Video: ಪಟ ಪಟ ಗಾಳಿಪಟ ಎನ್ನುತ್ತಾ ಮನೆಯ ಛಾವಣಿಯಲ್ಲಿ ಕುಳಿತು ಜಾಲಿಯಾಗಿ ಗಾಳಿಪಟ ಹಾರಿಸುತ್ತಿರೋ ಕೋತಿ: ವಿಡಿಯೋ ನೋಡಿ

Monkey flying a kite Video: ಈ ವಿಡಿಯೋ ಸುಮಾರು ದೂರದಿಂದ ಸೆರೆಹಿಡಿಯಲಾಗಿದ್ದು, ಖಚಿತವಾಗಿ ಕೋತಿಯೇ ಎಂದು ದೃಢಪಡಿಸಲಾಗಿಲ್ಲ. ಕೆಲವರು ಇದು ಕೋತಿ ಅಲ್ಲ ಎಂದರೆ, ಇನ್ನೂ ಕೆಲವರು ಕೋತಿಯ ರಚನೆಯಲ್ಲಿರುವ ಜೀವಿಯು ಗಾಳಿಪಟವನ್ನು ಹಾರಿಸುತ್ತಿದೆ ಎನ್ನುತ್ತಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.

Written by - Bhavishya Shetty | Last Updated : Feb 3, 2023, 10:09 PM IST
    • ವಿಡಿಯೋದಲ್ಲಿ ಮಂಗವೊಂದು ಗಾಳಿಪಟ ಹಾರಿಸುತ್ತಿರುವುದನ್ನು ನಾವು ನೋಡಬಹುದು
    • ಕೆಲವರು ಕೋತಿಯ ರಚನೆಯಲ್ಲಿರುವ ಜೀವಿಯು ಗಾಳಿಪಟವನ್ನು ಹಾರಿಸುತ್ತಿದೆ ಎನ್ನುತ್ತಿದ್ದಾರೆ
    • ಅಪ್‌ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.
Video: ಪಟ ಪಟ ಗಾಳಿಪಟ ಎನ್ನುತ್ತಾ ಮನೆಯ ಛಾವಣಿಯಲ್ಲಿ ಕುಳಿತು ಜಾಲಿಯಾಗಿ ಗಾಳಿಪಟ ಹಾರಿಸುತ್ತಿರೋ ಕೋತಿ: ವಿಡಿಯೋ ನೋಡಿ title=
Kite Flying Monkey

Monkey flying a kite Video: ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದ್ದು, ಜನರು ಸಹ ಭಾರೀ ಸಂಖ್ಯೆಯಲ್ಲಿ ಲೈಕ್ ಮತ್ತು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಮಂಗವೊಂದು ಗಾಳಿಪಟ ಹಾರಿಸುತ್ತಿರುವುದನ್ನು ನಾವು ನೋಡಬಹುದು.

ಇದನ್ನೂ ಓದಿ: Lucky Plants : ಮನೆಯಲ್ಲಿ ಈ ಸಸ್ಯವನ್ನು ನೆಟ್ಟರೆ, ಹಣವನ್ನು ಅಯಸ್ಕಾಂತದಂತೆ ಆಕರ್ಷಿಸುತ್ತದೆ!

ವಿಡಿಯೋ ಸುಮಾರು ದೂರದಿಂದ ಸೆರೆಹಿಡಿಯಲಾಗಿದ್ದು, ಖಚಿತವಾಗಿ ಕೋತಿಯೇ ಎಂದು ದೃಢಪಡಿಸಲಾಗಿಲ್ಲ. ಕೆಲವರು ಇದು ಕೋತಿ ಅಲ್ಲ ಎಂದರೆ, ಇನ್ನೂ ಕೆಲವರು ಕೋತಿಯ ರಚನೆಯಲ್ಲಿರುವ ಜೀವಿಯು ಗಾಳಿಪಟವನ್ನು ಹಾರಿಸುತ್ತಿದೆ ಎನ್ನುತ್ತಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.

