ಹೈದರಾಬಾದ್: ಭಾರತದಲ್ಲಿ ಜಾತ್ಯಾತೀತತೆಯನ್ನು ಜೀವಂತವಾಗಿರಿಸಲು ಮುಸಲ್ಮಾನರು ತಮ್ಮ ಸಮುದಾಯದ ಅಭ್ಯರ್ಥಿಗಳಿಗೇ ಮತ ಹಾಕಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನೀಡಿದ್ದಾರೆ.
ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು, "ಕಾಸಿಂ ಸಾವು ನಮ್ಮನ್ನು ಆಲೋಚಿಸುವಂತೆ ಮಾಡಿದೆ. ಆದರೆ ಅದಕ್ಕಾಗಿ ನೀವು ಮೊಸಳೆ ಕಣ್ಣೀರು ಸುರಿಸಿ ಎಂದು ನಾನು ಹೇಳುತ್ತಿಲ್ಲ. ಜಾತ್ಯತೀತತೆಯ ಬಗ್ಗೆ ಮಾತನಾಡುವ ಈ ಜನರು ದೊಡ್ಡ ಡಕಾಯಿತರು, ಅವಕಾಶವಾದಿಗಳು. ಅವರು ಮುಸ್ಲಿಮರನ್ನು 70 ವರ್ಷಗಳಿಂದ ಉಪಯೋಗಿಸಿಕೊಂಡು, ಬೆದರಿಸುತ್ತಾ ಬಂದಿದ್ದಾರೆ" ಎಂದು ಓವೈಸಿ ಹೇಳಿದರು.
ಇದೀಗ ನೀವು ನಿಮ್ಮ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಜಾತ್ಯಾತೀತತೆಯನ್ನು ಉಳಿಸಲು ನಿಮಗೋಸ್ಕರ ನೀವು ಹೋರಾಡಿ. ನೀವು ರಾಜಕೀಯ ಶಕ್ತಿಯಾಗಿ, ನಿಮ್ಮ ಸಮುದಾಯದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಓವೈಸಿ ಹೇಳಿದರು.