ಎಐಸಿಸಿ ಅಧ್ಯಕ್ಷ ಚುನಾವಣೆಗೆ ಮುಹೂರ್ತ ಫಿಕ್ಸ್

                             

Last Updated : Nov 20, 2017, 12:57 PM IST
ಎಐಸಿಸಿ ಅಧ್ಯಕ್ಷ ಚುನಾವಣೆಗೆ ಮುಹೂರ್ತ ಫಿಕ್ಸ್ title=
Pic: PTI

ನವದೆಹಲಿ: ಬಹು ನಿರೀಕ್ಷಿತ ಎಐಸಿಸಿ ಅಧ್ಯಕ್ಷ ಚುನಾವಣೆಗೆ ಇಂದಿನ ಕಾರ್ಯಕಾರಿಣಿ ಸಮಿತಿಯಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಈ ಮೂಲಕ ಅಧ್ಯಕ್ಷ ಪಟ್ಟ ಗುಜರಾತ್ ಚುನಾವಣೆಗೂ ಮುನ್ನ ನಡೆಯುವುದಾ ಅಥವಾ ಚುನಾವಣೆ ನಂತರ ನಡೆಯುವುದಾ ಎಂಬ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ. ಚುನಾವಣೆ ಕುರಿತಂತೆ ಎಐಸಿಸಿ ಯ ಅಧಿಕೃತ ಜಾಲತಾಣವು ಪ್ರಕಟಣೆಯನ್ನು ಘೋಷಿಸಿದೆ.

ಅಧ್ಯಕ್ಷ ಚುನಾವಣೆಯ ವಿವರ ಈ ಕೆಳಗಿನಂತಿದೆ-

 

* ನಾಮಪತ್ರ ಸಲ್ಲಿಕೆ ಆರಂಭ : ಡಿಸೆಂಬರ್ 1, 2017
* ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 4, 2017 (3:00 p.m)
* ನಾಮನಿರ್ದೇಶನದ ಪರಿಶೀಲನೆ : ಡಿಸೆಂಬರ್ 5, 2017
* ಮಾನ್ಯವಾದ ನಾಮನಿರ್ದೇಶನಗಳ ಪಟ್ಟಿಯನ್ನು ಪ್ರಕಟಿಸುವುದು : ಡಿಸೆಂಬರ್ 5, 2017 (3:30 p.m)
* ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ : ಡಿಸೆಂಬರ್ 11, 2017 (3:00 p.m)
* ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ : ಡಿಸೆಂಬರ್ 11, 2017 (4:00 p.m)
* ಚುನಾವಣಾ ದಿನಾಂಕ (ಅಗತ್ಯವಿದ್ದರೆ)  : ಡಿಸೆಂಬರ್ 16, 2017 
* ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ : ಡಿಸೆಂಬರ್ 19, 2017 

ಪ್ರಸ್ತುತ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದು, ಬೇರೆ ಅಭ್ಯರ್ಥಿಗಳು ಕಣಕ್ಕಿಳಿಯುವ ಸಂಭವ ಅತೀ ವಿರಳವಾಗಿದ್ದು ಇದೊಂದು ಔಪಚಾರಿಕ ಚುನಾವಣೆಯಾಗಿದೆ.

Trending News