ಪ್ರಧಾನಿ ಮೋದಿ ಜನಪ್ರಿಯತೆಯಲ್ಲಿ ಕುಸಿತ, ರಾಹುಲ್ ಗಾಂಧಿಯಲ್ಲಿ ಹೆಚ್ಚಳ-ಸಿಎಸ್ಡಿಎಸ್- ಲೋಕನೀತಿ-ಎಬಿಪಿ ನ್ಯೂಸ್ ಸಮೀಕ್ಷೆ

    

Last Updated : May 25, 2018, 08:17 PM IST
ಪ್ರಧಾನಿ ಮೋದಿ ಜನಪ್ರಿಯತೆಯಲ್ಲಿ ಕುಸಿತ, ರಾಹುಲ್ ಗಾಂಧಿಯಲ್ಲಿ ಹೆಚ್ಚಳ-ಸಿಎಸ್ಡಿಎಸ್- ಲೋಕನೀತಿ-ಎಬಿಪಿ ನ್ಯೂಸ್ ಸಮೀಕ್ಷೆ   title=

ನವದೆಹಲಿ: ಇನ್ನೇನು  ಲೋಕಸಭಾ ಚುನಾವಣೆಗೆ  ಕೇವಲ ಒಂದು ವರ್ಷವಷ್ಟೇ ಬಾಕಿ ಆದರೆ ಈಗಲೇ ಹಲವು ಸಮೀಕ್ಷೆಗಳು ದೇಶದ ಜನಾಭಿಪ್ರಾಯವನ್ನು ಸಂಗ್ರಹಿಸುತ್ತಿವೆ. 

ಅದರಲ್ಲೂ  ಪ್ರಮುಖವಾಗಿ ಚುನಾವಣೆಯನ್ನು ಸುಮಾರು ದಶಕಗಳಿಂದ ಅಧ್ಯಯನ ಮಾಡುತ್ತಾ ಬಂದಿರುವ ಸಿಎಸ್ಡಿಎಸ್- ಲೋಕನೀತಿ ಈಗ ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜನಾಭಿಪ್ರಾಯವನ್ನು ಕಲೆ ಹಾಕಿದೆ. ಈ ಸಮೀಕ್ಷೆಯಲ್ಲಿ ವ್ಯಕ್ತವಾದ ಕೆಲವು ಸಂಗತಿಗಳು ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿವೆ. 

ಹೌದು, ಈ ಸಮೀಕ್ಷೆಯಲ್ಲಿ ಮತದಾರರಿಗೆ ಪ್ರಧಾನ ಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಯಾರೆಂದು ಕೇಳಿದಾಗ ಶೇ 34 ರಷ್ಟು ಜನರು ಮೋದಿಗೆ ಆದ್ಯತೆ ನೀಡಿದರೆ, ರಾಹುಲ್ ಗಾಂಧಿಗೆ ಶೇ 24 ರಷ್ಟು ಜನರು ಪ್ರಾಶಸ್ತ್ಯ ನೀಡಿದ್ದಾರೆ. ಆದರೆ ಕೂತುಹಲದ ಸಂಗತಿ ಏನೆಂದರೆ ನರೇಂದ್ರ ಮೋದಿಯವರ ಜನಪ್ರಿಯತೆಯು 2014 ರಲ್ಲಿ ಶೇಕಡಾ 36 ರಷ್ಟು ಇದದ್ದು ಈಗ 34ಕ್ಕೆ ಇಳಿದಿದೆ. ಆದರೆ 2014 ರಲ್ಲಿ ಕೇವಲ ಶೇಕಡಾ 16ರಷ್ಟು ಇದ್ದ  ರಾಹುಲ್ ಗಾಂಧಿಯವರ ಜನಪ್ರಿಯತೆ ಈಗ ಶೇ 24 ಕ್ಕೆ ಏರಿದೆ. ಅಂದರೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ  ಮೋದಿಯವರದ್ದು ಶೇ 2 ರಷ್ಟು ಕುಸಿದಿದ್ದರೆ, ರಾಹುಲ್ ಗಾಂಧಿಯವರದ್ದು ಶೇ 8 ರಷ್ಟು ಹೆಚ್ಚಳವಾಗಿದೆ. 

Trending News