ಇಂದಿನಿಂದ ದುಬಾರಿಯಾಗಲಿದೆ ಮದರ್ ಡೈರಿ ಹಾಲು!

ಪ್ರಮುಖ ಹಾಲು ಸರಬರಾಜುದಾರರಾದ ಮದರ್ ಡೈರಿ(Mother Dairy) ಹಾಲಿನ ಬೆಲೆಯನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಿಸಿದೆ. ಈ ಬಾರಿ ಕಂಪನಿಯು ಹಸುವಿನ ಹಾಲಿನ ಬೆಲೆಯನ್ನು ಹೆಚ್ಚಿಸಿದೆ.

Last Updated : Sep 6, 2019, 10:44 AM IST
ಇಂದಿನಿಂದ ದುಬಾರಿಯಾಗಲಿದೆ ಮದರ್ ಡೈರಿ ಹಾಲು!  title=

ನವದೆಹಲಿ: ಪ್ರಮುಖ ಹಾಲು ಸರಬರಾಜುದಾರರಾದ ಮದರ್ ಡೈರಿ(Mother Dairy) ಹಾಲಿನ ಬೆಲೆಯನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಿಸಿದೆ. ಈ ಬಾರಿ ಕಂಪನಿಯು ಹಸುವಿನ ಹಾಲಿನ ಬೆಲೆಯನ್ನು ಹೆಚ್ಚಿಸಿದೆ. ಹಸುವಿನ ಹಾಲಿನ ದರವನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಿಸಿದ ಬಳಿಕ 1 ಲೀಟರ್ ಹಸುವಿನ ಹಾಲಿನ ಬೆಲೆ 44 ರೂಪಾಯಿಗೆ ಏರಿದೆ. ಈ ದರ ದೆಹಲಿ-ಎನ್‌ಸಿಆರ್‌ನಲ್ಲಿ ಮಾತ್ರ ಅನ್ವಯಿಸುತ್ತದೆ. ಗ್ರಾಹಕರು ಅರ್ಧ ಲೀಟರ್ ಹಾಲಿಗೆ 23 ರೂ. ಪಾವತಿಸಬೇಕಾಗುತ್ತದೆ. ಈ ದರಗಳು ಶುಕ್ರವಾರದಿಂದ ಜಾರಿಗೆ ಬಂದಿದೆ.

ಮೇ ತಿಂಗಳಲ್ಲಿ ಕೂಡ ಹೆಚ್ಚಳಗೊಂಡಿದ್ದ ಬೆಲೆ:
ರೈತರಿಂದ ಕಚ್ಚಾ ಹಾಲನ್ನು ಖರೀದಿಸಲು ಹೆಚ್ಚಿನ ಹಣವನ್ನು ನೀಡುತ್ತಿರುವುದರಿಂದ ಹಾಲಿನ ದರ ಏರಿಕೆ ಅನಿವಾರ್ಯ ಎಂದು ಕಂಪನಿ ತಿಳಿಸಿದೆ. ಇದರಿಂದಾಗಿಯೇ ಹಸುವಿನ ಹಾಲಿನ ಬೆಲೆ ಹೆಚ್ಚುತ್ತಿದೆ. ಪ್ರಸ್ತುತ, ಕಂಪನಿಯು ಬೇರೆ ಯಾವುದೇ ಹಾಲಿನ ಬೆಲೆಯನ್ನು ಹೆಚ್ಚಿಸಿಲ್ಲ. ಇದಕ್ಕೂ ಮೊದಲು ಮದರ್ ಡೈರಿ 2019 ರ ಮೇ ತಿಂಗಳಲ್ಲಿ ಪೂರ್ಣ ಕೆನೆ ಹಾಲಿನ(Full Cream Milk) ಬೆಲೆಯನ್ನು ಹೆಚ್ಚಿಸಿತ್ತು.

ಹಸುವಿನ ಹಾಲು ಒಂದು ಲೀಟರ್‌ಗೆ 44 ರೂಪಾಯಿ:
ಮದರ್ ಡೈರಿ ಪರವಾಗಿ, ಕಳೆದ ಎರಡು ಮೂರು ತಿಂಗಳಲ್ಲಿ, ಹಸುವಿನ ಹಾಲಿನ ದರ ಪ್ರತಿ ಲೀಟರ್‌ಗೆ 2.50 ರಿಂದ 3 ರೂ.ಗಿಂತ ಹೆಚ್ಚಾಗಿದೆ. ಇದೀಗ ಇಂದಿನಿಂದ(ಸೆಪ್ಟೆಂಬರ್ 6) ಜಾರಿಗೆ ಬರಲಿರುವ ಹೊಸ ದರದನ್ವಯ, ಗ್ರಾಹಕರು ಅರ್ಧ ಲೀಟರ್ ಹಸುವಿನ ಹಾಲಿಗೆ 23 ರೂ., ಒಂದು ಲೀಟರ್‌ಗೆ 44 ರೂ. ಪಾವತಿಸಬೇಕಿದೆ. ಮದರ್ ಡೈರಿಯಿಂದ ಬೆಲೆಯನ್ನು ಹೆಚ್ಚಿಸಿದ ನಂತರ, ಮುಂಬರುವ ದಿನಗಳಲ್ಲಿ ಅಮುಲ್ ಮತ್ತು ಇತರ ಕಂಪನಿಗಳು ಸಹ ಬೆಲೆಯನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.

Trending News