ಮಕರ ಸಂಕ್ರಾಂತಿ ದಿನವಾದ ಜನವರಿ 14 ರಂದು Instagram ಬಳಕೆದಾರರ sad_status_songs_ ಖಾತೆಯಲ್ಲಿ ಈ ಪೋಸ್ಟ್ ಹಾಕಲಾಗಿದೆ. ಈ ಪೋಸ್ಟ್ ಮಾಡಿದ ದಿನದಿಂದ ಇದುವರೆಗೆ ಸುಮಾರು 444,328 ಲೈಕ್‌ಗಳು ಗಳಿಸಿವೆ. ಈ ದೃಶ್ಯ ಜೈಪುರದ್ದು ಎಂದು ಹೇಳಲಾಗುತ್ತಿದೆ.

ಕೋತಿ ಗಾಳಿಪಟ ಹಾರಿಸಲು ಪ್ರಯತ್ನಿಸುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಗಾಳಿಪಟ ಹಾರಿಸುವಾಗ ಮನುಷ್ಯರು ಮಾಡುವಂತೆ ಇದು ದಾರವನ್ನು ಎಳೆಯುತ್ತಿದೆ. ಸಾಕಷ್ಟು ಪ್ರಯತ್ನದ ನಂತರವೂ ಗಾಳಿಪಟ ಸರಿಯಾಗಿ ಹಾರುವುದಿಲ್ಲ. ಆಗ ಕೋತಿ ಅದನ್ನು ಹತ್ತಿರಕ್ಕೆ ಎಳೆದುಕೊಂಡು ಮತ್ತೆ ಎಸೆಯುತ್ತದೆ.

ಇದೀಗ ವೈರಲ್ ಆಗಿರುವ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಒಬ್ಬ ಬಳಕೆದಾರನು "ಯೇ ಸಹಿ ಸೆ ಉಡ್ ನೇಹಿ ರಹಾ" (ಇದು ಸರಿಯಾಗಿ ಹಾರುತ್ತಿಲ್ಲ) ಎಂದು ಬರೆದರೆ, ಮತ್ತೊಬ್ಬ ಬಳಕೆದಾರರು "ಯೇ ಇಂಡಿಯಾ ಹೈ ಕುಚ್ ಹೋ ಸಕ್ತಾ ಹೈ ಯಹಾ" (ಇದು ಭಾರತ, ಇಲ್ಲಿ ಎಲ್ಲವೂ ಸಾಧ್ಯ) ಎಂದು ಬರೆದಿದ್ದಾರೆ.

ಮತ್ತೊಬ್ಬ ಬಳಕೆದಾರರು "ಅಬೆ ಉಸ್ಕೆ ಕನ್ನೆ ಖರಾಬ್ ದಿ, ವೋ ಕನ್ನೆ ಸಹಿಕರ್ ರಹಾ ಥಾ" (ಗಾಳಿಪಟದ ಅಳತೆ ತಪ್ಪಾಗಿತ್ತು; ಅದು (ಕೋತಿ) ಅಳತೆಯನ್ನು ಸರಿ ಮಾಡುತ್ತಿತ್ತು” ಎಂದು ಬರೆದಿದ್ದಾರೆ.

ಇನ್ನೊಬ್ಬ, “ಈ ವಿಡಿಯೋ ನೋಡಿ ಹೊಟ್ಟೆ ಹುಟ್ಟಾಗುವಂತೆ ನಕ್ಕು ನಕ್ಕು ಸುಸ್ತಾಗಿದ್ದೇನೆ” ಎಂದು ಹೇಳಿದ್ದಾರೆ

ಇದನ್ನೂ ಓದಿ: Chanakya Niti: ಜೀವನದ ಯಶಸ್ಸಿನ ಹಾದಿಗೆ ಮುಳ್ಳಾಗಲಿವೆ ನಿಮ್ಮ ಈ ಗುಣಗಳು

ವೀಡಿಯೊವನ್ನು ಇಲ್ಲಿ ನೋಡಿ:

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News