾನಕ್ಕೆ  ಇದು ಅವರ ಎರಡನೇ ಭೇಟಿಯಾಗಲಿದೆ.

ಆಗಸ್ಟ್ ತಿಂಗಳಲ್ಲಿ ಇಮ್ರಾನ್ ಖಾನ್ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಧು ಪಾಕಿಸ್ತಾನಕ್ಕೆ ಭೇಟಿ ನೀಡಿದ ನಂತರ ಕರ್ತಾರ್ಪುರ್ ಸಾಹಿಬ್ ಸುದ್ದಿ ಮುನ್ನಲೆಗೆ ಬಂದಿತು. ಪಂಜಾಬ್ ನ ಗುರುದಾಸ್ಪುರ್ ಜಿಲ್ಲೆಯಿಂದ ಪಾಕಿಸ್ತಾನದ ಕರ್ತಾರ್ಪುರದ ಗುರುದ್ವಾರ ದರ್ಬಾರ್ ಸಾಹಿಬ್ ಗೆ ಭೇಟಿ ನೀಡಲು ಭಾರತದ ಯಾತ್ರಿಕರಿಗೆ ಅನುಕೂಲವಾಗುವಂತೆ  ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಕಾರಿಡಾರ್ ನಿರ್ಮಿಸಲಾಗುವುದು ಎಂದು ಕೇಂದ್ರ ಸರ್ಕಾರವು ಸಹಿತ ತಿಳಿಸಿದೆ.

Trending News