ಮೋದಿ ಮೀಟ್ಸ್ ಕರುಣಾನಿಧಿ..!

                    

Last Updated : Nov 6, 2017, 01:25 PM IST
ಮೋದಿ ಮೀಟ್ಸ್ ಕರುಣಾನಿಧಿ..! title=
Pic: ANI

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಇಂದು ಚೆನ್ನೈನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರನ್ನು ಭೇಟಿ ಮಾಡಿದ್ದಾರೆ.

 

ಡಿಎಂಕೆ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರು ಕೆಲ ದಿನಗಳಿಂದ ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಆರೋಗ್ಯ ವಿಚಾರಿಸಲು ಮೋದಿಯವರು ಈ ಚೆನ್ನೈನಲ್ಲಿರುವ  ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದಾರೆ.

 

ಪ್ರಧಾನಿ ಮೋದಿಯವರ ಈ ಭೇಟಿಯನ್ನು ರಾಜಕೀಯವಾಗಿಯೂ ವಿಶ್ಲೇಷಿಸಲಾಗುತ್ತಿದ್ದು ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುತ್ತಿರುವ ಅಣ್ಣಾಡಿಎಂಕೆ ವಿರುದ್ಧ ಬಿಜೆಪಿ-ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳುವುದೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕರುಣಾನಿಧಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಮಯದಲ್ಲಿ, ಅವರನ್ನು ಕರುಣಾನಿಧಿ ಅವರ ಪುತ್ರ ಸ್ಟಾಲಿನ್ ಹಾಗೂ ಪುತ್ರಿ ಕನ್ನಿಮೋಳಿ ಸ್ವಾಗತಿಸಿದರು. 

Trending News