ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌; ಹೊಸ ಸಚಿವ ಸಂಪುಟದಲ್ಲಿ ಉತ್ತರಪ್ರದೇಶಕ್ಕೆ 'ಸಿಂಹ ಪಾಲು'

ಮೋದಿ ಅವರ ಕ್ಯಾಬಿನೆಟ್ನಲ್ಲಿ, ಉತ್ತರಪ್ರದೇಶದ 10 ಸಂಸದರು ಸೇರ್ಪಡೆಗೊಂಡಿದ್ದಾರೆ. ಇದರ ನಂತರ ಮಹಾರಾಷ್ಟ್ರದ  ಏಳು ಮತ್ತು ಬಿಹಾರದ ಆರು ಪ್ರತಿನಿಧಿಗಳು ಹೊಸ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದಿದ್ದಾರೆ.  

Last Updated : May 31, 2019, 10:46 AM IST
ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌; ಹೊಸ ಸಚಿವ ಸಂಪುಟದಲ್ಲಿ ಉತ್ತರಪ್ರದೇಶಕ್ಕೆ 'ಸಿಂಹ ಪಾಲು' title=
Pic Courtesy: ANI

ನವದೆಹಲಿ: 'ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌' ಅಧಿಕಾರಕ್ಕೆ ಬಂದಿದೆ. ಸತತ ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಅಧಿಕೃತವಾಗಿ 'ಮೋದಿ ಸರ್ಕಾರ್‌' ಆಡಳಿತಕ್ಕೆ ಚಾಲನೆ ದೊರೆತಿದೆ. 

ಗುರುವಾರ ಸಂಜೆ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ 24 ಮಂದಿ ಸಂಪುಟ ದರ್ಜೆ ಸಚಿವರು, 9 ಜನ ರಾಜ್ಯ ಸಚಿವರು( ಸ್ವತಂತ್ರ ನಿರ್ವಹಣೆ) ಹಾಗೂ 24 ಮಂದಿ ರಾಜ್ಯ ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಗುರುವಾರ, 36 ನಾಯಕರು ಮತ್ತೊಂದು ಅವಧಿಗೆ ಪ್ರಮಾಣವಚನ ಸ್ವೀಕರಿಸಿದರು. ರಾಜ್ನಾಥ್ ಸಿಂಗ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ನಿರ್ಮಲ ಸೀತಾರಾಮನ್, ಪ್ರಕಾಶ್ ಜಾವಡೇಕರ್, ರಾಮ್ ವಿಲಾಸ್ ಪಾಸ್ವಾನ್, ಡಿ.ವಿ. ಸದಾನಂದ ಗೌಡ, ನರೇಂದ್ರ ಸಿಂಗ್ ತೋಮರ್, ರವಿ ಶಂಕರ್ ಪ್ರಸಾದ್, ಹರ್ಸಿಮ್ರತ್ ಕೌರ್ ಬಾದಲ್, ತವಾರ್ ಚಂದ್ ಗೆಹ್ಲೋಟ್, ಹರ್ಷವರ್ಧನ್, ಪಿಯುಶ್ ಗೋಯಲ್, ಧರ್ಮೇಂದ್ರ ಪ್ರಧಾನ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ಹಲವು ಇತರ ಮುಖಂಡರನ್ನು ಕೂಡ ಒಳಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ನೂತನ ಸಂಪುಟದಲ್ಲಿ ಗರಿಷ್ಠ ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶಕ್ಕೆ 'ಸಿಂಹ ಪಾಲು' ದೊರೆತಿದೆ. ಉತ್ತರಪ್ರದೇಶದ 10 ಸಂಸದರು ಸೇರ್ಪಡೆಗೊಂಡಿದ್ದಾರೆ. 10 ನಾಯಕರಲ್ಲಿ, ವಾರಣಾಸಿ ಸಂಸದರು ಸಹ ಸೇರಿದ್ದಾರೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರದ  ಏಳು ಮತ್ತು ಬಿಹಾರದ ಆರು ಪ್ರತಿನಿಧಿಗಳು ಹೊಸ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದಿದ್ದಾರೆ.

ಹೊಸ ಸರಕಾರದಲ್ಲಿ ಕರ್ನಾಟಕದಿಂದ ನಾಲ್ವರು ಸಚಿವ ಸ್ಥಾನ ಗಿಟ್ಟಿಸಿದ್ದಾರೆ. ಗುಜರಾತ್, ರಾಜಸ್ಥಾನ, ಹರಿಯಾಣಾ ಮೂರು ಪ್ರತಿನಿಧಿಗಳು ಸಚಿವರಾಗಿ ಮಾಡಿದ್ದಾರೆ. ಪಶ್ಚಿಮ ಬಂಗಾಳ, ಒರಿಸ್ಸಾ ಹಾಗೂ ಮಧ್ಯಪ್ರದೇಶದ ಎರಡು ಪ್ರತಿನಿಧಿಗಳು ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 

ಹೊಸ ಕ್ಯಾಬಿನೆಟ್ ಬಹುತೇಕ ಎಲ್ಲಾ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಆದಾಗ್ಯೂ, ಆಂಧ್ರ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾದ ಪ್ರತಿನಿಧಿಗಳಿಗೆ  ಕ್ಯಾಬಿನೆಟ್ನಲ್ಲಿ ಸ್ಥಾನ ಲಭಿಸಿಲ್ಲ. 

Trending News