ಮುಂಬೈ ಕಟ್ಟಡ ಕುಸಿತ ತಂದ ದುರಂತ

ಮುಂಬೈನ ಬೆಂಡಿ ಬಜಾರ್ನಲ್ಲಿ  ಶಿಥಿಲ ಸ್ಥಿತಿಯಲ್ಲಿದ್ದ ಐದು ಅಂತಸ್ತಿನ ಕಟ್ಟಡ ಇಂದು ಮುಂಜಾನೆ ಕುಸಿದಿದೆ.  ಕನಿಷ್ಠ 10 ಕುಟುಂಬಗಳು ಈ ಕಟ್ಟಡದಲ್ಲಿ ವಾಸವಾಗಿದ್ದವು ಎಂಬ ಮಾಹಿತಿ ತಿಳಿದುಬಂದಿದೆ. 

Last Updated : Aug 31, 2017, 11:24 AM IST
ಮುಂಬೈ ಕಟ್ಟಡ ಕುಸಿತ ತಂದ ದುರಂತ  title=
Pic Courtesy: ANI

ನವದೆಹಲಿ : ಮುಂಬೈನ ಬೆಂಡಿ ಬಜಾರ್ನಲ್ಲಿ  ಶಿಥಿಲ ಸ್ಥಿತಿಯಲ್ಲಿದ್ದ ಐದು ಅಂತಸ್ತಿನ ಕಟ್ಟಡ ಇಂದು ಮುಂಜಾನೆ ಕುಸಿದಿದೆ.  ಕನಿಷ್ಠ 10 ಕುಟುಂಬಗಳು ಈ ಕಟ್ಟಡದಲ್ಲಿ ವಾಸವಾಗಿದ್ದವು ಎಂಬ ಮಾಹಿತಿ ತಿಳಿದುಬಂದಿದೆ. 

ಮುಂಬೈನ, ಬೆಂಡಿ ಬಜಾರ್ನ ಮೌಲಾನಿ ಶೌಕತ್ ಅಲಿ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಕಟ್ಟಡ ಕುಸಿದಿದ್ದು ಮೂವರು ಮೃತಪಟ್ಟಿದ್ದಾರೆ. ಸುಮಾರು  30 ರಿಂದ 35 ಜನ ಕಟ್ಟಡದ ಒಳಗೆ ಸಿಲುಕಿದ್ದಾರೆ. ಎನ್ ಡಿ ಆರ್ ಎಫ್ ತಂಡ, 10 ಅಗ್ನಿಶಾಮಕ ದಳಗಳು ಮತ್ತು ಅಂಬ್ಯುಲೆನ್ಸ್ಗಳು ಈ ಸ್ಥಳಕ್ಕೆ ತಲುಪಿದ್ದು ರಕ್ಷಣೆ ಕಾರ್ಯ ಸಾಗಿದೆ.

ಈ ಘಟನೆಯು ಪಾಕ್ಮೋಡಿಯಾ ಬೀದಿಯ ಜೆಜೆ ಜಂಕ್ಷನ್ ಬಳಿ ಬೆಳಿಗ್ಗೆ ಸುಮಾರು 8:30ರಲ್ಲಿ ನಡೆದಿದ್ದು, ಇಲ್ಲಿಯವರೆಗೆ ಮೂರು ಜನರನ್ನು ರಕ್ಷಿಸಲಾಗಿದೆ.

ವರದಿಗಳ ಪ್ರಕಾರ, ಸುಮಾರು 70 ವರ್ಷದ ಹಿಂದೆ ಕಟ್ಟಡವನ್ನು ನಿರ್ಮಿಸಲಾಗಿತ್ತು. ಇದೊಂದು ಶಿಥಿಲ ಮತ್ತು ಕಟ್ಟಡದ ಮೇಲ್ಭಾಗದ ಎರಡು ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ,  "ಸಿಕ್ಕಿಬಿದ್ದ ಜನರ ಸಂಖ್ಯೆ ದೃಢಪಡಿಸಲಿಲ್ಲ" ಎಂದು ಡಿಸಿಪಿ ವಲಯ ಒಂದರ ಡಾ. ಮನೋಜ್ ಶರ್ಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆಗಸ್ಟ್ 26 ರಂದು, ಮುಂಬೈಯ ಸಕಿನಕ ಉಪನಗರದಲ್ಲಿನ ಆರು ಅಂತಸ್ತಿನ ಕಟ್ಟಡವು ಧ್ವಂಸದ ಸಮಯದಲ್ಲಿ ಕುಸಿದುಬಿದ್ದು, ಒಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು.

Trending News