Modi Government ಮಹತ್ವದ ನಿರ್ಧಾರ: ಇನ್ಮುಂದೆ ಸರ್ಕಾರಿ ಖರೀದಿ ಪ್ರಕ್ರಿಯೆಯಲ್ಲಿ ಚೀನಾ ಕಂಪನಿಗಳು ಭಾಗವಹಿಸುವಂತಿಲ್ಲ

ಭಾರತದ ರಕ್ಷಣಾ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ಸರ್ಕಾರದ ಖರೀದಿ ಕುರಿತು ಹಣಕಾಸು ಸಚಿವಾಲಯ ವಿಸ್ತೃತ ಆದೇಶ ಹೊರಡಿಸಿದೆ.

Last Updated : Jul 24, 2020, 03:01 PM IST
Modi Government ಮಹತ್ವದ ನಿರ್ಧಾರ: ಇನ್ಮುಂದೆ ಸರ್ಕಾರಿ ಖರೀದಿ ಪ್ರಕ್ರಿಯೆಯಲ್ಲಿ ಚೀನಾ ಕಂಪನಿಗಳು ಭಾಗವಹಿಸುವಂತಿಲ್ಲ title=

ನವದೆಹಲಿ: ಚೀನಾದೊಂದಿಗೆ ಏರ್ಪಟ್ಟಿರುವ ಬಿಕ್ಕಟ್ಟಿನ ನಡುವೆ ಮೋದಿ ಸರ್ಕಾರ ಮಹತ್ವದ ನಿರ್ಧಾರವೊಂದನ್ನು  ತೆಗೆದುಕೊಂಡಿದೆ. ಈ ನಿರ್ಧಾರದಡಿಯಲ್ಲಿ, ಚೀನಾದ ಕಂಪೆನಿಗಳು ಇನ್ನು ಮುಂದೆ ಸರ್ಕಾರಿ ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಆದರೆ, ಸರ್ಕಾರದ ಈ ನಿರ್ಧಾರ ಭಾರತದ ಭೂಗಡಿಯ ಹೊಂದಿಕೊಂಡಂತೆ ಇರುವ ದೇಶಗಳ ಮೇಲೂ ಕೂಡ ಪ್ರಭಾವ ಬೀರಲಿದೆ. ಭಾರತದ ಭೂಗಡಿಗೆ ಸಂಪರ್ಕ ಹೊಂದಿರುವ ದೇಶಗಳ ಕಂಪೆನಿಗಳು ಸರ್ಕಾರದ ಖರೀದಿ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವಂತಿಲ್ಲ ಎಂದು ಹಣಕಾಸು ಸಚಿವಾಲಯ ಆದೇಶದಲ್ಲಿ ಹೇಳಲಾಗಿದೆ. ಭಾರತದ ರಕ್ಷಣಾ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರದ ಖರೀದಿ ಕುರಿತು ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಖರ್ಚು-ವೆಚ್ಚಗಳ ವಿಭಾಗ ಈ ವಿಸ್ತೃತ ಆದೇಶ ಹೊರಡಿಸಿದೆ.

ಆದೇಶದ ಪ್ರಕಾರ ಮೇಲೆ ಸೂಚಿಸಲಾಗಿರುವ ದೇಶಗಳ ಯಾವುದೇ ಬಿಡರ್  ಸರ್ಕಾರಿ ಪ್ರಕ್ರಿಯೆಯಲ್ಲಿ ತನ್ನ ಪಕ್ಷ ಮಂಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಅವರು ಸಕ್ಷಮ್ ಪ್ರಾಧಿಕಾರದಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು. ಹೆಸರು ನೋಂದಣಿಗಾಗಿ ಸಕ್ಷಮ್ ಪ್ರಾಧಿಕಾರ, ಕೈಗಾರಿಕಾ ಹಾಗೂ ಆಂತರಿಕ ವ್ಯಾಪಾರ ವಿಭಾಗ (DPIIT) ಹಾಗೂ ರಿಜಿಸ್ಟ್ರೇಷನ್ ಕಮೀಟಿ ರಚಿಸಲಿದೆ. ತಮ್ಮ ಬಿಡ್ ಮಂಡಿಸಲು ಕಂಪನಿಗಳಿಗೆ ವಿದೇಶಾಂಗ ಹಾಗೂ ಗೃಹ ಸಚಿವಾಲಯದಿಂದ ರಾಜತಾಂತ್ರಿಕ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಮಂಜೂರಾತಿ ಪಡೆಯುವುದು ಕಡ್ಡಾಯವಾಗಿದೆ.

ರಾಜ್ಯಗಳ ಖರೀದಿ ಪ್ರಕ್ರಿಯೆ ಕೂಡ ಇದರ ವ್ಯಾಪ್ತಿಗೆ ಬರಲಿದೆ
ಸರ್ಕಾರಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿಪಿಎಸ್‌ಇಗಳು) ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಗಳು, ಸರ್ಕಾರದಿಂದ ಅಥವಾ ಅದರ ಸಂಸ್ಥೆಗಳಿಂದ ಧನಸಹಾಯ ಪಡೆದ ಕಂಪನಿಗಳು ಈ ಆದೇಶದ ವ್ಯಾಪ್ತಿಗೆ ಬರಲಿವೆ. ಭಾರತದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಯಲ್ಲಿ ರಾಜ್ಯ ಸರ್ಕಾರಗಳದ್ದು ಕೂಡ ಪ್ರಮುಖ ಪಾತ್ರವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದ್ದು, ಪತ್ರದಲ್ಲಿ ಈ ಕುರಿತಾದ ಆದೇಶವನ್ನು ಜಾರಿಗೆ ತರಲು ಭಾರತ ಸಂವಿಧಾನದ  257 (1) ನೇ ವಿಧಿಯನ್ನು ಜಾರಿಗೆ ತರಲು ರಾಜ್ಯಸರ್ಕಾರಗಳಿಗೆ ಸೂಚಿಸಲಾಗಿದೆ. ರಾಜ್ಯಗಳ ಮಟ್ಟದಲ್ಲಿಯೂ ಕೂಡ ಸಕ್ಷಮ್ ಪ್ರಾಧಿಕಾರ ರಚಿಸಲಾಗುವುದು. ಆದರೆ, ಇದಕ್ಕಾಗಿ ರಾಜತಾಂತ್ರಿಕ ಹಾಗೂ ಭದ್ರತೆಯ ಅನುಮತಿ ಅಗತ್ಯವಾಗಿದೆ.

Trending News