ರಾಮಮಂದಿರಕ್ಕೆ ಕೊಡುಗೆ ನೀಡಿ 'ನಾನು ಕೂಡ ಹಿಂದೂ' ಎಂದ ಮುಸ್ಲಿಂ ಮುಖಂಡ

ಅಸ್ಸಾಂನ ಜನರು ತಮ್ಮನ್ನು ಅಸ್ಸಾಮೀಸ್ ಎಂದು ಕರೆಯುತ್ತಾರೆ. ಅದೇ ರೀತಿಯಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನು ಹಿಂದೂ ಎಂದು ಅಸ್ಸಾಂ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸೈಯದ್ ಮುಮಿನುಲ್ ಓವಲ್ ಹೇಳಿದ್ದಾರೆ.

Last Updated : Jan 30, 2020, 11:33 AM IST
ರಾಮಮಂದಿರಕ್ಕೆ ಕೊಡುಗೆ ನೀಡಿ 'ನಾನು ಕೂಡ ಹಿಂದೂ' ಎಂದ ಮುಸ್ಲಿಂ ಮುಖಂಡ title=

ಪ್ರಯಾಗರಾಜ್: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಅಸ್ಸಾಂನ ಹಲವಾರು ಮುಸ್ಲಿಂ ಸಂಘಟನೆಗಳ ಪರವಾಗಿ ಅಸ್ಸಾಂ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸೈಯದ್ ಮುಮಿನುಲ್ ಓವಲ್ ಐದು ಲಕ್ಷ ರೂಪಾಯಿಗಳ ಅನುದಾನವನ್ನು ಪ್ರಕಟಿಸಿದ್ದಾರೆ. ಬುಧವಾರ ಮಾಘ ಮೇಳ ಪ್ರದೇಶದ ಸ್ವಾಮಿ ಅಧೋಕ್ಷಜಾನಂದ್ ಅವರ ಶಿಬಿರವನ್ನು ತಲುಪಿದ ನಂತರ ಅವರು ಸಂಗಮದಲ್ಲಿ ಮುಳುಗಿ ಮಾಘ ಸ್ನಾನ ಮಾಡಿದರು. ನಂತರ, ಸ್ವಾಮಿ ಅಧೋಕ್ಷಜಾನಂದರ ಶಿಬಿರದಲ್ಲಿರುವ ಸಾಧು ಸಂತರೊಂದಿಗೆ ಆಹಾರ ಸೇವಿಸಿದ ಅವರು ಸ್ವಾಮಿ ಮತ್ತು ದಂಡಿ ತಪಸ್ವಿಗಳ ಆಶೀರ್ವಾದವನ್ನೂ ಪಡೆದರು.

ಅಸ್ಸಾಂನ ಜನರು ತಮ್ಮನ್ನು ಅಸ್ಸಾಮೀಸ್ ಎಂದು ಕರೆಯುತ್ತಾರೆ. ಅದೇ ರೀತಿಯಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನು ಹಿಂದೂ ಎಂದು ಅಸ್ಸಾಂ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸೈಯದ್ ಮುಮಿನುಲ್ ಓವಲ್ ಹೇಳಿದ್ದಾರೆ. ನಮ್ಮ ಧರ್ಮ ಇಸ್ಲಾಂ ಧರ್ಮ, ಆದರೆ ಭಾರತದ ಪ್ರಜೆಗಳಾಗಿ ನಾವು ಹೆಮ್ಮೆಯಿಂದ ನಮ್ಮನ್ನು ಹಿಂದೂಗಳು ಎಂದು ಕರೆಯುತ್ತೇವೆ ಎಂದು ಅವರು ತಿಳಿಸಿದರು.

ಇದೇ ವೇಳೆ ನಾಗರಿಕ ತಿದ್ದುಪಡಿ ಕಾಯ್ದೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಓವಲ್, 'ಈ ಕಾನೂನು ಪೌರತ್ವವನ್ನು ಕಸಿದು ಕೊಳ್ಳುವುದಿಲ್ಲ, ಬದಲಿಗೆ ಪೌರತ್ವವನ್ನು ನೀಡುವುದು. ಅನೇಕ ಬಾಹ್ಯ ಶಕ್ತಿಗಳು ಮುಸ್ಲಿಮರನ್ನು ದಾರಿ ತಪ್ಪಿಸುತ್ತಿವೆ. ಹಿಂದೂಸ್ತಾನ್ ನಮ್ಮ ದೇಶ, ನಾವು ಇಲ್ಲಿ ಹುಟ್ಟಿ ಇಲ್ಲಿ ವಾಸಿಸುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ನಾವು ನಮ್ಮ ದೇಶದ ಹಿತದೃಷ್ಟಿಯಿಂದ ಯೋಚಿಸಬೇಕು ಮತ್ತು ಇತರರಿಂದ ಮೋಹಗೊಳ್ಳಬಾರದು ಎಂದವರು ಕರೆ ನೀಡಿದರು.

ಅಯೋಧ್ಯೆ(Ayodhya) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಐತಿಹಾಸಿಕವೆಂದು ಘೋಷಿಸಿದ ಓವಲ್, ಅಸ್ಸಾಂನ 21 ಮುಸ್ಲಿಂ ಸಂಘಟನೆಗಳ ಪರಿಷತ್ ಅಧ್ಯಕ್ಷರಾಗಿ ದೇಶದ ಐಕ್ಯತೆಯ ಬಗ್ಗೆ ಮುಸ್ಲಿಮರ ಒಗ್ಗಟ್ಟು ಮತ್ತು ರಾಮ್ ದೇವಾಲಯ(Ram Mandir) ನಿರ್ಮಾಣದ ಬಗ್ಗೆ ಹಿಂದೂಗಳ ಅಪಾರ ನಂಬಿಕೆಯನ್ನು ಗಮನದಲ್ಲಿಟ್ಟುಕೊಂಡು ಪರಿಷತ್ತು ರಾಮ ಮಂದಿರ ನಿರ್ಮಾಣಕ್ಕೆ ಐದು ಲಕ್ಷ ರೂ. ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ(CAA) ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವ ಹಿಂದೆ ಬಾಹ್ಯ ಶಕ್ತಿಗಳ ಕೈವಾಡ ವಿದೆ ಎಂದ ಅವರು, ಇತರ ದೇಶಗಳು ಪಿಎಫ್‌ಐ ಮೂಲಕ ದೇಶದ ಸಂತೋಷವನ್ನು ಕಸಿದುಕೊಳ್ಳಲು ಬಯಸುತ್ತವೆ ಎಂದು ಹೇಳಿದರು. ಭಾರತದ ಸಮೃದ್ಧಿಯನ್ನು ಅವರಿಂದ ಕಾಣುತ್ತಿಲ್ಲ, ಆದ್ದರಿಂದ ಜನರನ್ನು ಮೋಸಗೊಳಿಸುವ ಮೂಲಕ ದೇಶಾದ್ಯಂತ ಈ ರೀತಿಯ ಗೊಂದಲವನ್ನು ಸೃಷ್ಟಿಸಲಾಗುತ್ತಿದೆ ಎಂದವರು ಕಿಡಿಕಾರಿದರು.

Trending News